Top 30 all compitative Exams repeated questions and answers for upcoming exams series 16 SDA FDA KPTCL KPSC UPSC kea exams
Series -16
Top 30 all compitative Exams repeated questions and answers for upcoming exams :
1. ವಿಶ್ವದ ಮೊದಲ ಪೆಟ್ರೋಲಿಯಂ ವಿಶ್ವವಿದ್ಯಾಲಯ ಯಾವ ದೇಶ ಆರಂಭಿಸಿದೆ ?
– ಯು.ಎ ಇ ( UAE)
2. ಭಾರತದ ಮೊಟ್ಟ ಮೊದಲ ಆಂಗ್ಲ ಪತ್ರಿಕೆ ಯಾವುದು ?
– ಡಿ ಬೆಂಗಾಲ್ ಗೆಜೆಟ್ (1780)
3. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾದ ಪ್ರಥಮ ಭಾರತೀಯರು ಯಾರು ?
–ಜಗ ಮೋಹನ್ ಡಾಲ್ಮಿಯಾ
4. ಭಾರತ ರತ್ನ ಪಡೆದ ಮೊದಲ ಸಂಗೀತಗಾರರು ಯಾರು ?
– ಎಂ. ಎಸ್ ಸುಬ್ಬಲಕ್ಷ್ಮಿ
5. ಕನ್ನಡದ ಮೊದಲ ಶಿಲಾ ಶಾಸನ ಯಾವುದು ?
– ಹಲ್ಮಿಡಿ ಶಾಸನ
6. ಅಶೋಕ ಚಕ್ರ ಪ್ರಶಸ್ತಿಯನ್ನು ಮೊಟ್ಟಮೊದಲು ಪಡೆದ ಮಹಿಳೆ ಯಾರು ?
– ನೀರಜ್ ಬಾನೋಟ್
7. ಒಲಂಪಿಕ್ಸ್ ಗೆ ಅರ್ಹರಾದ ಮೊದಲ ಜಿಮ್ನಾಸ್ಟಿಕ್ ಪಟು ಯಾರು ?
– ದೀಪಾ ಕರ್ಮಾಕರ್ (ತ್ರಿಪುರ)
8. ಮೊದಲ ಬಾರಿಗೆ ದೂರವಾಣಿ ಸೇವೆಯನ್ನು ಭಾರತದಲ್ಲಿ ಪರಿಚಯಿಸಿದ್ದು ಎಲ್ಲಿ ?
– ಕೊಲ್ಕತ್ತಾ
9. ಏಷ್ಯಾದ ಮೊಟ್ಟ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿ ಸ್ಥಾಪಿಸಲಾಯಿತು ?
– ಗಂಗಾವತಿ (ಕಾರಟಗಿ)
10. ಕನ್ನಡ ಸಾಹಿತ್ಯ ಪರಿಷತ್ ನ ಮೊದಲ ಅಧ್ಯಕ್ಷರು ಯಾರು ?
– ಎಚ್. ವಿ ನಂಜುಂಡಯ್ಯ
11. ಮೌಂಟ್ ಎವರೆಸ್ಟ್ ಏರಿದ ಮೊಟ್ಟಮೊದಲ ಭಾರತೀಯ ಮಹಿಳೆ ಯಾರು ?
– ಬಚೇಂದ್ರಿ ಪಾಲ್ (1984)
12. ಭಾರತದ ಪ್ರಪ್ರಥಮ ಅಣು ವಿದಳನ ರಿಯಾಕ್ಟರ್ ಯಾವುದು ?
– ಅಪ್ಸರಾ 1956
13. ಕಾಳಿದಾಸ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿದ ಮೊದಲ ಕನ್ನಡಿಗ ಯಾರು ?
– ಮಲ್ಲಿಕಾರ್ಜುನ್ ಮನ್ಸೂರ್
14. ಭಾರತದ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು ?
– ಅನ್ನಾ ಚಾಂಡಿ
15. ಭಾರತದ ಮೊದಲ ಬಯಲು ಶೌಚ ಮುಕ್ತ ನಗರ ಯಾವುದು ?
– ಮೈಸೂರು
16. ಪಾರ್ಲಿಮೆಂಟ್ ನಲ್ಲಿ ಕನ್ನಡ ಮಾತನಾಡಿದ ಮೊದಲ ರಾಜಕಾರಣಿ ಯಾರು ?
– ಜೆ. ಎಚ್ ಪಟೇಲ್
17. ಯಾವ ಚುನಾವಣೆಯಲ್ಲಿ ಮೊದಲಿಗೆ ಭಾರತದಲ್ಲಿ vv pat ಬಳಸಲಾಯಿತು ?
– ನಾಗಾಲ್ಯಾಂಡ್ 2013ರ ಬೈ ಪೋಲ್ ಎಲೆಕ್ಷನ್
18. ಐ.ಎನ್. ಸಿ ಯ ಮೊದಲ ಮುಸ್ಲಿಂ ಅಧ್ಯಕ್ಷ ಯಾರು ?
– ಬದ್ರುದ್ದೀನ್ ತ್ಯಬ್ಜಿ
19. ಭಾರತದಲ್ಲಿ ಸ್ಥಾಪಿಸಲ್ಪಟ್ಟ ಪ್ರಥಮ ನಗರ ಪಾಲಿಕೆ ಯಾವುದು ?
– ಮದ್ರಾಸ್
20. ಭಾಷೆಯನ್ನು ಆಧರಿಸಿ ರಚನೆಗೊಂಡ ಮೊದಲ ರಾಜ್ಯ ಯಾವುದು ?
– ಆಂಧ್ರ ಪ್ರದೇಶ್
21. ಇಂಗ್ಲಿಷ್ ಚಾನಲ್ ಅನ್ನು ಈಜಿ ದಾಟಿದ ಮೊದಲ ಭಾರತೀಯರು ಯಾರು ?
– ಮಿಹಿರ್ ಸೇನ್
22. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇರವಾಗಿ ನೇಮಕವಾದ ಮೊದಲ ಮಹಿಳಾ ವಕೀಲೆ ಯಾರು ?
– ಇಂದು ಮಲೋತ್ರ
23. ಭೂಮಿಯಲ್ಲಿ ಅತ್ಯಂತ ಕಿರಿದಾದ ಖಂಡ ಯಾವುದು ?
– ಆಸ್ಟ್ರೇಲಿಯಾ
24. ಅತ್ಯಂತ ಹೆಚ್ಚು ಪಾಸ್ಪೇಟ್ ಉತ್ಪಾದನೆ ಆಗುವ ಸ್ಥಳ ಯಾವುದು ?
– ಅಮೆರಿಕ ಸಂಯುಕ್ತ ಸಂಸ್ಥಾನ
25. ಕರ್ನಾಟಕದಲ್ಲಿ ಅತಿ ದೊಡ್ಡ ಶಾಕೋತ್ಪನ್ನ ವಿದ್ಯುತ್ ಶಕ್ತಿ ಕೇಂದ್ರ ಎಲ್ಲಿದೆ ?
– ರಾಯಚೂರು
26. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು ?
– ಗೋಲಗುಮ್ಮಟ
27. ಅತ್ಯಂತ ಹೆಚ್ಚು ಜನಸಂದಣಿ ಹೊಂದಿರುವ ರಾಜ್ಯ ಯಾವುದು ?
– ಉತ್ತರ ಪ್ರದೇಶ
28. ಅತ್ಯಂತ ಉದ್ದದ ಕರಾವಳಿ ತೀರ ಹೊಂದಿದ ರಾಜ್ಯ ಯಾವುದು ?
– ಗುಜರಾತ್
29. ಸೌರಮಂಡಲದಲ್ಲಿ ಅತ್ಯಧಿಕ ಉಷ್ಣತೆ ಉಳ್ಳ ಗ್ರಹ ಯಾವುದು?
– ಶುಕ್ರ ಗ್ರಹ
30. ಭಾರತದಲ್ಲಿ ಹೆಚ್ಚಿನ ಏಲಕ್ಕಿಯನ್ನು ಎಲ್ಲಿ ಬೆಳೆಯಲಾಗುತ್ತದೆ ?
– ಕೇರಳ