Skip to content
PC, PSI EASY GK- 02.
1. ಗಾಳಿಯಲ್ಲಿರುವ ಪ್ರಮುಖ ಘಟಕ ಯಾವುದು ?
– ಸಾರಜನಕ
2. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದ ನೇತೃತ್ವ ವಹಿಸುವವರು ಯಾರು ?
– ಲೋಕಸಭೆಯ ಸ್ಪೀಕರ್
3. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ?
– 65 ವರ್ಷಗಳು
4. ಭಾರತದ ಸ್ವತಂತ್ರ ಸಂಗ್ರಾಮ ಅಥವಾ ಸಿಪಾಯಿ ದಂಗೆ ನಡೆದದ್ದು ಯಾವಾಗ ?
– 1857ರಲ್ಲಿ
5. “ಸ್ಥಳೀಯ ಸರ್ಕಾರಗಳ ಪಿತಾಮಹ” ಎಂದು ಯಾರನ್ನು ಕರೆಯುತ್ತಾರೆ ?
– ಲಾರ್ಡ್ ರಿಪ್ಪನ್
6. “ಮುಸ್ಲಿಂ ಲೀಗ್” ಆರಂಭವಾಗಿದ್ದು ಯಾವಾಗ ?
– 1906 ರಲ್ಲಿ
7. ಮಾಗೋಡು ಜಲಪಾತದ ಉಗಮ ಯಾವ ನದಿಯಿಂದ ಆಗುತ್ತದೆ ?
– ಬೇಡ್ತಿ ನದಿ
8. ಈ ಕೆಳಗಿನವುಗಳಲ್ಲಿ ಜಾಗತೀಕರಣ ತಾಪಮಾನಕ್ಕೆ ಕಾರಣ ಯಾವುದು ?
*ಮೀಥೇನ್
*ವಾಟರ್ ವೇಪರ್
*ಕಾರ್ಬನ್ ಡೈ ಆಕ್ಸೈಡ್ (ಈ ಮೇಲಿನ ಎಲ್ಲವೂ)
9. ಮೊಟ್ಟ ಮೊದಲ ಬಾರಿಗೆ ಯಾವ ಭಾರತೀಯರು ಬ್ರಿಟಿಷ್ ಪಾರ್ಲಿಮೆಂಟಿಗೆ ಆಯ್ಕೆಯಾಗಿದ್ದರು ?
– ದಾದಾಬಾಯಿ ನವರೋಜಿ
10. ಮೌರ್ಯರ ಕಾಲದಲ್ಲಿ ತೆರಿಗೆ ವಂಚನೆಗೆ ಶಿಕ್ಷೆ ಏನು ?
– ಸಾವು
11. ಯಾವ ಮೊಘಲ್ ಚಕ್ರವರ್ತಿಯು ತಂಬಾಕು ಸೇವನೆಯನ್ನು ನಿಷೇಧಿಸಿದರು ?
– ಜಹಂಗೀರ್
12. “ಪಂಜಾಬಿನ ಕೇಸರಿ” ಎಂದು ಯಾರನ್ನು ಕರೆಯಲಾಗುತ್ತದೆ ?
– ಲಾಲಾ ಲಜಪತ್ ರಾಯ್
13. ಹೊಯ್ಸಳರ ರಾಜಧಾನಿ ಯಾವುದು ?
– ಹಳೇಬೀಡು
14. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ?
– ಪುರಂದರದಾಸರು
15. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ?
– ಇ.ಪಿ ರೈಸ್
16. ಕರ್ನಾಟಕದ ಅತಿ ಹಳೆಯ ಅಣೆಕಟ್ಟು ಯಾವುದು ?
– ವಾಣಿ ವಿಲಾಸ ಸಾಗರ
17. ಮ್ಯಾಕ್ ಮೋಹನ್ ಗಡಿರೇಖೆ ಯಾವ ದೇಶಗಳ ಮಧ್ಯೆ ಬರುತ್ತದೆ ?
– ಭಾರತ ಮತ್ತು ಚೀನಾ ನಡುವೆ
18. ದ್ರವ್ಯದ ನಾಲ್ಕನೇ ಹಂತ ಯಾವುದು ?
– ಪ್ಲಾಸ್ಮ
19. ಹಸಿರು ಎಲೆಗಳಲ್ಲಿ ಕಂಡು ಬರುವ ಲೋಹ ಯಾವುದು ?
– ಮೆಗ್ನೀಸಿಯಂ
20. ಯಾವುದೇ ಬಿಲ್ಲನ್ನು ಹಣಕಾಸಿನ ಬಿಲ್ ಎಂದು ದೃಢೀಕರಿಸುವವರು ಯಾರು ?
– ಲೋಕಸಭೆಯ ಸ್ಪೀಕರ್
21. ರಾಜ್ಯನೀತಿಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿ ಅಡಕವಾಗಿದೆ ?
– ನಾಲ್ಕನೇ ಭಾಗದಲ್ಲಿ
22. ಪಂಚಾಯತ್ ರಾಜ್ ಅನ್ನು ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ ?
– ರಾಜ್ಯ ಪಟ್ಟಿ
23. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗರು ಯಾರು ?
– ವಿ ಕೃ ಗೋಕಾಕ್
24. ಭಾರತದ ಬಿಲ್ಗೇಟ್ಸ್ ಎಂದು ಖ್ಯಾತರಾಗಿರುವವರು ಯಾರು ?
– ಅಜೀಮ್ ಪ್ರೇಮ್ ಜಿ (ವಿಪ್ರೊ)
25. “ವಿಕ್ರಮಾರ್ಜುನ ವಿಜಯ” ಈ ಮಹಾಕಾವ್ಯವನ್ನು ಬರೆದವರು ಯಾರು ?
– ಪಂಪ
26. “ಕೂಚಿ ಪುಡಿ” ಶಾಸ್ತ್ರೀಯ ನೃತ್ಯ ಯಾವ ರಾಜ್ಯದ ಕಲೆಯಾಗಿರುತ್ತದೆ ?
– ಆಂಧ್ರಪ್ರದೇಶದ
27. “ಹಾರ್ನ್ ಬಿಲ್” ಎಂಬ ಪ್ರಸಿದ್ಧ ಹಬ್ಬವನ್ನು ಎಲ್ಲಿ ಆಚರಿಸಲಾಗುತ್ತದೆ ?
– ನಾಗಾಲ್ಯಾಂಡ್
28. ಸಾಮಾನ್ಯ ಮಾನವನ ರಕ್ತ ಏನಾಗಿರುತ್ತದೆ ?
– ಕ್ಷಾರೀಯ
29. ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– ಜನವರಿ 25ರಂದು
30. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಯಿತು ?
– ಗಂಗಾವತಿ.
Post navigation