Top 50 (ಭಾರತ ಸಂವಿಧಾನ) important Indian constitution series 07 PC and PSI repeated questions and answers for upcoming exams VAO PDO SSC MTS SSC CHSL and ssc CGL exams.
6 months ago
ಭಾರತದ ಸಂವಿಧಾನ – 07
1. ಸಂಪತ್ತಿನ ಸಮಾನ ಹಂಚಿಕೆ ಯಾವ ಮೌಲ್ಯವನ್ನು ಸೂಚಿಸುತ್ತದೆ ?
– ಸಮಾಜವಾದ
2. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿವೆ ?
– ಅಂತರಾಷ್ಟ್ರೀಯ ಸಹಭಾಗಿತ್ವ
3. ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ?
– 450 ಕಿಂತ ಅಧಿಕ
4. ಸಂವಿಧಾನ ರಚನಾ ಸಭೆ ಮೊದಲು ಬಾರಿಗೆ ನಡೆದದ್ದು ಯಾವಾಗ ?
– 9ನೇ ಡಿಸೆಂಬರ್ 1946
5. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
– ಸರ್ದಾರ್ ವಲ್ಲಭಬಾಯಿ ಪಟೇಲ್
6. ಸಂವಿಧಾನ ರಚನೆಯಲ್ಲಿ ಭಾಗವಹಿಸಿದ ಕನ್ನಡಿಗರು ಯಾರು ?
– ಕೆ ಸಿ ರೆಡ್ಡಿ , ಟಿ ಸಿದ್ದಲಿಂಗಯ್ಯ , ಎಚ್ ಸಿದ್ದವೀರಪ್ಪ
7. ಪಂಚಾಯತ್ ರಾಜ್ ಯಾವ ಪಟ್ಟಿಯಲ್ಲಿದೆ ?
– ರಾಜ್ಯ ಪಟ್ಟಿ
8. ಭಾರತ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ?
– 12 ಶೆಡ್ಯೂಲ್ ಗಳು
9. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು ?
– ಮೀರಾ ಕುಮಾರಿ
10. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಯಾವುದು ?
– ಭಾರತ
11. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಕ್ಷೇತ್ರದಿಂದ ಸ್ಪರ್ಧಿಸಬಾರದು ?
– ಎರಡಕ್ಕಿಂತ ಹೆಚ್ಚು ಕ್ಷೇತ್ರ
12. ಭಾರತದ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಲು ತೆಗೆದುಕೊಳ್ಳುವ ಸಮಯ ಎಷ್ಟು ?
– 52 ಸೆಕೆಂಡುಗಳು
13. ಅಂತರ್ ರಾಜ್ಯ ಜಲ ವಿವಾದ ಸಂವಿಧಾನದ ಯಾವ ಕಾಲಂನಲ್ಲಿದೆ ?
– ಕಾಲಂ 262
14. ಸಂವಿಧಾನದ 359 ನೇ ವಿಧಿಯು ರಾಷ್ಟ್ರಪತಿಯವರಿಗೆ ,ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕಿಗೆ ಚ್ಯುತಿ ಬಾರದಂತೆ ತಡೆಯಲು ಸವಲತ್ತು ನೀಡಿದೆ ?
– ರಾಷ್ಟ್ರೀಯ ತುರ್ತು ಪರಿಸ್ಥಿತಿ
15. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷಗಳು ?
– ಆರು ವರ್ಷ ಅಥವಾ 65 ವರ್ಷಗಳು
16. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು ?
– ಎರಡು ಸದನಗಳು ಅಧಿವೇಶನದಲ್ಲಿ ಇಲ್ಲದಿರುವಾಗ ಅಥವಾ ಭಾಗವಹಿಸದೇ ಇರುವಾಗ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು
17. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವೇತನವನ್ನು ಯಾವುದರಿಂದ ಸಂದಾಯ ಮಾಡಲಾಗುತ್ತದೆ ?
– ಸಂಚಿತ ನಿಧಿಯಿಂದ
18. ಪಂಚಾಯತ್ ರಾಜ್ ವ್ಯವಸ್ಥೆ ಒಂದು ….. ಆಗಿದೆ ?
– ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ ಆಗಿದೆ
19. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜಾರಿಗೆ ತಂದ ಮುಖ್ಯ ನ್ಯಾಯಾಧೀಶರು ಯಾರು ?
– ಪಿ. ಎನ್ ಭಗವತಿ
20. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಯಾವುದಕ್ಕೆ ಸಂಬಂಧಪಟ್ಟಿದೆ ?
– ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ
21. ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾದ ವರ್ಷ ಯಾವುದು ?
– 1976
22. ಲೋಕಸಭಾ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು ?
– 5 ವರ್ಷಗಳು
23. ಜಂಟಿ ರಾಜ್ಯ ಲೋಕಸೇವಾ ಆಯೋಗ 2 ಅಥವಾ ಹೆಚ್ಚು ರಾಜ್ಯಗಳಿಗೆ ಅನ್ವಯಿಸುವಂತೆ ರಚಿಸಿದ್ದು ಅದು ಒಂದು….ಆಗಿದೆ ?
– ಶಾಸನಬದ್ಧ ಅಂಗವಾಗಿದೆ
24. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಾಸನ ನಿರ್ಮಾಣದ ಅಧಿಕಾರ ಇರುವುದು ಯಾರಿಗೆ ?
– ರಾಜ್ಯದ ವಿಧಾನ ಮಂಡಲಕ್ಕೆ (ಜಮ್ಮು ಮತ್ತು ಕಾಶ್ಮೀರ)
25. ಪುರಸಭೆಗಳಿಗೆ ಚುನಾವಣೆ ನಡೆಸುವುದು ಯಾರ ಅಧೀನಕ್ಕೆ ಒಳಪಟ್ಟಿದೆ ?
– ರಾಜ್ಯ ಚುನಾವಣಾ ಆಯೋಗ
26. ಭಾರತದ ಸಂವಿಧಾನದ ಒಂದನೇ ವಿಧಿಯ ಪ್ರಕಾರ ಭಾರತವನ್ನು ಏನೆಂದು ಕರೆಯುತ್ತಾರೆ ?
– ರಾಜ್ಯಗಳ ಒಕ್ಕೂಟ
27. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ ಯಾವುದು ?
– 33ನೇ ವಿಧಿ.
28. ಯಾವ ಕಾನೂನು ಬದ್ಧ ಅಧಿಕಾರಿಯು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ ?
– ಅಟಾರ್ನಿ ಜನರಲ್
29. ಯಾವ ರಿಟ್ “ಅಕ್ಷರಶ: ನಿನ್ನ ಅಧಿಕಾರವೇನು” ಎಂಬ ಅರ್ಥವನ್ನು ನೀಡುತ್ತದೆ ?
– ಕೋವಾರಂಟೊ
30. 123 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ?
– ರಾಷ್ಟ್ರೀಯ ಅಧ್ಯಕ್ಷರಿಗೆ ಸುಗ್ರೀವಾಜ್ಞೆ ಹೊರಡುಸುವ ಅಧಿಕಾರಕ್ಕೆ
31. ಸಂವಿಧಾನದ ಐದನೇ ಮತ್ತು ಆರನೇ ಪರಿಚ್ಛೇದ ಯಾವುದಕ್ಕೆ ಸಂಬಂಧಿಸಿದೆ ?
– ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಆಡಳಿತದ ಪ್ರದೇಶಕ್ಕೆ ಸಂಬಂಧಿಸಿದ
32. 1919 ರ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ ?
– ದ್ವಿ ಪ್ರಭುತ್ವಕ್ಕೆ
33. ಒಂದು ಮಸೂದೆಯನ್ನು ಪಾರ್ಲಿಮೆಂಟಿನ ಜಂಟಿ ಸದನದ ಮುಂದೆ ಇಟ್ಟಾಗ ಅದರ ಅನುಮೋದನೆ ಯಾವ ರೀತಿ ನಡೆಯುತ್ತದೆ ?
– ಹಾಜರಿರುವ ಸದಸ್ಯರ ಸರಳ ಬಹುಮತ
34. ಯಾವ ಸಂವಿಧಾನದ ಹಕ್ಕುಗಳು “ಪೌರರಲ್ಲದವರಿಗೂ” ಲಭ್ಯವಾಗುತ್ತದೆ ?
– ಉದ್ಯೋಗ ಮತ್ತು ವ್ಯಾಪಾರ ವ್ಯವಹಾರದಲ್ಲಿ ತೊಡಗುವ ಸ್ವಾತಂತ್ರ್ಯ
35. ರಾಷ್ಟ್ರಪತಿ ಯವರು 352ನೇ ವಿಧಿ ಪ್ರಕಾರ ಯಾವ ಆಧಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ?
– ಬಾಹ್ಯ ದಾಳಿ ಅಥವಾ ಸಶಸ್ತ್ರ ದಂಗೆ
36. ರಾಜ್ಯಸಭೆಯ ಸದಸ್ಯರ ಅನರ್ಹತೆ ವಿಷಯವನ್ನು ನಿರ್ಧರಿಸುವರು ಯಾರು ?
– ಚುನಾವಣಾ ಆಯೋಗದ ಸಲಹೆ ಮೇರೆಗೆ ರಾಷ್ಟ್ರಪತಿಗಳು
37. ಯಾವುದು ಭಾರತದ ಸಂವಿಧಾನದ ಅಡಿಯಲ್ಲಿ ಒಳಗೊಂಡಿರುವುದಿಲ್ಲ ?
– ರಾಷ್ಟ್ರಾಧ್ಯಕ್ಷರ ಸರ್ಕಾರ
38. ಮಾಹಿತಿ ಹಕ್ಕು ಕಾಯ್ದೆ ಯಾವಾಗ ಜಾರಿಗೆ ಬಂದಿತು ?
– 2005 ಅಕ್ಟೋಬರ್ 12
39. ಭಾರತದ ಮುಖ್ಯ ನ್ಯಾಯಾಧೀಶರನ್ನು ಸೇರಿಸಿ ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸಂಖ್ಯೆ ಎಷ್ಟು ?
– 31
40. 356ನೆಯ ವಿಧಿಯ ಪ್ರಕಾರ ರಾಷ್ಟ್ರಧ್ಯಕ್ಷರ ಆಡಳಿತವನ್ನು ರಾಜ್ಯದಲ್ಲಿ ಘೋಷಿಸಬಹುದಾದ ಗರಿಷ್ಠ ಅವಧಿ ಎಷ್ಟು ವರ್ಷಗಳು ?
– ಮೂರು ವರ್ಷಗಳು
41. ಶೂನ್ಯ ವೇಳೆಯೂ ಯಾರ ವಿವೇಚನೆಯಲ್ಲಿ ಇರುತ್ತದೆ ?
– ಸಭಾಧ್ಯಕ್ಷರ ವಿವೇಚನೆಯಲ್ಲಿ
42. ಯಾವ ಸಮಿತಿಯ ಮೇರೆಗೆ ಕೇಂದ್ರ ವಿಚಕ್ಷಣ ಆಯೋಗವನ್ನು(Central vigilance commission) ಸ್ಥಾಪಿಸಲಾಯಿತು ?
– ಕೆ ಸಂತಾನಂ ಸಮಿತಿ
43. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿ ಯಾವುದು ?
– ಮೂರು ಮಜಲು ಪದ್ಧತಿ
44. ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ ಯಾರಿಂದ ಪರಿಚಯಿಸಲ್ಪಟ್ಟಿತು ?
– ರಾಮಕೃಷ್ಣ ಹೆಗಡೆ ಯವರಿಂದ
45. ಭಾರತದ ಸಂವಿಧಾನದಲ್ಲಿ ಯಾವ ರೀತಿಯ ಪೌರತ್ವ ವ್ಯವಸ್ಥೆ ಇದೆ ?
– ಏಕ ಪೌರತ್ವ ವ್ಯವಸ್ಥೆ
46. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತುಪರಿಸ್ಥಿತಿಗಳಿವೆ ?
– 03 ಬಗೆಯ ತುರ್ತು ಪರಿಸ್ಥಿತಿಗಳು
47. ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ ಯಾವುದು ?
– 24ನೇ ತಿದ್ದುಪಡಿ
48. ಅಟಾರ್ನಿ ಜನರಲ್ ಅವರ ಅಧಿಕಾರ ಅವಧಿ ಎಷ್ಟು ?
– ರಾಷ್ಟ್ರಪತಿಯವರ ಅನುಮತಿ ಮೇರೆಗೆ ಅನಿರ್ದಿಷ್ಟ ಕಾಲ
49. ಸಂವಿಧಾನವನ್ನು ಅರ್ಥೈ ಸುವ ಅಧಿಕಾರ ಯಾರಿಗಿದೆ ?
– ಭಾರತದ ಸುಪ್ರೀಂ ಕೋರ್ಟ್ ಗೆ
50. ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆ ಕೆಳಗಿನ ಯಾವುದರಲ್ಲಿ ಬಿಂಬಿತವಾಗಿದೆ ?
– ಸಮಾನತೆಯ ಹಕ್ಕು