Top 50 general knowledge questions series -10 in Karnataka upcomng exams
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ಭಾಗ – 10 :
01. ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ?
– ಛತ್ತೀಸ್ ಗಡ.
02. ” ದಿ ಡಿಸ್ಕವರ್ ಆಫ್ ಇಂಡಿಯಾ” ಕೃತಿಯನ್ನು ರಚಿಸಿದವರು ಯಾರು ?
– ಜವಹರ್ ಲಾಲ್ ನೆಹರು.
03. ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು ಯಾರು ?
– ಗೋಪಾಲಕೃಷ್ಣ ಗೋಖಲೆ.
04. “ನೀನು ರಕ್ತವನ್ನು ನೀಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಹೇಳಿಕೆಯನ್ನು ನೀಡಿದವರು ಯಾರು ?
– ಸುಭಾಷ್ ಚಂದ್ರ ಬೋಸ್
05. ಯಾವುದರ ಪರಿಣಾಮವಾಗಿ ಗಾಂಧೀಜಿಯವರ ಐತಿಹಾಸಿಕ ಉಪವಾಸವು ಅಂತ್ಯಗೊಂಡಿತು ?
– ಪೂನಾ ಒಪ್ಪಂದ.
06. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ ಏಕೆ ?
– ಸಮುದ್ರದ ನೀರಿನ ಸಾಂದ್ರತೆ ಹೆಚ್ಚು.
07. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು ?
– ಜಲಜನಕ.
08. ಕಾಲುಬಾಯಿ ಕಾಯಿಲೆ ಬಾಧಿಸುವುದು ಯಾವ ಪ್ರಾಣಿಗೆ ?
– ದನಗಳು
09. ನೀರಿನ ಅಣುಸೂತ್ರವೇನು ?
– H2o
10. ಗಾಂಧೀಜಿಯವರು ದಿನ ಬಂದು ಎಂಬ ಬಿರುದನ್ನು ಯಾರಿಗೆ ನೀಡಿದರು ?
– ಸಿ. ಎಫ್ ಅಂಡ್ರಸ್
11. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು ?
– ವಾರನ್ ಹೇಸ್ಟಿಂಗ್
12. ನಾಲ್ಕನೇ ಬ್ರಿಟಿಷ್ ಮೈಸೂರು ಯುದ್ಧ ಯಾವ ವರ್ಷದಲ್ಲಿ ಜರುಗಿತು ?
– 1799
13. ಆನಂದ ಮಠ ಕೃತಿಯನ್ನು ರಚಿಸಿದವರು ಯಾರು ?
– ಬಂಕಿಮ್ ಚಂದ್ರ ಚಟರ್ಜಿ
14. ಕವಿರಾಜಮಾರ್ಗ ಎಂಬ ಪುಸ್ತಕವನ್ನು ಬರೆದವರು ಯಾರು ?
– ಒಂದನೇ ಅಮೋಘವರ್ಷ
15. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಟೆನ್ನಿಸ್
16. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಕಂಡುಬರುತ್ತದೆ ?
– ಗುಜರಾತ್
17. SEBI ಯಾವುದಕ್ಕೆ ಸಂಬಂಧಿಸಿದೆ ?
– ಷೇರು ಮಾರುಕಟ್ಟೆ
18. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ?
– ಶಿವಮೊಗ್ಗ ಜಿಲ್ಲೆ
19. ಪ್ರಸಿದ್ಧ ಗಾಯನವಾದ ” ತರವಲ್ಲ ತಂಗಿ ನಿನ್ನ ತಂಬೂರಿ” ರಚಿಸಿದವರು ಯಾರು ?
– ಶಿಶುನಾಳ ಶರೀಫ್
20. ನಿದ್ರಾ ಬುದ್ಧ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
– ಯಾದಗಿರಿ
21. ರೆಫ್ರಿಜರೇಟರ್ಗಳಲ್ಲಿ ಬಳಸಲಾಗುವ ಕ್ಲೋರೋ ಫ್ಲೋರೋ ಕಾರ್ಬನ್ ನ ಹೆಸರೇನು ?
– ಫ್ರಿಯನ್
22. ಬಸವಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ?
– ಕೃಷ್ಣಾ ನದಿ
23. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ ?
– ಶಿವಮೊಗ್ಗ
24. ಅತಿ ಹೆಚ್ಚು ತೊಗರಿ ಬೆಳೆ ಉತ್ಪನ್ನ ಮಾಡುವ ಏಕೈಕ ಜಿಲ್ಲೆ ಯಾವುದು ?
– ಕಲಬುರಗಿ
25. ಗದಗಿನ ಭಾರತವನ್ನು ರಚಿಸಿದವರು ಯಾರು ?
– ಕುಮಾರವ್ಯಾಸ
26. ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ?
– ಕಾರವಾರ
27. 2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿರುವ ಸಾಕ್ಷರತೆ ಎಷ್ಟು ?
– 75 %
28. ಎಂ ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?
– ಬೆಂಗಳೂರು
29. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?
– ಕೊಲ್ಕತ್ತಾ
30. ಎಂ ಎ ಚಿದಂಬರಂ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ ?
– ಚೆನ್ನೈ
31. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ?
– ಬೆಂಗಳೂರು
32. ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲ ?
– ನಿರ್ವಾತ
33. “ಪ್ರಿನ್ಸಿಪಿಯಾ ಮ್ಯಾಥೆಮ್ಯಾಟಿಕ ” ಪುಸ್ತಕವನ್ನು ಬರೆದವರು ಯಾರು ?
– ನ್ಯೂಟನ್
34. “ಜಿಪಿಎಸ್ “ನ ಪೂರ್ಣ ರೂಪ ಏನು ?
– ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್
35. ನಿಮೋನಿಯಾ ಎಂಬ ರೋಗವನ್ನು ಹೀಗೂ ಕರೆಯುತ್ತಾರೆ ?
– ಶ್ವಾಸಕೋಶದ ರೋಗ
36. ಯಾವುದು ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯೆಂಟನ ಭಾಗವಾಗಿದೆ ?
– ಜೀವಸತ್ವಗಳು
37. ಋತುಗಳು ಉಂಟಾಗಲು ಕಾರಣವೇನು ?
– ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ
38. ತುಕ್ಕು ಯಾವುದರ ಪರಿಣಾಮವಾಗಿ ಆಗುತ್ತದೆ ?
– ಕಬ್ಬಿಣದ ಆಕ್ಸೈಡಿಕರಣದಿಂದ
39. ಚಾಣಕ್ಯರವರನ್ನು ಹೀಗೂ ಕರೆಯುತ್ತಾರೆ ?
– ಕೌಟಿಲ್ಯ
40. ಯೇಸು ಕ್ರಿಸ್ತರ ಜನ್ಮಸ್ಥಳ ಯಾವುದು ?
– ಬೆಟ್ಲೆಹಮ್
41. ರಾಮಾಚಾರಿತ ಮಾನಸ ಬರೆದವರು ಯಾರು ?
– ತುಳಸಿದಾಸ
42. ಭಾರತದ ಮೊದಲ ವೈಸರಾಯ್ ಯಾರು ?
– ಲಾರ್ಡ್ ಕ್ಯಾನಿಂಗ್
43. ಭಾರತ ದೇಶದ ಎರಡನೇ ಪ್ರಧಾನ ಮಂತ್ರಿ ಯಾರು ?
– ಗುಲ್ಜರಿ ಲಾಲ್ ನಂದ
44. ಭಾರತ ಸಂವಿಧಾನದ 7ನೇ ಅನುಸೂಚಿಯು ಯಾವ ಪಟ್ಟಿಯಲ್ಲಿ ಪೊಲೀಸ್ ವಿಶೇಷ ಸೇರಿದೆ ?
– ರಾಜ್ಯ ಪಟ್ಟಿ
45. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವು ಯಾರ ಮುಂದೆ ಮಂಡಿಸಲಾಗುತ್ತದೆ ?
– ಭಾರತದ ರಾಷ್ಟ್ರಪತಿಗಳು.
46. ಅರ್ಥಶಾಸ್ತ್ರದ ಗ್ರಂಥವಾದ “ವೆಲ್ತ್ ಆಫ್ ನೇಷನ್” ಬರೆದವರು ಯಾರು ?
– ಆಡಂ ಸ್ಮಿತ್
47. ಮ್ಯಾಕ್ ಮೋಹನ್ ಲೈನ್ ನಿಂದ ಬೇರ್ಪಟ್ಟ ದೇಶಗಳು ಯಾವುವು ?
– ಭಾರತ ಮತ್ತು ಚೀನಾ
48. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ ಮೂಲ ಧಾತು ಯಾವುದು ?
– ಸೋಡಿಯಂ
49. ಬಾಬಾ ಬುಡನ್ ಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ಧವಾಗಿವೆ ?
– ಕಾಫಿ
50. ತಂಬಾಕಿನಲ್ಲಿರುವ ಹಾನಿಕಾರಕ ವಸ್ತು ಯಾವುದು ?
– ನಿಕೋಟಿನ್