Skip to content
ಭಾರತದ ಸಂವಿಧಾನ -06
1. ಭಾರತದಲ್ಲಿ ಯಾರು ರಾಜ್ಯದ “ಕಾರ್ಯನಿರ್ವಹಣಾ” ಮುಖ್ಯಸ್ಥರು ಆಗಿರುತ್ತಾರೆ ?
– ರಾಜ್ಯಪಾಲರು
2. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ರಾಜೀನಾಮೆಯನ್ನು ಸಲ್ಲಿಸಬೇಕಾದರೆ ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕು ?
– ಭಾರತದ ರಾಷ್ಟ್ರಪತಿಯವರಿಗೆ
3. ಭಾರತದ ರಾಷ್ಟ್ರಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ?
– ಉಪರಾಷ್ಟ್ರಪತಿಯವರಿಗೆ
4.ರಾಜ್ಯಸಭಾ ಸದಸ್ಯನಾಗಬೇಕಾದರೆ ಕನಿಷ್ಠ, ಎಷ್ಟು ವರ್ಷ ವಯಸ್ಸಾಗಿರಬೇಕು ?
– 30 ವರ್ಷ
5. ಭಾರತವನ್ನು ಗಣರಾಜ್ಯವೆಂದು ಘೋಷಿಸಿದ್ದು ಯಾವಾಗ ?
1950 ಜನವರಿ 26
6. ಭಾರತದಲ್ಲಿ ಪ್ರಥಮ ಚುನಾವಣೆ ನಡೆದ ವರ್ಷ ಯಾವುದು ?
– 1952
7. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಖಾತರಿಗೊಳಿಸುವುದು ಯಾವುದು ?
– ಭಾರತದ ಸಂವಿಧಾನ
8. ಯಾವ ವಯೋಮಿತಿ ಯವರಿಗೆ ಸಂವಿಧಾನದ ಅಡಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತದೆ ?
– 6 ರಿಂದ 14 ವರ್ಷದೊಳಗಿನ ಮಕ್ಕಳು
9. ಪಂಚಾಯಿತಿಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಪ್ರಮಾಣ ಎಷ್ಟು ?
– 50%
10. ಸಂವಿಧಾನದ ಮೂಲಭೂತ ಹಕ್ಕು ಈ ಕೆಳಗಿನ ಯಾವುದು ಆಗಿರುವುದಿಲ್ಲ ?
– ಆಸ್ತಿಯ ಹಕ್ಕು
11. ಕಾನೂನು – ಸುವ್ಯವಸ್ಥೆ ವಿಷಯ ಭಾರತ ಸಂವಿಧಾನದ ಯಾವ ಪಟ್ಟಿಯಲ್ಲಿ ಇದೆ ?
– ರಾಜ್ಯ ಪಟ್ಟಿ
12. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
13. ಮಾನವ ಹಕ್ಕುಗಳ ಉಲ್ಲಂಘನೆಯ ಮೇಲ್ವಿಚಾರಕರು ಯಾರು ?
– ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
14. ಪಂಚಾಯತ್ ರಾಜ್ ವ್ಯವಸ್ಥೆ ಯಾವ ತತ್ವಗಳ ಮೇಲೆ ಆಧಾರಿತವಾಗಿದೆ ?
– ಪ್ರಜಾಪ್ರಭುತ್ವ ವಿಕೇಂದ್ರೀಕರಣ
15. ಭಾರತದ ಮೂರು ಸೇನಾ ಪಡೆಗಳ ಮಹಾದಂಡ ನಾಯಕ ಯಾರು ?
– ರಾಷ್ಟ್ರಪತಿಗಳು
16. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರಕ್ಕೆ ಸಂದೇಶವನ್ನು ನೀಡುವರು ಯಾರು ?
– ಭಾರತದ ಪ್ರಧಾನ ಮಂತ್ರಿಗಳು
17. “In cameral Trial “ಎಂದರೇನು ?
– ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಸಂಬಂಧಪಟ್ಟವರು ಮಾತ್ರ ಭಾಗವಹಿಸುವ ನಡಾವಳಿಗಳು
18. ಭಾರತದ ಸಂವಿಧಾನದಲ್ಲಿ ನಮೂದಿಸಲಾದ ಮೂಲಭೂತ ಹಕ್ಕುಗಳ ಸಂರಕ್ಷಕರು ಯಾರು ?
– ಸರ್ವೋಚ್ಚ ನ್ಯಾಯಾಲಯ
19. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಮೂಲಭೂತ ಕರ್ತವ್ಯಗಳಿವೆ ?
– 11
20. ಪಂಚಾಯತ್ ರಾಜ್ ಮೂರು ಹಂತದ ಪದ್ಧತಿಯ ಅತ್ಯಂತ ಮೇಲ್ದರ್ಜೆಯಲ್ಲಿರುವ ಸಂಸ್ಥೆ ಯಾವುದು ?
– ಜಿಲ್ಲಾ ಪರಿಷತ್
21. “ಸಾಚಾರ” ಆಯೋಗ ಯಾವುದಕ್ಕೆ ಸಂಬಂಧಿಸಿದೆ ?
– ಮುಸ್ಲಿಂ ಜನಾಂಗ (ಅಲ್ಪ- ಸಂಖ್ಯಾತರ ಸ್ಥಾನಮಾನಕ್ಕೆ)
22. ರಾಜ್ಯ ವಿಧಾನಸಭೆಯ ಮಂತ್ರಿ ಮಂಡಲ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?
– ಮುಖ್ಯಮಂತ್ರಿಗಳು
23. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ?
– 65 ವರ್ಷಗಳು
24. ಭಾರತ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದೆ ?
– 51a ವಿಧಿ
25. ಭಾರತ ಸಂವಿಧಾನದ 24 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ?
– ಬಾಲಕಾರ್ಮಿಕ ನಿಷೇಧ (14 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಿದೆ )
26. “ಮೆಗಲೋ ಪೊಲೀಸ್” ಎಂದರೇನು ?
– ಮಹಾನಗರ ಎಂದರ್ಥ
27. ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ಯಾರು ನಿರ್ವಹಿಸುತ್ತಾರೆ ?
– ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
28. ಭಾರತದ ಸಂವಿಧಾನದಲ್ಲಿ ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೆ ?
– ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇಲ್ಲ
29. ರಾಷ್ಟ್ರೀಯ ಸಮಗ್ರತಾ ಮಂಡಳಿಯ ಅಧ್ಯಕ್ಷರು ಯಾರು ?
– ಪ್ರಧಾನ ಮಂತ್ರಿಗಳು
30. ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ ?
– ಎರಡು ವರ್ಷಗಳು
31. ಭಾರತದ ರಾಷ್ಟ್ರಪತಿಗೆ ಪ್ರಮಾಣವಚನವನ್ನು ಬೋಧಿಸುವರು ಯಾರು ?
– ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
32. ಭಾರತದ ಉಪರಾಷ್ಟ್ರಪತಿಗಳ ಅಧಿಕಾರವಧಿ ಎಷ್ಟು ವರ್ಷ ?
– ಐದು ವರ್ಷ
33. ಸಂಸತ್ತಿನ ಸದಸ್ಯನಲ್ಲದ ,ವ್ಯಕ್ತಿಯು ಮಂತ್ರಿಯಾಗಿ ನೇಮಕವಾದಲ್ಲಿ ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಒಂದು ಸಭೆಗೆ ಆಯ್ಕೆಯಾಗಬೇಕು ?
– ಆರು ತಿಂಗಳು
34. ಲೋಕಸಭೆಯಲ್ಲಿ ಕರ್ನಾಟಕಕ್ಕೆ ಎಷ್ಟು ಸ್ಥಾನಗಳಿವೆ ?
– 28 ಸ್ಥಾನಗಳು
35. ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಒಟ್ಟು ಎಷ್ಟು ಸ್ಥಾನಗಳಿವೆ ?
– 12 ಸ್ಥಾನಗಳು
36. ಬೆಂಗಳೂರು ನಗರದ ಪ್ರಥಮ ಪ್ರಜೆ ಯಾರು ?
– ಮಹಾಪೌರರು
37. ನಮ್ಮ ದೇಶದ ಸಂಸದೀಯ ರೂಪದ ಸರ್ಕಾರ ಯಾವ ದೇಶದಿಂದ ಆಯ್ದುಕೊಳ್ಳಲಾಗಿದೆ ?
– ಯುನೈಟೆಡ್ ಕಿಂಗ್ ಢಮ್
38. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ?
– ಅಮೆರಿಕ ಸಂವಿಧಾನ
39. ಲೋಕಸಭೆಯನ್ನು ರಾಷ್ಟ್ರಪತಿಯವರು ಯಾವ ಶಿಫಾರಸ್ಸಿನ ಮೇರೆಗೆ ವಿಸರ್ಜಿಸಬಹುದು ?
– ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ
40. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಯಾವಾಗ ಜಾರಿಯಾಗಿದೆ ?
– 1993 ರಲ್ಲಿ
41. “ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್” ಪಬ್ಲಿಕ್ ಅಥಾರಿಟಿಗಳಿಗೆ ಯಾವ ರಿಟ್ ಮುಖಾಂತರ ಕರ್ತವ್ಯ ನಿರ್ವಹಿಸಲು ಆದೇಶಿಸುತ್ತದೆ ?
– ಮ್ಯಾಂಡಮಸ್ (ಪರ ಮಾದೇಶ)
42. “ಪಕ್ಷಾಂತರ ವಿರೋಧಿ” ಚಟುವಟಿಕೆಯ ಕುರಿತು ಯಾವ ಅನುಸೂಚಿ ತಿಳಿಸುತ್ತದೆ ?
– ಹತ್ತನೇ ಅನುಸೂಚಿ
43. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವನ್ನು ಯಾರ ಮುಂದೆ ಮಂಡಿಸಲಾಗುತ್ತದೆ ?
– ರಾಷ್ಟ್ರಪತಿಯವರ ಮುಂದೆ
44.ಸಂವಿಧಾನಾತ್ಮಕ ಪರಿಹಾರದ ಹಕ್ಕು ಏನಾಗಿದೆ ?
– ಇದೊಂದು ಮೂಲಭೂತ ಹಕ್ಕಾಗಿದೆ
45. ಯಾವ ಸಮಿತಿಯ ಮುಖ್ಯ ಕರ್ತವ್ಯವೂ ಸಂಸತ್ತಿನಿಂದ ಸರ್ಕಾರಕ್ಕೆ ಹಂಚಿಕೆಯಾಗುವ ಹಣವು , ಬೇಡಿಕೆಯ ವ್ಯಾಪ್ತಿಯೊಳಗೆ ಇರುವುದನ್ನು ಕಂಡು ಹಿಡಿಯಲಾಗಿದೆ ?
– ಸಾರ್ವಜನಿಕ ಲೆಕ್ಕಪತ್ರ ಸಮಿತಿ
46. ಭಾರತದಲ್ಲಿ ಸರ್ಕಾರಿ ಖಜಾನೆಯ ಪಾಲಿಸಿಯನ್ನು ಯಾವುದು ವ್ಯವಸ್ಥಾಪಿಸುತ್ತದೆ ?
– ಭಾರತೀಯ ರಿಸರ್ವ್ ಬ್ಯಾಂಕ್
47. ಹಣಕಾಸಿನ ತುರ್ತುಪರಿಸ್ಥಿತಿಯನ್ನು ಯಾರು ಘೋಷಿಸುವರು ?
– ಭಾರತದ ರಾಷ್ಟ್ರಪತಿಗಳು
48. “ಜಾಗತಿಕ ಮತದಾನದ ಹಕ್ಕು” ಎಂದರೇನು ?
– ದೇಶದ ವಯಸ್ಕ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕು
49. ಯಾವು ದನ್ನು ನ್ಯಾಯಾಲಯಗಳ ಮೂಲಕ ಜಾರಿಗೆ ತರಲು ಆಗುವುದಿಲ್ಲ ?
– ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು
50. ಜನಪ್ರತಿನಿಧಿ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ?
– 1951
Post navigation