Site icon Compitative Exams MCQ Questions and Answers

Top 50 general science(ಸಾಮಾನ್ಯ ವಿಜ್ಞಾನ) series 02 PC and PSI repeated questions and answers for upcoming exams SDA FDA VAO PDO SSC exams.

Contents show
1 ಸಾಮಾನ್ಯ ವಿಜ್ಞಾನ – 02

ಸಾಮಾನ್ಯ ವಿಜ್ಞಾನ – 02

1. ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ?

30 MHz

2. ಹಾಲನ್ನು ಕೆಲ ಸಮಯದವರೆಗೆ ಹೊರಗಡೆ ಇಟ್ಟಾಗ ಹಾಲು ಉಳಿಯಾಗುತ್ತದೆ ಇದಕ್ಕೆ ಕಾರಣವಾದ ಆಮ್ಲ ಯಾವುದು ?

ಲ್ಯಾಕ್ಟಿಕ್ ಆಮ್ಲ 

3. ಕೊಬ್ಬು /ಎಣ್ಣೆ +ಸೋಡಿಯಂ ಹೈಡ್ರಾಕ್ಸೈಡ್ ಸಾಬೂನು ಇದರ ಮಿಶ್ರಿತ ಯಾವುದು ?

ಗ್ಲಿಸರಾಲ್

4. ಒಂದು ಗಾಜಿನ ಲೋಟದಲ್ಲಿ ತೇಲುತ್ತಿರುವ ಮಂಜುಗಡ್ಡೆ ಕರಗಿದಾಗ ನೀರಿನ ಗಾತ್ರ ಏನಾಗುತ್ತದೆ ?

ಇದ್ದ ಹಾಗೆ ಇರುತ್ತದೆ 

5. ಗನ್ ಮೆಟಲ್ ಯಾವ ಲೋಹಗಳ ಮಿಶ್ರ ಲೋಹವಾಗಿದೆ ?

ತಾಮ್ರ, ಸತು ಮತ್ತು ತವರ. 

6. ಟೆಲಿಸ್ಕೋಪನ್ನು ಕಂಡು ಹಿಡಿದವರು ಯಾರು ?

ಗೆಲಿಲಿಯೋ ಗೆಲಿಲಿ 

7. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು ?

ಡೈನಮೋ 

8. ಒಂದು ಕೊಠಡಿ ಯಲ್ಲಿನ ತಾಪ 35’C ಇದೆ ಇದನ್ನು ಕೆಲ್ವಿನ್ ತಾಪಮಾನ ಪದ್ಧತಿಯಲ್ಲಿ ಎಷ್ಟು ಡಿಗ್ರಿ ಎಂದು ವ್ಯಕ್ತಪಡಿಸಲಾಗುತ್ತದೆ ?

308 ಕೆಲ್ವಿನ್ 

9. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ಯಾವುದು ?

ಮರಳು (ಸಿಲಿಕಾ) 

10. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತದೆ ?

ಆರು 

11. ಪರಿಸರ ಮಾಲಿನ್ಯ ತಡೆಯಲು ಡೀಸೆಲ್ ನಲ್ಲಿ ಏನನ್ನು ಬಳಸುತ್ತಾರೆ ?

ಹೊಂಗೆ ಎಣ್ಣೆ

12. ವಾತಾವರಣದಲ್ಲಿ ಅತ್ಯಧಿಕವಾಗಿ ದೊರೆಯುವ ಅನಿಲ ಯಾವುದು ?

ನೈಟ್ರೋಜನ್ 

13. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಯಾವ ಅನಿಲವನ್ನು ಉಪಯೋಗಿಸಲಾಗುತ್ತದೆ ?

ಹೈಡ್ರೋಜನ್ 

14. ಕೇಸರಿಯನ್ನು ಎಲ್ಲಿಂದ ತೆಗೆಯಲಾಗುತ್ತದೆ ?

ಹೂವಿನಿಂದ 

15. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತದೆ ?

1683 K(ಕೆಲ್ವಿನ್)

16. ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ ?

ವಿಟಮಿನ್ ಸಿ 

17. ಅಲ್ಯುಮಿನಿಯಂ ತಯಾರಿಕಾ ವಿಧಾನ ಯಾವುದು ?

ಬೇಯರ್ ವಿಧಾನ 

18. “CH4” ಎನ್ನುವುದು ಯಾವುದರ ಅಣುಸೂತ್ರ ? 

ಮೀಥೇನ್ 

19. ಕೃತಕ ರತ್ನ ಮತ್ತು ನೈಸರ್ಗಿಕ ರತ್ನಗಳನ್ನು ಗುರುತಿಸಲು ಯಾವ ವಿಕಿರಣಗಳನ್ನು ಬಳಸುತ್ತಾರೆ ?

ನೇರಳಾತೀತ ಕಿರಣಗಳು 

20. ಅಡುಗೆ ಸೋಡ ವನ್ನು ಹೀಗೂ ಸಹ ಕರೆಯಬಹುದು ?

ಸೋಡಿಯಂ ಬೈ ಕಾರ್ಬೋನೇಟ್

21. ಮೀನು ಉಸಿರಾಡುವುದು ಯಾವುದರ ಸಹಾಯದಿಂದ ?

ಕಿವಿರುಗಳು

22. ಲಾಫಿಂಗ್ ಗ್ಯಾಸ್ ನ ರಾಸಾಯನಿಕ ಹೆಸರು ಏನು ?

ನೈಟ್ರೆಸ್ ಆಕ್ಸೈಡ್

23. ಎಂಜೈಮ್ ಒಂದು ….. ?

ಪ್ರೋಟೀನ್ (ಸಸಾರ ಜನಕ) 

24. ಮೆದುಳಿನ ಚಟುವಟಿಕೆಯನ್ನು ದಾಖಲು ಮಾಡಿಕೊಳ್ಳಲು ……ಬಳಸುತ್ತಾರೆ?

EEG (electro encephalo graph)

25. “Ornithology” ಯಾವುದಕ್ಕೆ ಸಂಬಂಧಿಸಿದೆ ?

ಪಕ್ಷಿಗಳ ಬಗ್ಗೆ ಅಧ್ಯಯನ 

26. “ಸೋಲ್ಡರ್” ಯಾವುದರ ಮಿಶ್ರ ಲೋಹ ?

ತವರ ಮತ್ತು ಸೀಸ 

27. ಯಾವುದು ಜೈವಿಕ ರಸಗೊಬ್ಬರ ?

ಆಲ್ಗೆ ಹಾಗೂ ನೀಲಿ ಹಸಿರು ಶೈವಲ 

28. “ಮೀಟಿರಾಲಜಿ” ಯಾವುದಕ್ಕೆ ಸಂಬಂಧಿಸಿದೆ ?

ಹವಮಾನ 

29. “ಡೆಸಿಬಲ್” ಎಂಬ ಮಾನ ಯಾವುದಕ್ಕೆ ಸಂಬಂಧಿಸಿದೆ ?

ಶಬ್ದ 

30. “Antibiotic” ಔಷಧವನ್ನು ಯಾವುದಕ್ಕೆ ಬಳಸುತ್ತಾರೆ ?

ಬ್ಯಾಕ್ಟೀರಿಯಾ ಖಾಯಿಲೆಗೆ

31. “Acoustic” ಯಾವುದಕ್ಕೆ ಸಂಬಂಧಿಸಿದೆ ? 

ಶಬ್ದ 

32. “ವ್ಯಾಕ್ಸಿನೇಷನ್” ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡು ಹಿಡಿದವರು ಯಾರು ?

ಎಡ್ವರ್ಡ್ ಜೆನ್ನರ್ 

33. ಯಾವ ರಕ್ತದ ಗುಂಪನ್ನು ಸಾರ್ವರ್ತ್ರಿಕ ದಾನಿ ಎಂದು ಕರೆಯುತ್ತಾರೆ ? 

 ” O” ಗುಂಪು 

34. ಗಾಳಿಯಲ್ಲಿನ ಶಬ್ದದ ವೇಗ ಸರಿಸುಮಾರು ಎಷ್ಟು ?

330 ಮೀಟರ್/ ಸೆಕೆಂಡ್ 

35. “ಟಿಬಿಯಾ” ಎಂಬ ಮೂಳೆ ಎಲ್ಲಿ ಕಂಡು ಬರುತ್ತದೆ ?

ಕಾಲಿನಲ್ಲಿ 

36. “ಬ್ರಾoಕೈಟಿಸ್” ಎಂಬ ಕಾಯಿಲೆಗೆ ತುತ್ತಾಗುವ ಅಂಗ ಯಾವುದು ?

ಉಸಿರಾಟದ ಅಂಗ (ಶ್ವಾಸಕೋಶ)

37. ಹಾಲು ನೈಸರ್ಗಿಕ….. ಆಗಿದೆ 

ಜಿಡ್ಡಿನ ಪದಾರ್ಥ 

38. ಮೂಳೆಯು ಯಾವುದರಿಂದ ಮಾಡಲ್ಪಟ್ಟಿದೆ ?

ಕ್ಯಾಲ್ಸಿಯಂ ಮತ್ತು ಪಾಸ್ಪರಸ್ 

39. ಮಾನವನ ಮೆದುಳಿನ ಬಹುದೊಡ್ಡ ಭಾಗ ಯಾವುದು ?

ಸೆರೆಬ್ರಮ್ 

40. ಶೇಖರಣ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು ?

ಸೀಸ

41. ಸಮುದ್ರ ನೀರಿನಲ್ಲಿರುವ ಉಪ್ಪು ಯಾವುದು ?

ಸೋಡಿಯಂ ಕ್ಲೋರೈಡ್ 

42. “LPG” ಯಲ್ಲಿರುವ ಪ್ರಮುಖ ವಸ್ತು ಯಾವುದು ? 

ಬ್ಯುಟೇನ್

43. ಉಷ್ಣತೆಯನ್ನು ಯಾವ ಯೂನಿಟ್ ನಲ್ಲಿ ಅಳೆಯುತ್ತಾರೆ ? 

ಕೆಲ್ವಿನ್ ನಲ್ಲಿ 

44. ಕತ್ತಲೆ ಕೋಣೆಯಲ್ಲಿ ಹಸಿರು ಎಲೆಯ ಮೇಲೆ ಕೆಂಪು ದ್ವೀಪ ಇಟ್ಟಾಗ ಎಲೆಯ ಬಣ್ಣ ಯಾವ ರೀತಿ ಕಾಣುತ್ತದೆ ? 

ಕಪ್ಪಾಗಿ ಕಾಣುತ್ತದೆ 

45. “ಹಿಮೋಗ್ಲೋಬಿನ” ಪ್ರಮುಖ ಕೆಲಸ ಯಾವುದು ? 

ಆಮ್ಲಜನಕದ ರವಾನೆ 

46. “Oncology” ಯಾವುದಕ್ಕೆ ಸಂಬಂಧಿಸಿದೆ ?

ಕ್ಯಾನ್ಸರ್ ಗೆ 

47. ಬೆಳಕಿನ ವರ್ಷ ಯಾವುದಕ್ಕೆ ಸಂಬಂಧಿಸಿದೆ ? 

ದೂರ 

48. ಸಾಮಾನ್ಯ ಉಪ್ಪಿನ ರಾಸಾಯನಿಕ ಹೆಸರೇನು ?

ಸೋಡಿಯಂ ಕ್ಲೋರೈಡ್ 

49. “ರೇಡಿಯಮ್” ಅನ್ನು ಅನ್ವೇಷಣೆ ಮಾಡಿದವರು ಯಾರು ?

ಮೇರಿ ಕ್ಯೂರಿ 

50. “Periodic table” ಅನ್ನು ಕಂಡುಹಿಡಿದವರು ಯಾರು ?

ಡಿಮಿಟ್ರಿ ಮೆಂಡಲಿವ್.

Exit mobile version