Top 50 One liner Indian constitution GK questions
ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು ಭಾಗ-3 :
01. ಭಾರತದ ರಾಷ್ಟ್ರಪತಿಯವರು ಯಾರಿಂದ ಆರಿಸಲ್ಪಡುತ್ತಾರೆ ?
– ಲೋಕಸಭೆ ರಾಜ್ಯಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರಿಂದ.
02. ಭಾರತದ ರಾಷ್ಟ್ರಪತಿಯವರು ವಿಶಿಷ್ಟ ಸಾಧನೆಯ 12 ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ, ಆ ವ್ಯಕ್ತಿಗಳು ಯಾವ ವಿಷಯದ ಬಗ್ಗೆ ಅನುಭವವನ್ನು ಹೊಂದಿರಬೇಕು ?
– ಕಲೆ ಸಾಹಿತ್ಯ ವಿಜ್ಞಾನ ಮತ್ತು ಸಮಾಜ ಸೇವೆ.
03. ಯಾವ ಮಸೂದೆಯನ್ನು ಹೊಸದಾಗಿ ಪರಿಶೀಲನೆಗೆ ವಾಪಸ್ಸು ಕಳಿಸದೆ ರಾಷ್ಟ್ರಪತಿಯವರು ತಾವೇ ಅನುಮತಿ ನೀಡುತ್ತಾರೆ ?
– ಹಣಕಾಸು ಮಸೂದೆ
04. ಮಸೂದೆಯು ಸಂವಿಧಾನಾತ್ಮಕ ವಿದೆಯೋ ಅಥವಾ ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಗಳು ಯಾವ ಕ್ರಮ ತೆಗೆದುಕೊಳ್ಳಬಹುದು ?
– ಮಸೂದೆಯನ್ನು ಸುಪ್ರೀಂ ಕೋರ್ಟ್ ನ ಅಭಿಪ್ರಾಯಕ್ಕೆ ಕಳಿಸಬಹುದು
05. ಭಾರತದ ರಾಷ್ಟ್ರಪತಿಗಳು ಸೀಮಿತ ಶಕ್ತಿಗಳನ್ನು ಹೊಂದಿದ್ದಾರೆ ಏಕೆಂದರೆ ?
– ರಾಷ್ಟ್ರಪತಿಯವರಿಗೆ ನಾಮ ಮಾತ್ರ ಅಧಿಕಾರವಿರುತ್ತದೆ
– ರಾಷ್ಟ್ರಪತಿಯವರು ಎಲೆಕ್ಟ್ರೋಲ್ ಕಾಲೇಜ್ ನಿಂದ ಚುನಾಯಿತರಾಗಿರುತ್ತಾರೆ
06. ಭಾರತದ ರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ವರ್ಷ ?
– 5 ವರ್ಷಗಳು
07. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ?
– ಭಾರತದ ರಾಷ್ಟ್ರಪತಿಯವರು
08. ರಾಷ್ಟ್ರಪತಿಯವರಿಗೆ ಪ್ರಮಾಣವಚನವನ್ನು ಯಾರು ಬೋಧಿಸುತ್ತಾರೆ ?
– ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು
09. ರಾಷ್ಟ್ರಪತಿಯವರು ಸಂವಿಧಾನದ ಯಾವ ವಿಧಿಯ ಪ್ರಕಾರ ಕ್ಷಮಾದಾನ ಮಾಡುತ್ತಾರೆ ?
– ಸಂವಿಧಾನದ 72ನೇ ವಿಧಿ
10. ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡವಳಿಕೆಗೆ ಮುಂದೆ , ಕಾಣಿಸಿದ ಒಬ್ಬರಿಗೆ ಮಾತ್ರ ಜವಾಬ್ದಾರಿಯರಾಗಿರುತ್ತಾರೆ ?
– ರಾಷ್ಟ್ರಪತಿ
11. ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಉಪರಾಷ್ಟ್ರಪತಿಯವರು ಎಷ್ಟು ಸಮಯ ಅಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಬಹುದು ?
– ಆರು ತಿಂಗಳು.
12. ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು ?
– ಬಾಬು ರಾಜೇಂದ್ರ ಪ್ರಸಾದ್
13. ಭಾರತದ ಪ್ರಥಮ ಉಪರಾಷ್ಟ್ರಪತಿಗಳು ಯಾರು ?
– ಎಸ್ ರಾಧಾಕೃಷ್ಣನ್ ಅವರು
14. ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– ಸೆಪ್ಟಂಬರ್ 5
15. ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿಗಳು ಯಾರು ?
ವಿ. ವಿ. ಗಿರಿ
16. ಭಾರತದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ರಾಷ್ಟ್ರಪತಿ ಯಾರು ?
– ಫಕ್ರುದ್ದೀನ್ ಅಲಿ ಮಹಮ್ಮದ್
17. ಭಾರತದಲ್ಲಿ ಅವಿರೋಧವಾಗಿ ಆಯ್ಕೆಯಾದ ಮೊದಲ ರಾಷ್ಟ್ರಪತಿ ಯಾರು ?
– ಎನ್ ಸಂಜೀವ ರೆಡ್ಡಿ
18. ಭಾರತದ ಕ್ಷಿಪಣಿ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ?
– ಡಾ|| ಎ. ಪಿ. ಜೆ ಅಬ್ದುಲ್ ಕಲಾಂ
19. ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು ?
– ಶ್ರೀಮತಿ ಪ್ರತಿಭಾ ಪಾಟೀಲ್
20. ಭಾರತದ 15ನೇ ರಾಷ್ಟ್ರಪತಿಗಳು ಯಾರು ?
– ದ್ರುಪದಿ ಮುರ್ಮು
21. ಭಾರತದ ಮೊದಲ ಉಪರಾಷ್ಟ್ರಪತಿಗಳು ಯಾರು ?
– ಡಾ|| ಎಸ್. ರಾಧಾಕೃಷ್ಣನ್
22. ಭಾರತದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು ?
– 25 ವರ್ಷ
23. ಭಾರತದ ರಾಜ್ಯಸಭೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ?
– 30 ವರ್ಷ
24. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ?
– 35 ವರ್ಷಗಳು
25. ಭಾರತದ ಮೊದಲ ಪ್ರಧಾನ ಮಂತ್ರಿ ಯಾರು ?
– ಪಂಡಿತ್ ಜವಾಹರ್ ಲಾಲ್ ನೆಹರು
26. ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ ಯಾವುದು ?
– 1950 ಮಾರ್ಚ್ 15 ರಂದು
27. ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು ?
– 1949 ನವೆಂಬರ್ 26ರಂದು
28. ಭಾರತದ ಸಂವಿಧಾನ ಜಾರಿಯಾದ ವರ್ಷ ಯಾವುದು ?
– 1950 ಜನವರಿ 26.
29. ಅಲಿಪ್ತ ಚಳುವಳಿಯ ಪಿತಾಮಹ ಯಾರು ?
– ಪಂಡಿತ್ ಜವಾಹರ್ ಲಾಲ್ ನೆಹರು
30. ಭಾರತದ ವಿದೇಶಾಂಗ ನೀತಿ ಶಿಲ್ಪಿ ಯಾರು ?
– ಪಂಡಿತ್ ಜವಾಹರ್ ಲಾಲ್ ನೆಹರು
31. ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರು ?
– ಶ್ರೀಮತಿ ಇಂದಿರಾಗಾಂಧಿ
32. ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– ಜನವರಿ 24ರಂದು
33. ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ ?
– ಬೆಂಗಳೂರು
34. ಶಿಮ್ಲಾ ಒಪ್ಪಂದ ನಡೆದ ವರ್ಷ ಯಾವುದು ?
– 1972
35. ಭಾರತದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿಯನ್ನು ಯಾವಾಗ ಘೋಷಿಸಲಾಯಿತು ?
– 1975ರಲ್ಲಿ , ಭಾರತದ ರಾಷ್ಟ್ರಪತಿಯಾದ ಫಕ್ರುದ್ದೀನ್ ಅಲಿ ಅಹಮದ್
36. ಭಾರತದಲ್ಲಿ ಆರಿಸಿದ ಮೊದಲ ಉಪಗ್ರಹ ಯಾವುದು ?
– ಆರ್ಯಭಟ
37. ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಯಾದ ವರ್ಷ ಯಾವುದು ?
– 1976ರಂದು
38. ಗರೀಬಿ ಹಟಾವೋ ಘೋಷಣೆ ಮಾಡಿದವರು ಯಾರು ?
– ಶ್ರೀಮತಿ ಇಂದಿರಾ ಗಾಂಧಿ
39. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತದ ಪ್ರಧಾನ ಮಂತ್ರಿ ಯಾರು ?
– ಶ್ರೀ ಮುರಾರ್ಜಿ ದೇಸಾಯಿ
40. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ವ್ಯಕ್ತಿ ಯಾರು ?
– ಶ್ರೀ ಮುರಾರ್ಜಿ ದೇಸಾಯಿ
41. NSE ( ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಸ್ಥಾಪನೆಯಾದ ವರ್ಷ ಯಾವುದು ?
– 1992
42. ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕನ್ನಡದ ಏಕೈಕ ವ್ಯಕ್ತಿ ಯಾರು ?
– ಶ್ರೀ ಎಚ್ ಡಿ ದೇವೇಗೌಡರು
43. ಹಣಕಾಸು ಮಸೂದೆಯನ್ನು ಮೊದಲು ಎಲ್ಲಿ ಮಂಡಿಸಬೇಕು ?
– ಲೋಕಸಭೆಯಲ್ಲಿ
44. ” ಗಿಲೋಟಿನ್” ಎಂದರೇನು ?
– ಅನುದಾನದ ಬೇಡಿಕೆಗಳನ್ನು ಚರ್ಚೆ ಇಲ್ಲದೆ ಅನುಮೋದನೆಗೆ ಕೊನೆ ದಿನ ಸಲ್ಲಿಸುವುದು.
45. ಪ್ರಶ್ನಾ ಅವಧಿ ಎಂದರೇನು ?
– ಸಂಸತ್ತಿನ ಅಧಿವೇಶನದ ಪ್ರಾರಂಭದ ಅವಧಿ
46. ಶೂನ್ಯ ಅವಧಿ ಎಂದರೇನು ?
– ಪ್ರಶ್ನಾ ಅವಧಿಯ ನಂತರದ ಅವಧಿಯನ್ನು ಶೂನ್ಯ ಅವಧಿ ಎನ್ನುವರು
47. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
– 543+2 = 545 ಸದಸ್ಯರು
48. ಲೋಕಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ ಎಷ್ಟು ?
– 543 ಸದಸ್ಯರು
49. ಲೋಕಸಭಾ ಸದಸ್ಯರ ಒಟ್ಟು ಅಧಿಕಾರವಧಿ ಎಷ್ಟು ?
– 5 ವರ್ಷಗಳು
50. ಕರ್ನಾಟಕದಿಂದ ಆಯ್ಕೆಯಾಗುವ ಒಟ್ಟು ಲೋಕಸಭಾ ಸದಸ್ಯರು ಎಷ್ಟು ?
– 28 ಸದಸ್ಯರು