Skip to content
ಭಾರತದ ಇತಿಹಾಸ – 05 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.
1. “ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ” ಈ ಪುಸ್ತಕವನ್ನು ರಚಿಸಿದವರು ಯಾರು ?
– ದಾದಾಬಾಯಿ ನವರೋಜಿ
2. ಪ್ರಸಿದ್ಧ “ಸ್ವರಾಜಿಸ್ಟ್ ದಳವು” ಯಾವ ಚಳುವಳಿಯ ವೈಫಲ್ಯದ ನಂತರ ಸ್ಥಾಪನೆಗೊಂಡಿತು ?
– ಅಸಹಕಾರ ಚಳುವಳಿ
3. “ಸಂಗಮ” ಸಾಹಿತ್ಯ ಕೇಂದ್ರ ಯಾವುದಾಗಿತ್ತು ?
– ಮಧುರೈ
4. ರೈತವಾರಿ ಪದ್ಧತಿಯನ್ನು ಯಾರು ಜಾರಿಗೆ ತಂದರು ?
– ಸರ್ ಥಾಮಸ್ ಮನ್ರೋ
5. “ಚಾಲುಕ್ಯ ಸೈನ್ಯವು” ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು ?
– ಕರ್ನಾಟ ಬಲ
6. ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಏನೆಂದು ಕರೆಯುತ್ತಿದ್ದರು ?
– ಘಟಿ ಕಾಲಯಗಳು
7. ಗಾಂಧಿ ಇರ್ವಿನ್ ಒಪ್ಪಂದಕ್ಕೆ ಯಾವಾಗ ಸಹಿ ಹಾಕಲಾಯಿತು ?
– 1931 ರಲ್ಲಿ
8. ಮೌರ್ಯರ ಕಾಲದ ಆಡಳಿತ ಭಾಷೆ ಯಾವುದು ?
– ಪ್ರಾಕೃತ್
9. ಪ್ರಪಂಚದಲ್ಲಿಯೇ ಪ್ರಸಿದ್ಧವಾದ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು ?
– ಚಂದೆeಲರು
10. ಹರ್ಷವರ್ಧನನ ಇತಿಹಾಸವನ್ನು ತಿಳಿಸುವ “ಹರ್ಷ ಚರಿತೆ” ಎಂಬ ಗ್ರಂಥವನ್ನು ಬರೆದವರು ಯಾರು ?
– ಬಾಣಭಟ್ಟ
11. ಬಿಜಾಪುರದ ಗೋಳಗುಮ್ಮಟದ ನಿರ್ಮಾಪಕರು ಯಾರು ?
– ಮಹಮ್ಮದ್ ಆದಿಲ್ ಷಾ
12. ಹುಮಾಯುನ್ ನಾಮ ಪುಸ್ತಕದ ಕರ್ತೃ ಯಾರು ?
– ಗುಲ್ಬದನ್ ಬೇಗಂ
13. ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಧಾರ್ಮಿಕ ಪ್ರವಚನಗಳಲ್ಲಿ ಅಧ್ಯಕ್ಷತೆ ವಹಿಸುತ್ತಿದ್ದವರು ಯಾರು ?
– ಅಲ್ಲಮಪ್ರಭು
14. ಸಮುದ್ರ ಗುಪ್ತನ ಆಸ್ಥಾನದ ಕವಿ ಯಾರು ?
– ಹರಿಸೇನ
15. “ವರಾಹವು” ಯಾವ ಮನೆತನದ ರಾಜಲಾಂತನವಾಗಿತ್ತು ?
– ಚಾಲುಕ್ಯ
16. ಭಾರತದಲ್ಲಿ “ದ್ವಿ ಪ್ರಭುತ್ವವು” ಯಾವುದರಲ್ಲಿ ಮೊದಲಿಗೆ ಪರಿಚಯಿಸಲ್ಪಟ್ಟಿತು ?
– ಮಾಂಟ್ ಫೋರ್ಡ್ ಸುಧಾರಣೆಗಳಲ್ಲಿ
17. ಬ್ರಿಟಿಷ್ – ಭಾರತದ ಕೊನೆಯ ಗವರ್ನರ್ ಜನರಲ್ ಯಾರು ?
– ಲಾರ್ಡ್ ಮೌಂಟ್ ಬ್ಯಾಟನ್
18. ಆಧುನಿಕ ಅಂಚೆ ವ್ಯವಸ್ಥೆಯ ಅಡಿಪಾಯವನ್ನು ಹಾಕಿದವನು ಯಾರು ?
– ಲಾರ್ಡ್ ಡಾಲ್ ಹೌಸಿ
19. “ಪ್ರಥಮ ವೇದ” ಯಾವುದು ?
– ಋಗ್ವೇದ
20. ರಾಜಶ್ರೀ ಯಾರ ಸಹೋದರಿ ?
– ಹರ್ಷವರ್ಧನನ
21.” ತ್ರಿಪಿಟಕ ಗಳು” ಯಾರ ಪವಿತ್ರ ಗ್ರಂಥಗಳು ?
– ಬೌದ್ಧರ ಪವಿತ್ರ ಗ್ರಂಥ
22. ಫ್ರಾನ್ಸ್ ಮಹಾ ಕ್ರಾಂತಿ ಜರುಗಿದ ವರ್ಷ ಯಾವುದು ?
– 1789
23. ಕೈಲಾಸನಾಥ ದೇವಾಲಯವು ಯಾರಿಂದ ನಿರ್ಮಿತವಾಯಿತು ?
– ಒಂದನೆಯ ಕೃಷ್ಣ
24. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದ ಮೂಲಕ ಕೊನೆಗೊಂಡಿತು ?
– ಮಂಗಳೂರು ಒಪ್ಪಂದ
25. ಸಿಂಧೂ ನಾಗರಿಕತೆಯ ಜನರ ಮುಖ್ಯ ಬಂದರು ಯಾವುದು ?
– ಲೋಥಲ್
26. ಅಕ್ಬರನ ಸಮಾಧಿಯು ಎಲ್ಲಿದೆ ?
– ಸಿಕಂದ್ರಾ
27. ಪ್ರಸಿದ್ಧ ಜೈನ ಪಂಡಿತನಾದ ಜೀನ ಸೇನನು ಯಾವ ದೊರೆಯ ಆಸ್ಥಾನದಲ್ಲಿದ್ದನು ?
– ಅಮೋಘ ವರ್ಷ
28. “ನೊಳಂಬವಾಡಿಗೊಂಡ ಮತ್ತು ತಲಕಾಡುಕೊಂಡ” ಈ ವಿಶೇಷಗಳು ಯಾರ ನಾಣ್ಯದ ಮೇಲೆ ಕಂಡುಬಂದಿವೆ ?
– ಬಿಟ್ಟಿದೇವ
29. ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಸಿಕ್ರಿಯಲ್ಲಿ “ಬುಲಂದ್ ದರ್ವಾಜ”ವನ್ನು ನಿರ್ಮಿಸಿದನು ?
– ಗುಜರಾತ್ ಪ್ರಾಂತ್ಯ
30. ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುದಾರಿಕೆ ವ್ಯವಸ್ಥೆಯನ್ನು ಏನೆಂದು ಕರೆಯುವರು ?
– ವರಮ್.
Post navigation