Skip to content
ಭಾರತದ ಇತಿಹಾಸ : ಈ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.
1. ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ ಯಾವುದು?
– 1924
2. ಸಿಂಧೂ ನಾಗರಿಕತೆಯ ಪ್ರಸಿದ್ಧ ನಿವೇಶನಗಳಲ್ಲೊಂದಾದ ಲೋಥಲನ್ನು ಉತ್ಕನನ ಮಾಡಿದವರು ಯಾರು ?
– ಎಸ್ ಆರ್ ರಾವ್
3. ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ ಯಾವುದು ?
– ಇಂದ್ರ
4. ಅಶೋಕನು ಮೂರನೇ ಬೌದ್ಧ ಸಮ್ಮೇಳನ ನಡೆಸಿದ ಸ್ಥಳ ಯಾವುದು?
– ಪಾಟಲಿಪುತ್ರ
5. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರು ಯಾರು ?
– ಕಲ್ಯಾಣ ಸ್ವಾಮಿ
6. ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ ಯಾವುದು ?
– ಬೆಂಗಳೂರು
7. ಕರ್ನಾಟಕದಲ್ಲಿ ನಡೆದ ಸತ್ಯಾಗ್ರಹದಲ್ಲಿ “ಕರ್ನಾಟಕದ ಬಾರ್ಡೋಲಿ” ಎಂದು ಜನಪ್ರಿಯವಾಗಿದ್ದ ಸ್ಥಳ ಯಾವುದು ?
– ಅಂಕೋಲ
8. ಮೈಲಾರ ಮಹಾದೇವಪ್ಪ ಯಾವ ಚಳುವಳಿಯಲ್ಲಿ ಭಾಗವಹಿಸಿದ್ದರು ?
– ಉಪ್ಪಿನ ಸತ್ಯಾಗ್ರಹ
9. ಜಸ್ಟೀಸ್ ಪಕ್ಷವು ಬ್ರಾಹ್ಮಣೇತರ ಚಳುವಳಿ ಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿತು ?
– ಮದ್ರಾಸ್
10. ರಾಸ್ ಬಿಹಾರಿ ಬೋಸ್ ಅಧ್ಯಕ್ಷತೆ ವಹಿಸಿದ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ಯಾವುದು ?
– ಸೂರತ್
11. ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು ಯಾರು ?
– ಚಿತ್ತರಂಜನ್ ದಾಸ್
12. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಒಕ್ಕೂಟವನ್ನು ಪ್ರಾರಂಭಿಸಿದವರು ಯಾರು ?
– ಮಹಾತ್ಮ ಗಾಂಧೀಜಿ
13. ಕರ್ನಾಟಕದ ಬಗ್ಗೆ ಮೊಟ್ಟ ಮೊದಲ ಸೂಚ್ಯ ಉಲ್ಲೇಖ ಯಾವ ಗ್ರಂಥದಲ್ಲಿದೆ ?
– ಮಹಾಭಾರತ
14. ಗಂಗರ ಮೊದಲ ರಾಜಧಾನಿ ಯಾವುದು ?
– ಕೋಲಾರ
15. “ವೇದಮಾರ್ಗ ಪ್ರತಿಷ್ಠಾಪಕ” ಎಂಬ ಬಿರುದನ್ನು ಧರಿಸಿದ್ದ ವಿಜಯನಗರದ ದೊರೆ ಯಾರು ?
– ಮೊದಲನೇ ಬುಕ್ಕರಾಯ
16. “ನ್ಯೂನಿಜ್” ಎಂಬ ಪೋರ್ಚುಗೀಸ್ ಪ್ರವಾಸಿ ಯಾರ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದನು ?
– ಅಚ್ಯುತರಾಯ
17. ಮಹಮ್ಮದ್ ಗವಾನರು ತನ್ನ ಪ್ರಸಿದ್ಧವಾದ ಮದರಸವನ್ನು ಯಾವ ಸ್ಥಳದಲ್ಲಿ ಕಟ್ಟಿಸಿದರು ?
– ಬೀದರ್
18. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ ಯಾರು ?
– ಚಿಕ್ಕ ದೇವರಾಜ ಒಡೆಯರ್
19. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು ?
– ಮಂಗಳೂರು ಒಪ್ಪಂದ
20. ರಾಜ್ಯ ಜೀವ ವಿಮಾ ಯೋಜನೆ ಯಾರ ದಿವಾನಗಿರಿ ಯಲ್ಲಿ ಜಾರಿಗೆ ಬಂದಿತು ?
– ಶೇಷಾದ್ರಿ ಅಯ್ಯರ್
21. ಸಿಂಧೂ ನಾಗರಿಕತೆಯ ಮೊಟ್ಟಮೊದಲ ಆವಶೇಷಗಳು ಉತ್ಕನನವಾದ ಸ್ಥಳ ಯಾವುದು ?
– ಹರಪ್ಪ
22. ಜಾತಿ ವ್ಯವಸ್ಥೆಯ ಉಗಮದ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ ?
– ಋಗ್ವೇದದಲ್ಲಿ
23. ಬುದ್ಧನು ತನ್ನ ಮೊಟ್ಟಮೊದಲ ಧರ್ಮ ಪ್ರವಚನವನ್ನು ನಡೆಸಿದ ಸ್ಥಳ ಯಾವುದು ?
– ಸಾರಾನಾಥ್
24. ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ಸುವರ್ಣಗಿರಿ ಯಾವ ಪ್ರಾಂತ್ಯದ ರಾಜಧಾನಿಯಾಗಿತ್ತು ?
– ದಕ್ಷಿಣ ಪ್ರಾಂತ್ಯ
25. ಹರ್ಷವರ್ಧನನ ಮೊದಲನೇ ರಾಜಧಾನಿ ಯಾವುದು ?
– ಥಾಣೇಶ್ವರ
26. ಮಹಾಬಲಿ ಪುರಂನಲ್ಲಿರುವ ಕಡಲ ತೀರ ದೇವಾಲಯವನ್ನು ಕಟ್ಟಿಸಿದವರು ಯಾರು ?
– ಮೊದಲನೇ ನರಸಿಂಹವರ್ಮನ್
27. ಮಾರುಕಟ್ಟೆಯ ನಿಯಂತ್ರಣಗಳನ್ನು ಜಾರಿಗೆ ತಂದ ದೆಹಲಿಯ ಸುಲ್ತಾನ ಯಾರು ?
– ಅಲ್ಲಾ ಉದ್ದಿನ್ ಖಿಲ್ಜಿ
28. ಆಗ್ರಾ ನಗರದ ಸಂಸ್ಥಾಪಕರು ಯಾರು ?
– ಸಿಕಂದರ್ ಲೋದಿ
29. ಶಿವಾಜಿ ಕಾಲದ ಮರಾಠ ಆಡಳಿತ ವ್ಯವಸ್ಥೆಯಲ್ಲಿ ಪೇಶ್ವೆಯು ಯಾವುದರ ಉಸ್ತುವಾರಿಯನ್ನು ಹೊಂದಿದ್ದನು ?
-ಸಾಮಾನ್ಯ ಆಡಳಿತ
30. ಕಾನ್ಪುರದ 1857ರ ದಂಗೆಯ ಮುಂದಾಳತ್ವವನ್ನು ವಹಿಸಿದವರು ಯಾರು ?
– ನಾನಾ ಸಾಹೇಬ.
Post navigation