Site icon Compitative Exams MCQ Questions and Answers

Top 30 (ಭಾರತದ ಇತಿಹಾಸ) important Indian History series 03 in kannada, PC and PSI repeated questions and answers for upcoming exams VAO PDO SSC MTS SSC CHSL and ssc CGL exams.

Contents show
1 ಭಾರತದ ಇತಿಹಾಸ : ಈ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಇತಿಹಾಸದ ಪ್ರಶ್ನೋತ್ತರಗಳು

ಭಾರತದ ಇತಿಹಾಸ : ಈ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಇತಿಹಾಸದ ಪ್ರಶ್ನೋತ್ತರಗಳು

1. ಮುಸ್ಲಿಂ ಲೀಗ್ ಸ್ಥಾಪನೆಯಾದ ಸ್ಥಳ ಯಾವುದು ?

– ಡಾಕಾ

2. “ಗಡಿನಾಡ ಗಾಂಧಿ” ಎಂದು ಜನಪ್ರಿಯ ರಾಗಿದ್ದ ಮುಸ್ಲಿಂ ನಾಯಕ ಯಾರು ?

– ಖಾನ್ ಅಬ್ದುಲ್ ಗಫರ್ ಖಾನ್

3. “ಲೋತಲ್ ಮತ್ತು ಕಾಲಿಬಂಗನ್” ಗಳು ಯಾವುದಕ್ಕೆ ಸಂಬಂಧಿಸಿದೆ ?

– ಹರಪ್ಪಾ ಸಂಸ್ಕೃತಿಗೆ ಸಂಬಂಧಿಸಿದೆ

4. ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ಯಾವ ಲೋಹದ ಪರಿಚಯ ಇರಲಿಲ್ಲ ?

– ಕಬ್ಬಿಣ

5. ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ ಯಾವುದು ?

– ಪ್ರಕೃತಿಯ ಆರಾಧನೆ

6. ಮೈಸೂರು ಸಂಸ್ಥಾನವು ಭಾರತ ಒಕ್ಕೂಟವನ್ನು ಸೇರಿದ ಸಂದರ್ಭದಲ್ಲಿ ದಿವಾನರಾಗಿದ್ದವರು ಯಾರು ?

– ರಾಮಸ್ವಾಮಿ ಮೊದಲಿಯಾರ್

7. ಗುಪ್ತರ ಕಾಲದ ತರುವಾಯದ ಅವಧಿಯಲ್ಲಿ ಭೂಮಿಯನ್ನು ಏನೆಂದು ಪರಿಗಣಿಸಲಾಗುತ್ತಿತ್ತು ?

– ರಾಜ್ಯ ಆಸ್ತಿಯೆಂದು ಪರಿಗಣಿಸಲಾಗುತ್ತಿತ್ತು

8. ಚೋಳರ ಕಾಲವು ಯಾವುದಕ್ಕೆ ಹೆಚ್ಚು ಪ್ರಸಿದ್ಧವಾಗಿತ್ತು ?

– ಗ್ರಾಮ ಸಭೆಗಳಿಗೆ

9. ಕಲ್ಲಣನು ರಚಿಸಿದ ರಾಜ ತರಂಗಿಣಿಯು ಯಾವುದಕ್ಕೆ ಸಂಬಂಧಿಸಿದೆ ?

– ಕಾಶ್ಮೀರದ ಇತಿಹಾಸವನ್ನು ಕುರಿತಿದೆ

10. ಶಿಲೆಯನ್ನು ಕೊರೆದು ನಿರ್ಮಿಸಲಾಗಿರುವ ಎಲಿಫೆಂಟಾ ದ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದವರು ಯಾರು ?

– ರಾಷ್ಟ್ರಕೂಟರು

11. ಕನ್ನಡದ ಅತ್ಯಂತ ಪ್ರಾಚೀನ ಶಾಸನ ಯಾವುದು ?

– ಹಲ್ಮಿಡಿ ಶಾಸನ

12. ಕೃಷ್ಣದೇವರಾಯನು ಯಾರ ಸಮಕಾಲೀನನಾಗಿದ್ದನು ?

– ಬಾಬರನ



13. ರಾಮಾನುಜಾ ಚಾರ್ಯರ ಬೋಧನೆಗಳ ಮುಖ್ಯ ವಿಷಯ ಯಾವುದು ?

– ಭಕ್ತಿ

14. ಭಾರತೀಯ ಮುಸ್ಲಿಮರನ್ನು ಆಡಳಿತದಲ್ಲಿ ಸೇರಿಸಿಕೊಳ್ಳುವ ನೀತಿಯನ್ನು ಪ್ರಾರಂಭಿಸಿದ ದೆಹಲಿಯ ಮೊದಲ ಸುಲ್ತಾನ ಯಾರು ?

– ಅಲ್ಲಾಉದ್ದೀನ್ ಖಿಲ್ಜಿ

15. 1911ರಲ್ಲಿ ಭಾರತದಲ್ಲಿ ನಡೆದ ಒಂದು ಮುಖ್ಯ ಘಟನೆ ಯಾವುದು ?

– ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಬದಲಾಯಿಸಲಾಯಿತು

16. 1946ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು ?

– ಮುಂಬೈ

17. ಯಾವ ವರ್ಷದ ಕಾಯಿದೆಯ ಮೂಲಕ ಬ್ರಿಟಿಷರು ಪ್ರಾಂತೀಯ ಸ್ವಯತತೆಯನ್ನು ನೀಡಿದರು ?

– 1935ರ ಕಾಯಿದೆ

18. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಹು ಶಕ್ತಿಯುತವಾದ ಘೋಷಣೆ “ಮಾಡು ಇಲ್ಲವೇ ಮಡಿ” – ಈ ಘೋಷಣೆಯನ್ನು ಕೊಟ್ಟವರು ಯಾರು ?

– ಮಹಾತ್ಮ ಗಾಂಧೀಜಿ

19. ಕಲ್ಕತ್ತಾ ನಗರವನ್ನು ಸ್ಥಾಪಿಸಿದವರು ಯಾರು ?

– ಜಾರ್ಜ್ ಚಾರ್ನೋಕ್

20. ಅಶೋಕನ ಶಾಸನಗಳಲ್ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸಿದವರು ಯಾರು ?

– ಜೇಮ್ಸ್ ಪ್ರಿನ್ಸೆಪ್

21. ಹೊಯ್ಸಳರ ಆಸ್ಥಾನದಲ್ಲಿ ರಚಿತವಾದ ಗದ್ಯ ಕರ್ಣಮೃತ ಎಂಬ ಸಂಸ್ಕೃತಿ ಗ್ರಂಥವು ಯಾವ ಪ್ರಕಾರಕ್ಕೆ ಸೇರಿದೆ ?

– “ಚರಿತ್ರೆ” ಪ್ರಕಾರಕ್ಕೆ ಸೇರಿದೆ

22. ಪ್ರಖ್ಯಾತ ವಿದ್ವಾಂಸ ಅಲ್ಬೇರೊನಿಗೆ ಆಶ್ರಯ ನೀಡಿದವರು ಯಾರು ?

– ಘಜ್ನಿ ಮಹಮ್ಮದ್

23. “ಕ್ರಿಶ್ಚಿಯನ್ನರು ಮತ್ತು ಸಾಂಬಾರ ಪದಾರ್ಥಗಳನ್ನು” ಹುಡುಕಿಕೊಂಡು ತಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ಘೋಷಿಸಿದವರು ಯಾರು ?

– ಪೋರ್ಚುಗೀಸರು

24. ಹೊಯ್ಸಳ ದೇವಾಲಯದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣ ಯಾವುದು ?

– ನಕ್ಷತ್ರಕಾರದ ಗರ್ಭಗುಡಿ

25. ಕರ್ನಾಟಕದ ಯಾವ ಸ್ಥಳದಲ್ಲಿ ಅಶೋಕನ ಶಾಸನ ದೊರೆಯುತ್ತದೆ ?

– ಮಸ್ಕಿ ,ಉಡಿಗೊಲಂ ಮತ್ತು ನಿಟ್ಟೂರು

26. ಮೊಘಲ್ ದೊರೆಯಾಗಿ ಅಕ್ಬರನ ಸಿಂಹಾಸನರೋಹಣ ನಡೆಸಿದ ಸ್ಥಳ ಯಾವುದು ?

– ಕಾಲನೂರ್

27. ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊಟ್ಟಮೊದಲು ಆರಂಭಿಸಿದ ಸ್ಥಳ ಯಾವುದು ?

– ಚಂಪಾರಣ್ಯ

28. ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ ?

– ಐಹೊಳೆ ಶಾಸನದಲ್ಲಿ

29. ಪೋರ್ಚುಗೀಸರು ಯಾರಿಂದ ಗೋವಾವನ್ನು ಪಡೆದುಕೊಂಡರು ?

– ಆದಿಲ್ ಶಾಹಿಗಳಿಂದ

30. ಬಾಲಗಂಗಾಧರ ತಿಲಕರು ಸಂಪಾದಕರಾಗಿದ್ದ ವೃತ್ತ ಪತ್ರಿಕೆ ಯಾವುದು ?

– ವಾಯ್ಸ್ ಆಫ್ ಇಂಡಿಯಾ

Exit mobile version