Contents
show
ಭಾರತದ ಅರ್ಥಶಾಸ್ತ್ರ – 03
1. ರಷ್ಯಾ ದೇಶವು ವಿಶ್ವ ವ್ಯಾಪಾರ ಸಂಸ್ಥೆಗೆ (WTO) ಸೇರಿದ್ದು ಯಾವಾಗ ?
– 22 ಆಗಸ್ಟ್ 2012ರಲ್ಲಿ, 156ನೇ ರಾಷ್ಟ್ರವಾಗಿ ಸೇರ್ಪಡೆಗೊಂಡಿದೆ
2. ರೆಪೋ ರೇಟ್ ಅನ್ನು ನಿಗದಿಪಡಿಸುವ ಸಂಸ್ಥೆ ಯಾವುದು ?
– ಭಾರತೀಯ ರಿಸರ್ವ್ ಬ್ಯಾಂಕ್
3. ಭಾರತದ ಕಮಾಡಿಟಿ ವಸ್ತುಗಳ ಮಾರುಕಟ್ಟೆ ನಿಯಂತ್ರಕರು ಯಾರು ?
– ಫಾರ್ವರ್ಡ್ ಮಾರ್ಕೆಟ್ ಕಮಿಷನ್
4. ಟರ್ನ್ಓವರ್ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಯಾವುದು ?
– NSE (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್)
5. ಭಾರತದ ವಿಮಾನಿಯಂತ್ರಕ ಸಂಸ್ಥೆ ಎಲ್ಲಿದೆ ?
– ಹೈದರಾಬಾದ್
6. ಮೊದಲನೇ ಪಂಚವಾರ್ಷಿಕ ಯೋಜನೆ ಯಾವ ಮಾದರಿಯಲ್ಲಿದೆ ?
– ಹೆರಾಲ್ಡ್ ಡೊಮರ್ ಮಾದರಿ
– ಹೆಚ್ಚಾಗುತ್ತಿರುವ ಉತ್ಪಾದನಾ ವೆಚ್ಚ
8. ಮಕ್ಕಳ ಲೈಂಗಿಕ ಅನುಪಾತದ ಗಣನೆಗೆ ತೆಗೆದುಕೊಳ್ಳಲಾದ ವಯೋಮಾನ ಎಷ್ಟು ?
– O ಯಿಂದ 06 ವರ್ಷದವರೆಗೆ
9. ಇ – ವಾಣಿಜ್ಯ ಎಂದರೇನು ?
– ಅಂತರ್ಜಾಲದಲ್ಲಿ ಇ -ಉತ್ಪನ್ನಗಳ ಮತ್ತು ಸೇವೆಗಳ ಖರೀದಿ ಮತ್ತು ಮಾರಾಟ
10. ಚಲಾವಣ ನಾಣ್ಯಗಳ ಪರಿವರ್ತನೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು ಯಾವಾಗ ?
– ಬ್ರಿಟನ್ ವೂಡ್ಸ್ ಒಪ್ಪಂದದಿಂದ
11. ಭಾರತದಲ್ಲಿ ಏರ್ ಕ್ರಾಫ್ಟ್ ಕೈಗಾರಿಕೆ ಎಲ್ಲಿದೆ ?
– ಬೆಂಗಳೂರಿನಲ್ಲಿದೆ
12. ಭಾರತದಲ್ಲಿ ಹೆಚ್ಚಿನ ತೈಲ ಶುದ್ದೀಕರಣ ಗಳ ಮಾಲೀಕತ್ವವನ್ನು ಹೊಂದಿರುವಂತಹ ಸಂಸ್ಥೆ ಯಾವುದು ?
– IOCL ಇಂಡಿಯನ್ ಆಯಿಲ್ ಕಾರ್ಪೊರೇಷನ್.
13. ಅತಿ ಹೆಚ್ಚು ಗ್ರಾಮೀಣ ಬ್ಯಾಂಕುಗಳನ್ನು ಹೊಂದಿರುವ ರಾಜ್ಯ ಯಾವುದು ?
– ಉತ್ತರ ಪ್ರದೇಶ
14. SEBI (security exchange board of India) ವನ್ನು ಆರಂಭಿಸಿದ ವರ್ಷ ಯಾವುದು ?
– 1992 ರಲ್ಲಿ
15. ಭಾರತದ ಯೋಜನಾ ಆಯೋಗ ಸ್ಥಾಪಿತವಾದದ್ದು ಯಾರಿಂದ ?
– ಕೇಂದ್ರ ಸರ್ಕಾರದ ಕಾರ್ಯನಿರ್ವಾಹಕ ಆದೇಶದಿಂದ
16. ಕೇಂದ್ರ ಸರ್ಕಾರದ ಮುಖ್ಯ ಆದಾಯ ಮೂಲ ಯಾವುದು ?
– ಕಸ್ಟಮ್ ತೆರಿಗೆ
17. ಪರಸ್ಪರ ಹೂಡಿಕೆ ಮತ್ತು ಶೇರು ಮಾರುಕಟ್ಟೆ ನಿಯಂತ್ರಕರು ಯಾರು ?
– SEBI (security exchange board of India)
– ಬಂಡವಾಳ ಪಾರ್ಯಪ್ತಿ ಯ ಅನುಪಾತ
19. ಸವಕಳಿ ಎಂದರೇನು ?
– ಯಂತ್ರಗಳ ಬಳಕೆಯಿಂದ ಆಗುವ ನಷ್ಟ
20.(GST )ಜಿಎಸ್ಟಿಯ ಪೂರ್ಣ ರೂಪ ಏನು ?
– goods and service tax
21. ಆರ್ಥಿಕ ವ್ಯವಸ್ಥೆಯ ಅಂಶವನ್ನು ತಿಳಿಸುವುದು ಯಾವುದು ?
– ಉತ್ಪಾದನೆ ಮತ್ತು ಹಂಚಿಕೆಯ ಸ್ವರೂಪ
22. ಆ ಪರೋಕ್ಷ ತೆರಿಗೆ ಯಾವುದು, ಗುರುತಿಸಿ ?
– ಅಬಕಾರಿ ತೆರಿಗೆ ಮತ್ತು ವಾಣಿಜ್ಯ ತೆರಿಗೆ.
23. ಭಾರತದ ಮಂಗಡ ಪತ್ರ ಏನನ್ನು ಒಳಗೊಂಡಿದೆ ?
– ಮುಂಬರಲಿರುವ ವರ್ಷದ ಅಂದಾಜು ವೆಚ್ಚ ಮತ್ತು ಇಂದಿನ ವರ್ಷದ ನೈಜ ಅಂಕಿ ಸಂಖ್ಯೆ ಹಾಗೂ ಸದರಿ ವರ್ಷದ ಪರಿಷ್ಕೃತ ಅಂದಾಜು ಪಟ್ಟಿ.
24. ಭಾರತೀಯ ರೂಪಾಯಿಗೆ ಕರೆನ್ಸಿ ಚಿನ್ನೆಯನ್ನು ಯಾವ ವರ್ಷದಿಂದ ಜಾರಿಗೆ ತರಲಾಯಿತು ?
– 2010 ರಿಂದ
25. ಭಾರತದ ಬಾಕಿ ಪಾವತಿಯ ಡೆಬಿಟ್ ನಮೋದಿಸುವಿಕೆ ಯಾವುದು ?
– ಹೊರದೇಶಗಳಲ್ಲಿ ಭಾರತೀಯರ ಧನ ವಿನಿಯೋಗದ ಆದಾಯ
26. ಅರ್ಥಶಾಸ್ತ್ರದಲ್ಲಿ “ವಿಸ್ತರಣೆಯ ಆರ್ಥಿಕ ನೀತಿಯನ್ನು” ವಿವರಿಸಲು ಬಳಸುವ ಪದ ಯಾವುದು ?
– ಹೆಲಿಕ್ಯಾಪ್ಟರ್ ಡ್ರಾಪ್ ಆಫ್ ಮನಿ
27. ನೋಟು ಅಮಾನ್ಯಿಕರಣ ಮೊದಲ ಬಾರಿಗೆ ಯಾವಾಗ ಮಾಡಲಾಯಿತು ?
– 1946 ರಲ್ಲಿ
28. ಚೈನಾ ದೇಶವು ವಿಶ್ವ ವಾಣಿಜ್ಯ ಸಂಘಟನೆಗೆ ಯಾವಾಗ ಸೇರಿತು ?
– 2001 ರಲ್ಲಿ
29. GTI ನ ಪೂರ್ಣ ರೂಪ ಏನು ?
– global terrorism index
30. ಆರ್ಥಿಕ ಯೋಜನೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಪಡೆಯಲಾಗಿದೆ ?
– ರಷ್ಯಾ ದೇಶದಿಂದ
31. ಆರ್ಥಿಕ ದೃಷ್ಟಿಯಿಂದ ವಿದೇಶಿಯರು ಆರೋಗ್ಯದ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುವುದು ಒಂದು ರೀತಿಯಲ್ಲಿ ?
– ರಫ್ತು ಆಗಿದೆ
32. ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯ ಅತ್ಯುತ್ತಮ ಸೂಚಕ ಯಾವುದು ?
– ಆ ದೇಶದಲ್ಲಿನ ತಲಾ ಆದಾಯ
33. ಭಾರತದ ರಾಷ್ಟ್ರೀಯ ಆದಾಯದ ಅಂದಾಜಿನ ಮಾಹಿತಿಯನ್ನು ಯಾವ ಸಂಸ್ಥೆ ಪ್ರಕಟಿಸುತ್ತದೆ ?
– ಕೇಂದ್ರೀಯ ಸಾಂಖ್ಯಿಕ ಸಂಸ್ಥೆ
34. ಭದ್ರತಾ ಸಭೆಯಲ್ಲಿ ಶಾಶ್ವತ ಸದಸ್ಯತ್ವ ಹೊಂದಿದ ರಾಷ್ಟ್ರಗಳ ಸಂಖ್ಯೆ ಎಷ್ಟು ?
– 05 ರಾಷ್ಟ್ರಗಳು
35. ಹಣಕಾಸಿನ ಸ್ಥಿರತೆ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ ?
– ಭಾರತೀಯ ರಿಸರ್ವ್ ಬ್ಯಾಂಕ್
36. ಪೌಷ್ಟಿಕಾಂಶಗಳ ಬಗೆಗಿನ ವರದಿಯನ್ನು ಯಾವ ಸಂಸ್ಥೆ ನೀಡುತ್ತದೆ ?
– ವಿಶ್ವ ಬ್ಯಾಂಕ್
37. ಕೈಗಾರಿಕಾ ಉದ್ಯೋಗಿಗಳಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ನಿಗದಿಪಡಿಸುವ ಸಂಸ್ಥೆ ಯಾವುದು ?
– ಲೇಬರ್ ಬ್ಯುರೋ
38. “ಅಶೋಕ್ ಲವಸ್ ಸಮಿತಿಯು” ಯಾವುದಕ್ಕೆ ಸಂಬಂಧಿಸಿದೆ ?
– ಏಳನೇ ವೇತನ ಆಯೋಗದ ಪುನರ್ ಪರಿಶೀಲನೆಗಾಗಿ ನೇಮಕ ಮಾಡಿದ ಆಯೋಗ
39. “ಊಬ್ಬರ ಮಂದ ಸ್ಥಿತಿ” ಎಂದರೇನು ?
– ಕುಸಿತದೊಂದಿಗಿನ ಹಣದುಬ್ಬರ
– ಸರಕು ಮತ್ತು ಸೇವೆಗಳ ಪೂರೈಕೆಯ ತುಲನೆಯಲ್ಲಿ ಹಣ ಪೂರೈಕೆಯ ಕೊರತೆ
– ಕನಿಷ್ಠ ಪ್ರಮಾಣದಲ್ಲಿ ಸ್ಥಿತಿಸ್ಥಾಪಕತ್ವವುಳ್ಳದ್ದು
42. GNP ಮತ್ತು GDP ಯ ವ್ಯತ್ಯಾಸವನ್ನು ಯಾವುದರಿಂದ ಅಳೆಯಲಾಗುತ್ತದೆ ?
– ಸವಕಳಿ( ಡಿಪ್ರಿಸೆಶನ್) ಇಂದ
43. ಏಷ್ಯಾದ ಮತ್ತು ಭಾರತದ ಅತಿ ಹಳೆಯ ಷೇರು ವಿನಿಮಯ ಕೇಂದ್ರ ಯಾವುದು ?
– BSE (Bombay stock exchange)
44. NSE (National stock exchange) ಸ್ಥಾಪನೆಯಾದ ವರ್ಷ ಯಾವುದು ?
– 1993 ರಲ್ಲಿ
45. LIC (Life insurance corporation of India) ಸ್ಥಾಪನೆಯಾದ ವರ್ಷ ಯಾವುದು ?
– 1956, ಮುಂಬೈನಲ್ಲಿ
46. ಭಾರತದ ಮೊಟ್ಟ ಮೊದಲ ಅಭಿವೃದ್ಧಿ ಹಣಕಾಸು ಸಂಸ್ಥೆ ಯಾವುದು ?
– IFCI (industrial finance corporation of India)
47. ಸಣ್ಣ ಕೈಗಾರಿಕಗಳಿಗೆ ಅಗತ್ಯವಿರುವ ಅಲ್ಪಾವಧಿ ಸಾಲ ಮತ್ತು ಮರು ಹಣಕಾಸು ಸೌಲಭ್ಯವನ್ನು ಒದಗಿಸುವ ಸಂಸ್ಥೆ ಯಾವುದು ?
– SIDBI (small scale industrial development Bank of India)
48. (Inflation) ಹಣದುಬ್ಬರ ಎಂದರೇನು ?
– ಆರ್ಥಿಕತೆಯಲ್ಲಿ ವಸ್ತುಗಳ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿದ್ದು ಹಣದ ಮೌಲ್ಯವು ಕಡಿಮೆಯಾಗುವ ಸನ್ನಿವೇಶ.
49. “ಮರೆಮಾಚಿದ ನಿರುದ್ಯೋಗ “ಎಂದರೇನು ?
– ಅಗತ್ಯವಿರುವುದಕ್ಕಿಂತ ಹೆಚ್ಚು ಜನ ಒಂದು ನಿರ್ದಿಷ್ಟ ಕೆಲಸದಲ್ಲಿ ಒಂದೇ ಸಮಯದಲ್ಲಿ ತೊಡಗಿರುವುದು
50. NITI ಆಯೋಗದ ಪೂರ್ಣ ರೂಪವೇನು ?
– National institution for transforming in India .