Top 50 important one liner GK questions series 09 for upcoming competitive examinations in Kannada
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ;
01. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು ?
– ಆಗುಂಬೆ
02. ಒಂದೇ ಸಮಾನ ಉಷ್ಣಾಂಶ ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆಗಳನ್ನು ಏನೆಂದು ಕರೆಯುವರು ?
– ಐಸೋಥರ್ಮ್ಸ್
03. ಹೊಸ 2,000 ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಗಳಲ್ಲಿ ಬರೆದಿರುತ್ತಾರೆ ?
– 17 ಭಾಷೆಗಳಲ್ಲಿ.
04. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆಯಲ್ಲಿರುವಂತೆ ಬಾಲಕ ಅಥವಾ ಬಾಲಕಿ ಎಂದರೆ ಎಷ್ಟು ವಯಸ್ಸಿನೊಳಗಿರುವರು ?
– 14 ವರ್ಷ ವಯಸ್ಸಿನೊಳಗಿನ ಮಗು
04. ಮಾನವನ ದೇಹದಲ್ಲಿ ಒಟ್ಟು ಎಷ್ಟು ಮೂಳೆಗಳಿವೆ ?
– 206
05. ಸೂರ್ಯನ ಕಿರಣಗಳಿಂದ ನಮಗೆ ಯಾವ ಜೀವ ಸತ್ವ ಸಿಗುತ್ತದೆ ?
– ಡಿ ಜೀವ ಸತ್ವ
06. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ನಿವೃತ್ತಿಯ ಗರಿಷ್ಠ ವಯಸ್ಸು ಎಷ್ಟು ?
– 65 ವರ್ಷಗಳು
07. WTO ( world Trade organisation) ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ ಎಲ್ಲಿದೆ ?
– ಜಿನೇವಾ
08. ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ?
– ಸಚಿನ್ ತೆಂಡೂಲ್ಕರ್
09. ಜಾಗತೀಕರಣ ಮತದಾನ ಹಕ್ಕು ಎಂದರೆನು ?
– ದೇಶದ ವಯಸ್ಕ ಪ್ರಜೆಗಳು ಮತದಾನ ಮಾಡುವುದು.
10. ಭಾರತದಲ್ಲಿರುವ ಅತ್ಯಂತ ಆಳದ ಚಿನ್ನದ ಗಣಿ ಯಾವುದು ?
– ಕೋಲಾರ (ಕರ್ನಾಟಕ)
11. ಕರ್ನಾಟಕದಲ್ಲಿ ರಾಗಿಯನ್ನು ಪ್ರಧಾನ ಬೆಳೆಯಾಗಿ ಎಲ್ಲಿ ಬೆಳೆಯುತ್ತಾರೆ ?
– ಕರ್ನಾಟಕದ ದಕ್ಷಿಣ ಭಾಗದಲ್ಲಿ
12. ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಬರೆದವರು ಯಾರು ?
– ಶಿವರಾಮ ಕಾರಂತ
13. ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯ ಎಲ್ಲಿದೆ ?
– ಅಲಹಾಬಾದ್
14. ಹಳದಿ ಕ್ರಾಂತಿಗೆ ಉದಾಹರಣೆ ಯಾವುದು ?
– ಎಣ್ಣೆ ಬೀಜಗಳು
15. ನೀಲಿ ಕ್ರಾಂತಿಗೆ ಉದಾಹರಣೆ ಯಾವುದು ?
– ಮತ್ಯೋದ್ಯಮ
16. ಬೆಳ್ಳಿ ಕ್ರಾಂತಿಗೆ ಉದಾಹರಣೆ ಯಾವುದು ?
– ರಸಗೊಬ್ಬರಗಳು
17. ಬೂದು ಕ್ರಾಂತಿಗೆ ಉದಾಹರಣೆ ಯಾವುದು ?
– ಮೊಟ್ಟೆಗಳು
18. ಜೋಗ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ?
– ಶರಾವತಿ ನದಿ
19. ಮಾಗೋಡು ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ?
– ಬೇಡ್ತಿ ನದಿ
20. ಗೋಕಾಕ್ ಜಲಪಾತ ಯಾವ ನದಿಯಿಂದ ಹುಟ್ಟುತ್ತದೆ ?
– ಘಟಪ್ರಭಾ
21. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಅರಣ್ಯವನ್ನು ಹೊಂದಿರುವ ಜಿಲ್ಲೆ ಯಾವುದು ?
– ವಿಜಯಪುರ
22. ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಯಾವ ನದಿ ಸಮೀಪದಲ್ಲಿದೆ ?
– ಶರಾವತಿ ನದಿ
23. ಅಪ್ರಾಪ್ತ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳ್ಳಗಾಗಿ, ಅಧಿಕಾರ ತ್ಯಜಿಸಬೇಕಾಗಿ ಬಂದ ಮೊದಲ ಮುಖ್ಯಮಂತ್ರಿ ಯಾರು ?
– ಜಯಲಲಿತಾ (ತಮಿಳುನಾಡು)
24. ಭಾರತದ ಯಾವ ನಗರವನ್ನು “ಸರೋವರಗಳ ನಗರ “ಎಂದು ಕರೆಯುತ್ತಾರೆ ?
– ಉದಯಪುರ
25. ಭಾರತದಲ್ಲಿ ಮೊದಲ ಉಣ್ಣೆ ಜವಳಿ ಕೈಗಾರಿಕೆ ಯಾವ ನಗರದಲ್ಲಿ ಸ್ಥಾಪಿಸಲಾಯಿತು ?
– ಕಾನ್ಪುರ
26. ಭಾರತದ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ “ಏಕ ಶೃಂಗಿ ರಿನ್ನೋ” ಕಂಡುಬರುತ್ತದೆ ?
– ಕಾಜಿರಂಗ ರಾಷ್ಟ್ರೀಯ ಉದ್ಯಾನ
27. ವಾತಾವರಣದ ಒತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು ?
– ಬಾರೋಮೀಟರ್
28. ” ಡೈನಮೋವನ್ನು “ಕಂಡುಹಿಡಿದವರು ಯಾರು ?
– ಮೈಕಲ್ ಪ್ಯಾರಡೆ
29. “ಸರಳ ಗಾಯಿಟರ್ “ಕಾಯಿಲೆಯೂ ಯಾವುದರ ಕೊರತೆಯಿಂದ ಉಂಟಾಗುತ್ತದೆ ?
– ಅಯೋಡಿನ್ ಕೊರತೆಯಿಂದ
30. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
– ಅರಿಸ್ಟಾಟಲ್
31. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಯಾವ ವರ್ಷದಲ್ಲಿ ನಡೆಯಿತು ?
– 1924ರಲ್ಲಿ
32. ಜಲಿಯನ್ ವಾಲಾಬಾಗ್ ನಲ್ಲಿ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆ ನೀಡಿದವರು ಯಾರು ?
– ಜನರಲ್ ಡಯರ್
33. ಕೊರತೆ/ದೋಷಗಳ ಸಿದ್ದಾಂತವನ್ನು ರೂಪಿಸಿದವರು ಯಾರು ?
– ಲಾರ್ಡ್ ಡಾಲ್ ಹೌಸಿ
34. “ಚೌಥ್ ಮತ್ತು ಸರ್ದೇಶಮುಕ್”
ಎಂಬ ತೆರಿಗೆಯನ್ನು ವಿಧಿಸಿದವರು ಯಾರು ?
– ಶಿವಾಜಿ
35. ಪ್ರಪಂಚದಲ್ಲಿ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ?
– ರಷ್ಯಾ
36. ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಪರಿಷತ್ ಎಲ್ಲಿದೆ ?
– ಡೆಹ್ರಾಡೂನ
37. ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ ?
– ಹೈದರಾಬಾದ್
38. ಹಿಮಾಲಯ ಅರಣ್ಯ ಸಂಶೋಧನಾ ಕೇಂದ್ರ ಎಲ್ಲಿದೆ ?
– ಶಿಮ್ಲಾ
39. ಭಾರತದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಯಾರು ?
– ಶ್ರೀಮತಿ ಪ್ರತಿಭಾ ಪಾಟೀಲ್
40. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ?
– ಸಹರಾ ಮರುಭೂಮಿ
41. ಮೊದಲ ಸ್ವಾತಂತ್ರ್ಯ ದಿನಾಚರಣೆ ಯಾದ ಆಗಸ್ಟ್ 15 1947 ಯಾವ ದಿನವಾಗಿತ್ತು ?
– ಶುಕ್ರವಾರ
42. ಒಂದು ರೂಪಾಯಿ ಕರೆನ್ಸಿ ನೋಟಿನ ಮೇಲೆ ಯಾರ ಸಹಿ ಇದೆ ?
– ಕೇಂದ್ರ ಹಣಕಾಸು ಕಾರ್ಯದರ್ಶಿ
43. ಕರ್ನಾಟಕದ ನದಿಗಳ ಪೈಕಿ ಯಾವುದರಲ್ಲಿ ಅತಿ ಹೆಚ್ಚಿನ ಜಲ ಸಾರಿಗೆ ಇದೆ ?
– ತುಂಗಭದ್ರಾ
44. ಕರ್ನಾಟಕದ ಅತ್ಯಂತ ಎತ್ತರದ ಶಿಖರ ಯಾವುದು ?
– ಬಾಬಾ ಬುಡನ್ ಗಿರಿ
45. ಕರ್ನಾಟಕದ ಪೋಲಿಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ?
– 1963
46. ಕರ್ನಾಟಕದ ಲೋಕಸಭಾ ಸದಸ್ಯರ ಸ್ಥಾನಗಳ ಸಂಖ್ಯೆ ಎಷ್ಟು ?
– 28
47. ಪ್ರಕಾಶ್ ಪಡುಕೋಣೆ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಬ್ಯಾಡ್ಮಿಂಟನ್
48. ರೋಹನ್ ಬೋಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಟೆನ್ನಿಸ್
49. ಪಂಕಜ್ ಅಡ್ವಾಣಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಸ್ನೂಕರ್
50. ರೋಜರ್ ಬಿನ್ನಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಕ್ರಿಕೆಟ್