Skip to content
ಸಾಮಾನ್ಯ ವಿಜ್ಞಾನ -೦1
1. ಅನಫಿಲಿಸ್ ಸೊಳ್ಳೆಯಿಂದ ಬರುವ ರೋಗ ಯಾವುದು ?
– ಮಲೇರಿಯಾ
2. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು ?
– ಸರ್ ಐಸಾಕ್ ನ್ಯೂಟನ್
3. ಮಧುಮೇಹ ಯಾವುದರಿಂದ ಉಂಟಾಗುತ್ತದೆ ?
– ರಕ್ತದಲ್ಲಿನ ಇನ್ಸುಲಿನ್ ಕೊರತೆಯಿಂದ
4. ವಿಟಮಿನ್ “ಸಿ” ಕಡಿಮೆಯಾದರೆ ಯಾವ ರೋಗ ಬರುತ್ತದೆ ?
– ಸ್ಕರ್ವಿ ರೋಗ ಉಂಟಾಗುತ್ತದೆ
5. ಇನ್ಸುಲಿನ್ ಯಾವ ಅಂಶವನ್ನು ರಕ್ತದಲ್ಲಿ ನಿಯಂತ್ರಿಸುತ್ತದೆ ?
– ಸಕ್ಕರೆ
6. ರಕ್ತ ಕೆಂಪಾಗಿರಲು ಕಾರಣವೇನು ?
– ಹಿಮೋಗ್ಲೋಬಿನ್ ಇರುವಿಕೆಯಿಂದ
7. ಮನುಷ್ಯನ ದೇಹದ ಉಷ್ಣತೆಯನ್ನು ಅಳೆಯಲು ಬೇಕಾಗುವ ಮಾಪಕ ಯಾವುದು ?
– ಥರ್ಮಾಮೀಟರ್
8. ಪ್ಲೇಗ್ ಯಾವ ಪ್ರಾಣಿಯಿಂದ ಬರುತ್ತದೆ ?
– ಇಲಿ
9. ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ಯಾವ ವಿಟಮಿನ್ ಕೊಡುತ್ತದೆ ?
– ವಿಟಮಿನ್ “ಡಿ”
10. ವಿಟಮಿನ್ “ಎ” ಕೊರತೆಯಿಂದ ಯಾವ ರೋಗ ಬರುತ್ತದೆ ?
– ಇರುಳು ಕುರುಡು
11. ಸಸ್ಯಗಳು ಹಸಿರಾಗಲು ಕಾರಣ ಏನು ?
– ಕ್ಲೋರೋಫಿಲ್
12. ಮನುಷ್ಯನ ದೇಹದಲ್ಲಿ ಇರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ?
– 98.4 F
13. ಸಾಪೇಕ್ಷಿತ ಸಿದ್ದಾಂತ (ಥಿಯರಿ ಆಫ್ ರಿಲೇಟಿವಿಟಿ) ಕಂಡುಹಿಡಿದವರು ಯಾರು ?
– ಆಲ್ಬರ್ಟ್ ಐನ್ಸ್ಟೀನ್
14. ನಮ್ಮ ದೇಹದ ನಾನಾ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಕೊಂಡುಹೊಯ್ಯುವ ಪ್ರಮುಖ ನಾಳ ಯಾವುದು ?
– ಅಭಿದಮನೆ
15. ಮನುಷ್ಯನು ತನ್ನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ಹೊಂದಿರುತ್ತಾನೆ ?
– 7 %
16. ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಮುಖ ಕಾರ್ಯವೇನು ?
– ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುತ್ತದೆ
17. ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆ ಯಾವುದು ?
– ಸುಕ್ರೋಸ್
18. ಅತಿ ವೇಗವಾಗಿ ಬೆಳೆಯುವ ಮರ ಯಾವುದು ?
– ನೀಲಗಿರಿ ಮರ
19.ಬಾಹ್ಯಾಕಾಶದಲ್ಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಲ್ಲಿ ಕಾಣುತ್ತದೆ ?
– ಕಪ್ಪು ಬಣ್ಣ
20. ಅತಿ ಹಗುರವಾದ ಮೂಲವಸ್ತು ಯಾವುದು ?
– ಜಲಜನಕ
21. ವಿಟಮಿನ್ ಎ ಅಂಶವು ಅತಿ ಹೆಚ್ಚು ಯಾವುದರಲ್ಲಿ ಕಂಡುಬರುತ್ತದೆ ?
– ಹಾಲು
22. ಪೋಲಿಯೋ ಕಾಯಿಲೆಯನ್ನು ಯಾವುದರಿಂದ ತಡೆಗಟ್ಟಬಹುದು ?
– ವ್ಯಾಕ್ಸಿನೇಷನ್
23. ವಿದ್ಯುತ್ ಬಲ್ಪ್ ನಲ್ಲಿರುವ ತಂತಿಯು ಯಾವುದರಿಂದ ಮಾಡಲ್ಪಟ್ಟಿರುತ್ತದೆ ?
– ಟಂಗ್ಸ್ಟನ್
24. ದೂರದರ್ಶನ ಕಂಡುಹಿಡಿದವರು ಯಾರು ?
– J. L ಬೇಯರ್ಡ್
25. ರೇಡರನ್ನು ಯಾವುದರ ಪತ್ತೆಗಾಗಿ ಉಪಯೋಗಿಸಲಾಗುತ್ತದೆ ?
– ಹಾರಾಡುವ ವಸ್ತುಗಳನ್ನು ಪತ್ತೆಹಚ್ಚಲು
26. ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ ?
– ಮೂತ್ರಪಿಂಡದ ಕಾಯಿಲೆಗೆ
27. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪ್ ಯಾವುದು ?
– ರೇಡಿಯೋ ಕಾರ್ಬನ್
28. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು ?
– ಮೋಟಾರ್
29. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು ?
4’C ನಲ್ಲಿ
30. ಟೆಟಾನಸ್( ಧನುರ್ವಾಯು)
ರೋಗ ಬರಲು ಕಾರಣ ಏನು ?
– ಕ್ಯಾಸ್ತಿಡಿಯಮ್ ಟೆಟಾನೈ
31. ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮಜೀವಿ ಯಾವುದು ?
– ಯೀಸ್ಟ್
32. ಜರ್ಮನ್ ಸಿಲ್ವರ್ ಎನ್ನುವ ಮಿಶ್ರ ಲೋಹದಲ್ಲಿ ಯಾವ ಲೋಹಗಳಿವೆ ?
– ತಾಮ್ರ, ನಿಕ್ಕಲ್ ಮತ್ತು ಸತು
33. ಬೆಳಕಿನ ವೇಗ ಒಂದು ಸೆಕೆಂಡಿಗೆ ಎಷ್ಟು ಕಿಲೋಮೀಟರ್ ನಲ್ಲಿದೆ ?
– ಮೂರು ಲಕ್ಷ ಕಿಲೋಮೀಟರ್
34. ಅಮೌಲಾಸ್ ಕಿಣ್ವ ಪಿಷ್ಟವನ್ನು ಏನನ್ನಾಗಿ ಪರಿವರ್ತಿಸುತ್ತದೆ ?
– ಮಾಲ್ಟೋಸ್
35. ಅರೆವಾಹಕಕ್ಕೆ ಉದಾಹರಣೆ ಯಾವುದು ?
– ಜರ್ಮನಿಯಂ
36. ಡೀಸೆಲ್ ಇಂಜಿನ್ ನಲ್ಲಿ ಯಾವುದು ಕಂಡು ಬರುತ್ತದೆ ?
– ಪಿಸ್ಟನ್
37. ಭೂಮಿಯ ವಿಮೋಚನ ವೇಗ ಎಷ್ಟು ?
– 11.2 ಕಿಲೋಮೀಟರ್ /ಸೆಕೆಂಡ್
38. ತುಕ್ಕಿನ ರಾಸಾಯನಿಕ ಸೂತ್ರ ಯಾವುದು ?
– Fe2o32H2o
39. ಟೆಂಡಲ್ ಪರಿಣಾಮ ಕಂಡು ಬರುವ ದ್ರಾವಣ ಯಾವುದು ?
– ನೀರು ಬೆರೆತ ಹಾಲು
40. ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕ ಯಾವುದು ?
– ಆರ್ಸೆನಿಕ್
41. ಯುರೇನಿಯಂ 238 ಇದರ ಅರ್ಧಾಯುಷ್ಯ ಎಷ್ಟು ?
– 4.5 ಬಿಲಿಯನ್ ವರ್ಷಗಳು
42. ವೇಗದ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಬಳಸುವ ಸಾಧನ ಯಾವುದು ?
– ಡಾಪ್ಲರ್ ರಾಡಾರ್ ಗನ್
43. ಪೆನ್ಸಿಲಿನ್ ಔಷಧಿಯನ್ನು ಕಂಡು ಹಿಡಿದವರು ಯಾರು ?
– ಅಲೆಕ್ಸಾಂಡರ್ ಫ್ಲೆಮಿಂಗ್
44. ತಾಮ್ರದ ಪರಮಾಣು ಸಂಖ್ಯೆ ಎಷ್ಟು ?
– 29
45. ಓಜೋನ್ ಪದರ ನಮ್ಮನ್ನು ಯಾವುದರಿಂದ ರಕ್ಷಿಸುತ್ತದೆ ?
– ನೇರಳಾತೀತ ಕಿರಣಗಳಿಂದ
46. ಅನಿಮೋ ಮೀಟರ್ ಅನ್ನು ಯಾವುದನ್ನು ಅಳೆಯಲು ಬಳಸುತ್ತಾರೆ ?
– ಗಾಳಿಯ ವೇಗ
47. ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡು ಬರುವುದು ಯಾವುದು ?
– ಮೀಥೇನ್
48. ವಿದ್ಯುತ್ ಪ್ರವಾಹದ ಘಟಕವನ್ನು ಯಾವ ರೀತಿ ವ್ಯಕ್ತಪಡಿಸಲಾಗುತ್ತದೆ !
– ಆಂಪಿಯರ್
49. ಯಾವ ಪ್ರಾಣಿಗಳಿಗೆ ಹಲ್ಲು ಇಲ್ಲ ?
– ಹಕ್ಕಿಗಳಿಗೆ
50. ಪ್ರತಿ ಮೂತ್ರ ಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ ಯಾವುದು ?
– ಅಡ್ರಿನಲ್ ಗ್ರಂಥಿ.