ಕರ್ನಾಟಕದ ವಿಶೇಷ ಮಾಹಿತಿಗಳು ಮುಂಬರಲಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ.
ಕರ್ನಾಟಕದ ವಿಶೇಷ ಮಾಹಿತಿಗಳು :
1. ಕರ್ನಾಟಕದ ಆದಿ ಕವಿ ಯಾರು ?
– ಪಂಪ
2. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಯಾವುದು ?
– ಕರ್ನಾಟಕ ರತ್ನ
3. ಕರ್ನಾಟಕದ ವರಕವಿ ಯಾರು ?
– ದತ್ತಾತ್ರೇಯ ರಾಮಚಂದ್ರ ಬೇಂದ್ರೆ
4. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ?
– ಕೃಷ್ಣಾ ಮೇಲ್ದಂಡೆ ಯೋಜನೆ
5. ಭಾರತದ ಅತಿ ಎತ್ತರದ ಜಲಪಾತ ಯಾವುದು ?
– ಜೋಗ ಜಲಪಾತ
6. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು ?
– ಗೋಳಗುಮ್ಮಟ ಇದು ವಿಜಯಪುರದಲ್ಲಿದೆ
7. ಭಾರತದ ಅತಿ ಎತ್ತರದ ವಿಗ್ರಹ ಯಾವುದು ?
– ಗೊಮ್ಮಟೇಶ್ವರ ವಿಗ್ರಹ 58 ಅಡಿ ಎತ್ತರದಲ್ಲಿದೆ ಇದು ಹಾಸನ ಜಿಲ್ಲೆಯಲ್ಲಿದೆ
8. ಕರ್ನಾಟಕದ ದೊಡ್ಡ ನಗರ ಯಾವುದು ?
– ಬೆಂಗಳೂರು
9. ಕರ್ನಾಟಕದ ದೊಡ್ಡ ದೇವಾಲಯ ಯಾವುದು ?
– ಶ್ರೀಕಂಠೇಶ್ವರ ದೇವಾಲಯ ,
ನಂಜನಗೂಡು
10. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ ಯಾವುದು ?
– ವಿಧಾನಸಭೆ, ಬೆಂಗಳೂರು
11. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?
– ಮುಳ್ಳಯ್ಯನಗಿರಿ ಬೆಟ್ಟ, ಚಿಕ್ಕಮಗಳೂರು.
12. ಕರ್ನಾಟಕದ ದೊಡ್ಡ ಬಂದರು ಯಾವುದು ?
– ನವ ಮಂಗಳೂರು ಬಂದರು
13. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು ?
– ರಂಗನತಿಟ್ಟು ಪಕ್ಷಿಧಾಮ.
14. ಕರ್ನಾಟಕದ ಪ್ರಮುಖ ಪ್ರಸಿದ್ಧ ಗಿರಿಧಾಮಗಳು ಯಾವುವು ?
– ನಂದಿ ಬೆಟ್ಟ ಮತ್ತು ಕೆಮ್ಮಣ್ಣುಗುಂಡಿ
15. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು ?
– ಶರಾವತಿ ನದಿ
16. ಕರ್ನಾಟಕದಲ್ಲಿ ಹರಿಯುವ ಉದ್ದವಾದ ನದಿ ಯಾವುದು ?
– ಕೃಷ್ಣಾ ನದಿ
17. ಕರ್ನಾಟಕದ ಪವಿತ್ರ ನದಿ ಯಾವುದು ?
– ಕಾವೇರಿ ನದಿ
18. ಕರ್ನಾಟಕದಲ್ಲಿ ನೋಟು ಮುದ್ರಣಾಲಯ ಹೊಂದಿರುವ ನಗರ ಯಾವುದು ?
– ಮೈಸೂರು
19. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ?
– ಕೃಷ್ಣಾ ಮೇಲ್ದಂಡೆ ಯೋಜನೆ
20. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಯಾವುದು ?
– ಪಂಪ ಪ್ರಶಸ್ತಿ
21. ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ,ಕರ್ನಾಟಕ ರತ್ನ ಪ್ರಶಸ್ತಿ, ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದವರು ಯಾರು ?
– ಕುವೆಂಪು
22. ಭಾರತದ ಉಪರಾಷ್ಟ್ರಪತಿಯಾದ ಮೊದಲ ಕನ್ನಡಿಗ ಯಾರು ?
– B. D ಜತ್ತಿ
23. ಕರ್ನಾಟಕದಿಂದ ಪ್ರಧಾನಮಂತ್ರಿಯಾದ ಏಕೈಕ ವ್ಯಕ್ತಿ ಯಾರು ?
– ದೇವೇಗೌಡರು
24. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು ಯಾರು ?
– ರಾಜಕುಮಾರ್ ಮತ್ತು ವಿಕೆ ಮೂರ್ತಿ.
25. ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ?
– ಮೈಸೂರು ವಿಶ್ವವಿದ್ಯಾಲಯ
26. ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಯಾವುದು ?
– ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು
27. ಕನ್ನಡದ ಮೊದಲ ಮಹಾಕಾವ್ಯ ಯಾವುದು ?
– ಆದಿಪುರಾಣ
28. ಕನ್ನಡದ ಮೊದಲ ಶಾಸನ ಯಾವುದು ?
– ಹಲ್ಮಿಡಿ ಶಾಸನ
29. ಕರ್ನಾಟಕದ ಉಚ್ಚ ನ್ಯಾಯಾಲಯ ಎಲ್ಲಿದೆ ?
– ಬೆಂಗಳೂರು
30. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯಾದಾಗರ ಯಾವುದು ?
– ವರಾಹಿ , ಉಡುಪಿ.
31. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ ಯಾವುದು ?
– ಕೊಡಗು
32. ಬೆಂಗಳೂರು ನಗರದ ನಿರ್ಮಾಪಕರು ಯಾರು ?
– ಕೆಂಪೇಗೌಡರು
33. ಕರ್ನಾಟಕದಲ್ಲಿ ಪ್ರಥಮ ಬ್ಯಾಂಕ್ ಆರಂಭವಾದ ಸ್ಥಳ ಯಾವುದು ?
– ಚಿತ್ರದುರ್ಗ , 1868
34. ವಿಧಾನಸೌಧ ನಿರ್ಮಾಣದ ಕಾರಣಿ ಕರ್ತೃ ಯಾರು ?
– ಕೆಂಗಲ್ ಹನುಮಂತಯ್ಯ
35. ಕರ್ನಾಟಕದ ಅತಿ ದೊಡ್ಡ ವಿಗ್ರಹ ಯಾವುದು ?
– ನಂದಿ ವಿಗ್ರಹ, ಮೈಸೂರು
36. ಕರ್ನಾಟಕದಲ್ಲಿ ಅತಿ ಎತ್ತರದ ” ಸೈಂಟ್ ಫಿಲೋಮಿನಾ ಚರ್ಚ್” ಇರುವುದು ಎಲ್ಲಿ ?
– ಮೈಸೂರು
37. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು ಯಾವುದು ?
– ಅಂಕೋಲಾ, ಉತ್ತರ ಕನ್ನಡ.
38. ಕರ್ನಾಟಕದಲ್ಲಿ ಪ್ರಪ್ರಥಮ ವಿದ್ಯುತ್ ಪಡೆದ ನಗರ ಯಾವುದು ?
– ಬೆಂಗಳೂರು, 1905
39. ಕರ್ನಾಟಕದ ಪ್ರಥಮ ಕಾಲೇಜು ಯಾವುದು ?
– ಸೆಂಟ್ರಲ್ ಕಾಲೇಜು, ಬೆಂಗಳೂರು, 1864ರಲ್ಲಿ
40. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದವರು ಯಾರು ?
– ಅರ್ಡಿ ಕರ್ ಮಂಜಪ್ಪ
41. ಹತ್ತಿ ಗಿರಣಿಗಳಿಗೆ ಪ್ರಸಿದ್ಧಿ ಹೊಂದಿರುವ ಊರು ಯಾವುದು ?
– ದಾವಣಗೆರೆ
42. ಭಾರತದ ಪ್ರಥಮ ದಂಡನಾಯಕ ರಾಗಿದ್ದ ಕರ್ನಾಟಕದವರು ಯಾರು ?
– ಜನರಲ್ ಕಾರ್ಯಪ್ಪ
43. ಜೈನರ ಕಾಶಿ ಯಾವುದು ?
– ಮೂಡಬಿದಿರೆ
44. ಮೈಸೂರು ಅರಸರ ಮೊದಲ ರಾಜಧಾನಿ ಯಾವುದು ?
– ಶ್ರೀರಂಗಪಟ್ಟಣ
45. ಕಣ್ಣಿನ ಶಸ್ತ್ರ ಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ ಯಾರು ?
– M.C ಮೋದಿ
46. ಕರ್ನಾಟಕದ ಅತಿ ಎತ್ತರದ ಅಣೆಕಟ್ಟು ಯಾವುದು ?
– ಸೂಪಾ ಅಣೆಕಟ್ಟು, ಉತ್ತರ ಕನ್ನಡ
47. ಏಷ್ಯಾದಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪ ಹೊಂದಿರುವುದು ಯಾವುದು ?
– ಕುದುರೆಮುಖ , ಚಿಕ್ಕಮಗಳೂರು
48. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು ?
– K. C ರೆಡ್ಡಿ
49. ಕನ್ನಡದ ಮೊದಲ ಮುದ್ರಣ ಯಂತ್ರವನ್ನು ಎಲ್ಲಿ ಆರಂಭಿಸಲಾಯಿತು ?
– ಬೆಂಗಳೂರಿನಲ್ಲಿ
50. ರಗಳೆ ಕವಿ ಯಾರು ?
– ಹರಿಹರ