Site icon Compitative Exams MCQ Questions and Answers

Top 50 general science(ಸಾಮಾನ್ಯ ವಿಜ್ಞಾನ) series 01 PC and PSI repeated questions and answers for upcoming exams SDA FDA VAO PDO SSC exams.

Contents show
1 ಸಾಮಾನ್ಯ ವಿಜ್ಞಾನ -೦1

ಸಾಮಾನ್ಯ ವಿಜ್ಞಾನ -೦1

1. ಅನಫಿಲಿಸ್ ಸೊಳ್ಳೆಯಿಂದ ಬರುವ ರೋಗ ಯಾವುದು ?
ಮಲೇರಿಯಾ

2. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು ?
ಸರ್ ಐಸಾಕ್ ನ್ಯೂಟನ್

3. ಮಧುಮೇಹ ಯಾವುದರಿಂದ ಉಂಟಾಗುತ್ತದೆ ?
ರಕ್ತದಲ್ಲಿನ ಇನ್ಸುಲಿನ್ ಕೊರತೆಯಿಂದ

4. ವಿಟಮಿನ್ “ಸಿ” ಕಡಿಮೆಯಾದರೆ ಯಾವ ರೋಗ ಬರುತ್ತದೆ ?
ಸ್ಕರ್ವಿ ರೋಗ ಉಂಟಾಗುತ್ತದೆ

5. ಇನ್ಸುಲಿನ್ ಯಾವ ಅಂಶವನ್ನು ರಕ್ತದಲ್ಲಿ ನಿಯಂತ್ರಿಸುತ್ತದೆ ?
ಸಕ್ಕರೆ

6. ರಕ್ತ ಕೆಂಪಾಗಿರಲು ಕಾರಣವೇನು ?
ಹಿಮೋಗ್ಲೋಬಿನ್ ಇರುವಿಕೆಯಿಂದ

7. ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯಲು ಬೇಕಾಗುವ ಮಾಪಕ ಯಾವುದು ?
ಥರ್ಮಾಮೀಟರ್

8. ಪ್ಲೇಗ್ ಯಾವ ಪ್ರಾಣಿಯಿಂದ ಬರುತ್ತದೆ ?
ಇಲಿ

9. ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ಯಾವ ವಿಟಮಿನ್ ಕೊಡುತ್ತದೆ ?
ವಿಟಮಿನ್ “ಡಿ”

10. ವಿಟಮಿನ್ “ಎ” ಕೊರತೆಯಿಂದ ಯಾವ ರೋಗ ಬರುತ್ತದೆ ?
ಇರುಳು ಕುರುಡು

11. ಸಸ್ಯಗಳು ಹಸಿರಾಗಲು ಕಾರಣ ಏನು ?
ಕ್ಲೋರೋಫಿಲ್

12. ಮನುಷ್ಯನ ದೇಹದಲ್ಲಿ ಇರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ?
98.4 F

13. ಸಾಪೇಕ್ಷಿತ ಸಿದ್ದಾಂತ (ಥಿಯರಿ ಆಫ್ ರಿಲೇಟಿವಿಟಿ) ಕಂಡುಹಿಡಿದವರು ಯಾರು ?
ಆಲ್ಬರ್ಟ್ ಐನ್ಸ್ಟೀನ್

14. ನಮ್ಮ ದೇಹದ ನಾನಾ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಕೊಂಡುಹೊಯ್ಯುವ ಪ್ರಮುಖ ನಾಳ ಯಾವುದು ?
ಅಭಿದಮನೆ

15. ಮನುಷ್ಯನು ತನ್ನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ಹೊಂದಿರುತ್ತಾನೆ ?
7 %

16. ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಮುಖ ಕಾರ್ಯವೇನು ?
ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುತ್ತದೆ

17. ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆ ಯಾವುದು ?
ಸುಕ್ರೋಸ್

18. ಅತಿ ವೇಗವಾಗಿ ಬೆಳೆಯುವ ಮರ ಯಾವುದು ?
ನೀಲಗಿರಿ ಮರ

19.ಬಾಹ್ಯಾಕಾಶದಲ್ಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಲ್ಲಿ ಕಾಣುತ್ತದೆ ?
ಕಪ್ಪು ಬಣ್ಣ

20. ಅತಿ ಹಗುರವಾದ ಮೂಲವಸ್ತು ಯಾವುದು ?
ಜಲಜನಕ

21. ವಿಟಮಿನ್ ಎ ಅಂಶವು ಅತಿ ಹೆಚ್ಚು ಯಾವುದರಲ್ಲಿ ಕಂಡುಬರುತ್ತದೆ ?
ಹಾಲು

22. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು ?
ವ್ಯಾಕ್ಸಿನೇಷನ್

23. ವಿದ್ಯುತ್ ಬಲ್ಪ್ ನಲ್ಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿರುತ್ತದೆ ?
ಟಂಗ್ಸ್ಟನ್

24. ದೂರದರ್ಶನ ಕಂಡುಹಿಡಿದವರು ಯಾರು ?
J. L ಬೇಯರ್ಡ್

25. ರೇಡರನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ?
ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು

26. ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ ?
ಮೂತ್ರಪಿಂಡದ ಕಾಯಿಲೆಗೆ

27. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪ್ ಯಾವುದು ?
ರೇಡಿಯೋ ಕಾರ್ಬನ್

28. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು ?
ಮೋಟಾರ್

29. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು ?
4’C ನಲ್ಲಿ

30. ಟೆಟಾನಸ್( ಧನುರ್ವಾಯು)
ರೋಗ ಬರಲು ಕಾರಣ ಏನು ?
ಕ್ಯಾಸ್ತಿಡಿಯಮ್ ಟೆಟಾನೈ

31. ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮಜೀವಿ ಯಾವುದು ?
ಯೀಸ್ಟ್

32. ಜರ್ಮನ್ ಸಿಲ್ವರ್ ಎನ್ನುವ ಮಿಶ್ರ ಲೋಹದಲ್ಲಿ ಯಾವ ಲೋಹಗಳಿವೆ ?
ತಾಮ್ರ, ನಿಕ್ಕಲ್ ಮತ್ತು ಸತು

33. ಬೆಳಕಿನ ವೇಗ ಒಂದು ಸೆಕೆಂಡಿಗೆ ಎಷ್ಟು ಕಿಲೋಮೀಟರ್ ನಲ್ಲಿದೆ ?
ಮೂರು ಲಕ್ಷ ಕಿಲೋಮೀಟರ್

34. ಅಮೌಲಾಸ್ ಕಿಣ್ವ ಪಿಷ್ಟವನ್ನು ಏನನ್ನಾಗಿ ಪರಿವರ್ತಿಸುತ್ತದೆ ?
ಮಾಲ್ಟೋಸ್

35. ಅರೆವಾಹಕಕ್ಕೆ ಉದಾಹರಣೆ ಯಾವುದು ?
ಜರ್ಮನಿಯಂ

36. ಡೀಸೆಲ್ ಇಂಜಿನ್ ನಲ್ಲಿ ಯಾವುದು ಕಂಡು ಬರುತ್ತದೆ ?
ಪಿಸ್ಟನ್

37. ಭೂಮಿಯ ವಿಮೋಚನ ವೇಗ ಎಷ್ಟು ?
11.2 ಕಿಲೋಮೀಟರ್ /ಸೆಕೆಂಡ್

38. ತುಕ್ಕಿನ ರಾಸಾಯನಿಕ ಸೂತ್ರ ಯಾವುದು ?
Fe2o32H2o

39. ಟೆಂಡಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು ?
ನೀರು ಬೆರೆತ ಹಾಲು

40. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕ ಯಾವುದು ?
ಆರ್ಸೆನಿಕ್

41. ಯುರೇನಿಯಂ 238 ಇದರ ಅರ್ಧಾಯುಷ್ಯ ಎಷ್ಟು ?
4.5 ಬಿಲಿಯನ್ ವರ್ಷಗಳು

42. ವೇಗದ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಬಳಸುವ ಸಾಧನ ಯಾವುದು ?
ಡಾಪ್ಲರ್ ರಾಡಾರ್ ಗನ್

43. ಪೆನ್ಸಿಲಿನ್ ಔಷಧಿಯನ್ನು ಕಂಡು ಹಿಡಿದವರು ಯಾರು ?
ಅಲೆಕ್ಸಾಂಡರ್ ಫ್ಲೆಮಿಂಗ್

44. ತಾಮ್ರದ ಪರಮಾಣು ಸಂಖ್ಯೆ ಎಷ್ಟು ?
29

45. ಓಜೋನ್ ಪದರ ನಮ್ಮನ್ನು ಯಾವುದರಿಂದ ರಕ್ಷಿಸುತ್ತದೆ ?
ನೇರಳಾತೀತ ಕಿರಣಗಳಿಂದ

46. ಅನಿಮೋ ಮೀಟರ್ ಅನ್ನು ಯಾವುದನ್ನು ಅಳೆಯಲು ಬಳಸುತ್ತಾರೆ ?
ಗಾಳಿಯ ವೇಗ

47. ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡು ಬರುವುದು ಯಾವುದು ?
ಮೀಥೇನ್

48. ವಿದ್ಯುತ್ ಪ್ರವಾಹದ ಘಟಕವನ್ನು ಯಾವ ರೀತಿ ವ್ಯಕ್ತಪಡಿಸಲಾಗುತ್ತದೆ !
ಆಂಪಿಯರ್

49. ಯಾವ ಪ್ರಾಣಿಗಳಿಗೆ ಹಲ್ಲು ಇಲ್ಲ ?
ಹಕ್ಕಿಗಳಿಗೆ

50. ಪ್ರತಿ ಮೂತ್ರ ಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ ಯಾವುದು ?
ಅಡ್ರಿನಲ್ ಗ್ರಂಥಿ.

Exit mobile version