Top 50 Indian constitution questions and answers for IAS KAS NDA STATE PSE exams
ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-4 :
01. ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು ಯಾವಾಗ ?
– 1952 ಮೇ 13 ರಂದು
02. ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
– 250ಸದಸ್ಯರು
03. ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ ಎಷ್ಟು ?
– 245 ಸದಸ್ಯರು
04. ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ?
– 238 ಸದಸ್ಯರು
05. ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ ಎಷ್ಟು ?
– 12
06. ರಾಜ್ಯಸಭೆ ಅಧ್ಯಕ್ಷರ ಕನಿಷ್ಠ ವಯಸ್ಸು ಎಷ್ಟು ?
– 35 ವರ್ಷಗಳು
07. ರಾಜ್ಯಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ?
– 5 ವರ್ಷಗಳು
08. ರಾಜ್ಯಸಭೆ ಸದಸ್ಯರ ಅಧಿಕಾರಾವಧಿ ಎಷ್ಟು ವರ್ಷಗಳು ?
– 6 ವರ್ಷಗಳು
– ರಾಜ್ಯ ಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ಅರೆಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ.
09. ರಾಜ್ಯಸಭೆಯ ಸದಸ್ಯರನ್ನು ಯಾರು ಚುನಾಯಿಸುತ್ತಾರೆ ?
– ಆಯಾ ರಾಜ್ಯದ ವಿಧಾನಸಭಾ ಚುನಾಯಿತ ಸದಸ್ಯರು ಚುನಾಯಿಸುತ್ತಾರೆ.
10. ರಾಜ್ಯಸಭೆಯ ಅಧ್ಯಕ್ಷರು ಯಾರು ?
– ಉಪರಾಷ್ಟ್ರಪತಿಗಳು
11. ರಾಜ್ಯಸಭೆ ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ?
– ರಾಷ್ಟ್ರಪತಿಗಳಿಗೆ
12. ರಾಜ್ಯಸಭೆಯ ಉಪಸಭಾಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ?
– ರಾಜ್ಯಸಭೆಯ ಅಧ್ಯಕ್ಷರಿಗೆ
13. ಭಾರತದ ರಾಷ್ಟ್ರಪತಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮೊದಲು ಎಲ್ಲಿ ಮಂಡಿಸಬೇಕು ?
– ರಾಜ್ಯಸಭೆಯಲ್ಲಿ
14. ಲೋಕಸಭೆಯ ಪ್ರಥಮ ಸ್ಪೀಕರ್ ಯಾರು ?
– ಜ. ವಿ ಮಾವಳo ಕರ್
15. ಲೋಕಸಭೆಯ ಪ್ರಥಮ ಉಪ ಸ್ಪೀಕರ್ ಯಾರು ?
– ಎಂ ಎ ಅಯ್ಯಂಗಾರ್
16. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ?
– ಮೀರಾ ಕುಮಾರ್
17. ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ ಯಾರು ?
– ಸುಮಿತ್ರಾ ಮಹಾಜನ್.
18. ಭಾರತದ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು ?
– 1950 ಜನವರಿ 28ರಂದು
19. ಭಾರತದ ಸುಪ್ರೀಂಕೋರ್ಟ್ ಇರುವುದು ಎಲ್ಲಿ ?
– ನವದೆಹಲಿ
20. ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶರು ಯಾರು ?
– ಎಂ ಫಾತಿಮಾ ಬೀಬಿ
21. ಸುಪ್ರೀಂ ಕೋರ್ಟ್ ಗೆ ನೇರವಾಗಿ ವಕೀಲ ವೃತ್ತಿಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ ಯಾರು ?
– ಇಂದೂ ಮಲೋತ್ರ
22. ಸಂವಿಧಾನದ ರಕ್ಷಕರು ಯಾರು ?
– ಸುಪ್ರೀಂ ಕೋರ್ಟ್
23. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ?
– 65 ವರ್ಷಗಳು
24. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಯಾರು ಪ್ರಮಾಣವಚನ ಬೋಧಿಸುತ್ತಾರೆ ?
– ರಾಷ್ಟ್ರಪತಿಗಳು
25. ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ ಎಷ್ಟು ?
– 34
26. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
27. ಕೊಲಿಜಿಯಂ ಸಮಿತಿಯ ಅಧ್ಯಕ್ಷರು ಯಾರು ?
– ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು
28. ಕೊಲಿಜಿಯಂ ಸಮಿತಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ?
– ಸುಪ್ರೀಂ ಕೋರ್ಟ್ನ ನಾಲ್ಕು ಜನ ಹಿರಿಯ ನ್ಯಾಯಾಧೀಶರು.
29. ಭಾರತದ ಸುಪ್ರೀಂ ಕೋರ್ಟ್ ನ ಪ್ರಥಮ ಮುಖ್ಯ ನ್ಯಾಯಾಧೀಶರು ಯಾರು ?
– ಹರಿಲಾಲ್ ಜೆ ಕಾನೀಯ
30. ಭಾರತದ ಪ್ರಥಮ ಮಹಾ ಲೆಕ್ಕಪರಿಶೋಧಕರು ಯಾರು ?
– ವಿ ನರಹರಿ ರಾವ್
31. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಯವರು ಯಾವ ಕ್ರಮ ಕೈಗೊಳ್ಳಬಹುದು ?
– ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳುಹಿಸಬಹುದು
32. ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ?
– ಐದು ವರ್ಷಗಳು
33. ರಾಷ್ಟ್ರಪತಿಯವರಿಗೆ ಯಾರು ಪ್ರಮಾಣವಚನವನ್ನು ಬೋಧಿಸುತ್ತಾರೆ ?
– ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು
34. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ?
– ಆರು ತಿಂಗಳು
35. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ಎಷ್ಟು ?
– 35 ವರ್ಷಗಳು
36. ಭಾರತದ ಎರಡನೇ ರಾಷ್ಟ್ರಪತಿ ಯಾರು ?
– ಡಾ|| ಎಸ್ ರಾಧಾಕೃಷ್ಣನ್
37. ಭಾರತದ ಸಂವಿಧಾನ ದಡಿಯಲ್ಲಿ” ಒಕ್ಕೂಟದ ಕಾರ್ಯನಿರ್ವಹಣಾಧಿಕಾರ “ಯಾರಿಗಿದೆ ?
– ರಾಷ್ಟ್ರಪತಿಯವರಿಗೆ
38. ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಕನ್ನಡಿಗರು ಯಾರು ?
– ಬಿ. ಡಿ ಜತ್ತಿ
39. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
40. ರಾಷ್ಟ್ರಪತಿಯವರನ್ನು ಸೇವೆಯಿಂದ ತೆಗೆದುಹಾಕಲು ಭಾರತ ಸಂವಿಧಾನದಲ್ಲಿ ಸೂಚಿಸಿರುವ ವಿಧಾನ ಯಾವುದು ?
– ದೋಷಾರೋಪಿಸುವ ಮೂಲಕ (impeachment)
41. ಅಖಿಲ ಭಾರತ ಸೇವೆಗಳ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
42. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ತೆಗೆಯುವ ಅಧಿಕಾರ ಯಾರಿಗಿದೆ ?
– ರಾಷ್ಟ್ರಪತಿಯವರಿಗೆ
43. ರಾಷ್ಟ್ರಪತಿಯವರು ಯಾರಿಂದ ನೆರವು ಮತ್ತು ಸಲಹೆಗಳನ್ನು ಪಡೆದುಕೊಳ್ಳಬಹುದು ?
– ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟದಿಂದ
44. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಬಹುದು ?
– ಪಾರ್ಲಿಮೆಂಟ್ ಅಧಿವೇಶನದಲ್ಲಿ ಇಲ್ಲದಿದ್ದಾಗ
45. ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನು ರೀತಿಯಲ್ಲಿ ಯಾರು ಹೊರಡಿಸಬಹುದು ?
– ಭಾರತದ ರಾಷ್ಟ್ರಪತಿಗಳು
46. ಭಾರತದ ರಾಷ್ಟ್ರಪತಿಗಳು ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕಾದರೆ ಯಾರಿಗೆ ನೀಡಬೇಕು ?
– ಉಪರಾಷ್ಟ್ರಪತಿಗಳಿಗೆ
47. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ?
– ರಾಷ್ಟ್ರಪತಿಗಳು
48. ಭಾರತದ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು ?
– 12 ಸದಸ್ಯರು
49. ಭಾರತದ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆ
ಯಾಗುವ ಸದಸ್ಯರ ಸಂಖ್ಯೆ ಎಷ್ಟು ?
– 28 ಸದಸ್ಯರು
50. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯರು ಯಾರು ?
– ಅಟಲ್ ಬಿಹಾರಿ ವಾಜಪೇಯಿ