Skip to content
ಭಾರತ ಸಂವಿಧಾನ – 05
1.ರಾಷ್ಟ್ರಾಧ್ಯಕ್ಷರು ಲೋಕಸಭೆಗೆ ಯಾವ ಜನಾಂಗಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನೇಮಕ ಮಾಡುತ್ತಾರೆ ?
– ಆಂಗ್ಲೋ ಇಂಡಿಯನ್
2. ರಾಜ್ಯದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
3. ಭಾರತದ ಪ್ರಧಾನಿಯಾಗಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ?
– 25 ವರ್ಷಗಳು
4. ಭಾರತದಲ್ಲಿ ಮತದಾನದ ಕನಿಷ್ಠ ವಯಸ್ಸು ಎಷ್ಟು ?
– 18 ವರ್ಷಗಳು
5. ರಾಜ್ಯಸಭೆಯ ಅಧ್ಯಕ್ಷರು ಯಾರು ?
– ಉಪರಾಷ್ಟ್ರಪತಿಗಳು
6. ಗಣರಾಜ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– 26ನೇ ಜನವರಿ
7. ರಾಜ್ಯ ಶಾಸಕಾಂಗ ಸಭೆಯ ಉಪಸ್ಥಿತ ಅಧಿಕಾರಿ ಯಾರು ?
– ಸ್ಪೀಕರ್
8. ಲೋಕಸಭೆಯ ಒಟ್ಟು ಅಧಿಕಾರ ಅವಧಿ ಎಷ್ಟು ವರ್ಷಗಳು ?
– ಐದು ವರ್ಷಗಳು
9. ಭಾರತದ ಸಂವಿಧಾನದಲ್ಲಿ ಎಷ್ಟು ಬಗೆಯ ಮೂಲಭೂತ ಹಕ್ಕುಗಳನ್ನು ಗುರುತಿಸಲಾಗಿದೆ ?
– 06
10.ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಬಹುಮತ ಪಡೆಯದೆ ಇದ್ದದ್ದು ಯಾವಾಗ ?
– 1977
11. ಗೋವಾ ಭಾರತದ 25ನೇ ರಾಜ್ಯವಾಗಿ ರೂಪುಗೊಂಡಿದ್ದು ಯಾವಾಗ ?
– 1987
12. ಸಂವಿಧಾನದಲ್ಲಿ ಭಾರತವನ್ನು ಏನೆಂದು ಉಲ್ಲೇಖಿಸಲಾಗಿದೆ ?
– ಭಾರತ್
13. ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
– 225 ಸದಸ್ಯರು
14. ಸಂವಿಧಾನದ 370ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ?
– ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ
15. ಸಂವಿಧಾನದ 8ನೇ ಅನುಸೂಚಿ ಎಷ್ಟು ಭಾಷೆಗಳನ್ನು ಒಳಗೊಂಡಿದೆ ?
– 22 ಭಾಷೆಗಳು
16. ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
17. ಚುನಾವಣಾ ಆಯೋಗದಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು ?
– 03 ಸದಸ್ಯರು
18. ಸಂವಿಧಾನದ ಯಾವ ಅನುಚ್ಛೇದ ಅಸ್ಪೃಶ್ಯತೆಯನ್ನು ತೊಡೆದು ಹಾಕಿದೆ ?
– 17ನೇ ಅನುಚ್ಛೇದ
19. ಯಾವುದನ್ನು ಸಂವಿಧಾನದ ಭಾಗವೆಂದು ಪರಿಗಣಿಸಲಾಗುವುದಿಲ್ಲ ?
– ಸಂವಿಧಾನದ ಪೀಠಿಕೆ
20. ಕಾನೂನು ಬಾಹಿರ ಬಂದನದ ವಿರುದ್ಧ ಯಾವ ರಿಟ್ ಅನ್ನು ಹೊರಡಿಸಬಹುದು ?
– ಹೇಬಿಯಸ್ ಕಾರ್ಪಸ್
21. ಸಂವಿಧಾನದ ಯಾವ ಭಾಗದಲ್ಲಿ ಗಾಂಧೀಜಿಯವರ ತತ್ವಗಳನ್ನು ಅಳವಡಿಸಲಾಗಿದೆ ?
– ರಾಜ್ಯ ನಿರ್ದೇಶಕ ತತ್ವಗಳು
22. ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಯಾರು ಪಡೆದಿರುತ್ತಾರೆ ?
– ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು
23. ಭಾರತದ ಸಂವಿಧಾನದಲ್ಲಿ ಶಿಕ್ಷಣ ಯಾವ ವ್ಯಾಪ್ತಿಯಲ್ಲಿ ಬರುತ್ತದೆ ?
– ಸಮವರ್ತಿ ಪಟ್ಟಿ
24. ವಿಧಾನಸಭೆ ಸದಸ್ಯನಾಗಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ?
– 25 ವರ್ಷಗಳು
25. ಅಟಾರ್ನಿ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
26. ಮರಣದಂಡನೆಗೆ ಗುರಿಯಾದ ವ್ಯಕ್ತಿಗೆ ಕ್ಷಮಾದಾನ ನೀಡುವ ಅಧಿಕಾರ ಯಾರಿಗಿದೆ ?
– ರಾಷ್ಟ್ರಪತಿ
27. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಯಾವ ಭಾಷೆ ಸೇರಿಲ್ಲ ?
– ಕೊಡವ ಭಾಷೆ
28.ತನ್ನದೇ ಆದ ಹೈಕೋರ್ಟ್ ಹೊಂದಿದ್ದ ಕೇಂದ್ರಾಡಳಿತ ಪ್ರದೇಶ ಯಾವುದು ?
– ದೆಹಲಿ
29.ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಒಬ್ಬ ನಾಗರಿಕನು ಯಾವ ನ್ಯಾಯಾಲಯದ ಮೊರೆ ಹೋಗಬಹುದು ?
– ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ
30. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ವಿಧಿ ಯಾವುದು ?
– 371 J ವಿಧಿ
31. ಅನುಚ್ಛೇದ 14ರಲ್ಲಿ ಹೇಳಿರುವ ಯಾವುದೇ ವ್ಯಕ್ತಿಗೆ ಕಾನೂನು ಸಮಾನತೆ ಹಾಗೂ ಸಮಾನ ರಕ್ಷಣೆಗೆ ರಾಜ್ಯಬದ್ಧವಾಗಿದೆ ಎಂದರೆ…..?
– ಭಾರತದಲ್ಲಿ ನೆಲೆಸಿರುವ ನಾಗರೀಕರು ಹಾಗೂ ಅನಿವಾಸಿ ನಾಗರಿಕರು
32. ಭಾರತದಲ್ಲಿ ಸಿಕ್ಕರು “ಕೀರ್ಪನ್” ಇಟ್ಟುಕೊಳ್ಳಲು ಅನುಮತಿ ಇರುವುದು ಯಾವ ಮೂಲಭೂತ ಹಕ್ಕಿನಿಂದ ?
– ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
33. ರಾಜ್ಯಪಾಲರು ಯಾವ ವ್ಯವಸ್ಥೆಯ ಅಂಗವಾಗಿದ್ದಾರೆ ?
– ರಾಜ್ಯ ಶಾಸನಸಭೆ
34. ನಿಗದಿತ ವಿಷಯಕ್ಕೆ ಸಂಬಂಧಿಸಿದ ಹಕ್ಕು ಚಲಾವಣೆ ಇರುವುದು ಯಾರಿಗೆ ?
– ಕೇಂದ್ರ ಹಾಗೂ ರಾಜ್ಯಗಳಿಗೆ
35. ಉಚ್ಚ ನ್ಯಾಯಾಲಯ ಇರುವುದು ಯಾವ ಪಟ್ಟಿಯಲ್ಲಿ ?
– ಕೇಂದ್ರ ಪಟ್ಟಿ
36. ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆ ಖಾಲಿ ಇರುವಾಗ ಅವರ ಕೆಲಸಗಳನ್ನು ಯಾರು ಮಾಡುತ್ತಾರೆ ?
– ಭಾರತದ ಮುಖ್ಯ ನ್ಯಾಯಾಧೀಶರು
37. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ತೆಗೆದು ಹಾಕುವ ಅಧಿಕಾರ ಯಾರಿಗಿದೆ ?
– ರಾಷ್ಟ್ರಪತಿ
38. ಪಂಚಾಯತ್ ರಾಜ್ ಎಂದರೆ ಏನು ?
– ಗ್ರಾಮೀಣ ಹಾಗೂ ಪ್ರಾದೇಶಿಕ ಮಿಶ್ರ ಸರ್ಕಾರ
39. ಭಾರತದ ಏಳನೇ ಭಾಗ ಯಾವುದನ್ನು ಒಳಗೊಂಡಿದೆ ?
– ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿಗಳು
40. ಭಾರತದ ನಿಯಂತ್ರಣ ಅಧಿಕಾರಿ ಮತ್ತು ಪ್ರಧಾನ ಲೆಕ್ಕ ಪರಿಶೋಧಕರನ್ನು ಯಾರು ನೇಮಿಸುತ್ತಾರೆ ?
– ಭಾರತದ ರಾಷ್ಟ್ರಪತಿ
41. ಭಾರತದ ಸಂವಿಧಾನದಲ್ಲಿ ರಾಷ್ಟ್ರೀಯ ಧ್ವಜವನ್ನು ಅಂಗೀಕರಿಸಿದ್ದು ಯಾವಾಗ ?
– 22 ಜುಲೈ 1947
42. ಸರ್ವೋಚ್ಚ ನ್ಯಾಯಾಲಯ “ರಿಟ್ ಆಫ್ ಪ್ರೊಹಿಬಿಷನ್” ಅನ್ನು ಹೊರಡಿಸುವ ಉದ್ದೇಶ ಏನು ?
– ಕೆಳಗಿನ ನ್ಯಾಯಾಲಯಗಳು ತಮ್ಮ ವ್ಯಾಪ್ತಿಯನ್ನು ಮೀರಿ ತೀರ್ಪನ್ನು ನೀಡಬಾರದೆಂದು
43. ರಾಜ್ಯದ ನಿರ್ವಹಣಾಧಿಕಾರಿ ಯಾರು ?
– ರಾಜ್ಯಪಾಲರು
44. ವೈಯಕ್ತಿಕ ಸ್ವಾತಂತ್ರ್ಯದ ದೊಡ್ಡ ಚಿಹ್ನೆ ಯಾವುದು ?
– ಹೇಬಿಯಸ್ ಕಾರ್ಪಸ್
45. ಮೂಲಭೂತ ಹಕ್ಕು ಯಾವುದು ಅಲ್ಲ ?
– ಮುಷ್ಕರದ ಹಕ್ಕು
46. ಜಂಟಿ ಅಧಿವೇಶನದಲ್ಲಿ ಬಿಲ್ ಪಾಸ್ ಆಗಲು ನಿರ್ಣಾಯಕ ಮತ ಚಲಾಯಿಸುವರು ಯಾರು ?
– ಲೋಕಸಭೆಯ ಅಧ್ಯಕ್ಷರು
47. ಸಂವಿಧಾನದಲ್ಲಿ ಕೇಂದ್ರ ನಿರ್ವಹಣಾಧಿಕಾರಿ ಯಾರು ?
– ರಾಷ್ಟ್ರಪತಿ
48. ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯ ಯಾವುದು ?
– ಶಿಕ್ಷಣ ಮತ್ತು ಅರಣ್ಯ
49. ಭಾರತದ ಸಂವಿಧಾನ ಸಭೆಯ ಸಭಾಧ್ಯಕ್ಷರು ಯಾರಾಗಿದ್ದರು ?
– ಡಾ. ರಾಜೇಂದ್ರ ಪ್ರಸಾದ್
50. ಭಾರತದ ಸಂಸತ್ತು ಏನನ್ನು ಒಳಗೊಂಡಿದೆ ?
– ರಾಷ್ಟ್ರಪತಿ + ಲೋಕಸಭೆ + ರಾಜ್ಯಸಭೆ.
Post navigation