Site icon Compitative Exams MCQ Questions and Answers

Top 50 (ಭಾರತದ ಅರ್ಥಶಾಸ್ತ್ರ) Indian Economics one liner question series 01 PC and PSI repeated questions for VAO PDO SSC MTS CHSL and CGL exams.

Contents show
1 ಭಾರತದ ಅರ್ಥಶಾಸ್ತ್ರ – 01

ಭಾರತದ ಅರ್ಥಶಾಸ್ತ್ರ – 01

1. ವಿಶ್ವದಲ್ಲಿ ಭಾರತವು ಜನಸಂಖ್ಯೆಯ ಗಾತ್ರಕ್ಕೆ ಸಂಬಂಧಿಸಿದಂತೆ, ಎಷ್ಟನೇ ಸ್ಥಾನದಲ್ಲಿದೆ ?

ದ್ವಿತೀಯ ಸ್ಥಾನದಲ್ಲಿದೆ 

2. ಐದನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಗುರಿ ಏನು ?

ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 

3. ICICI ಒಂದು ಏನು ?

ಹಣಕಾಸು ಸಂಸ್ಥೆ (ಬ್ಯಾಂಕ್)

4. ವಿಶ್ವ ಬ್ಯಾಂಕಿನ ಇನ್ನೊಂದು ಹೆಸರು ಏನು ?

IBRD 

5. ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು ಯಾವಾಗ ?

 ಏಪ್ರಿಲ್ 01

6. ಮಾರಾಟ ಮಾರುಕಟ್ಟೆಯು ಸೂಚಿಸುವ ಸ್ಥಿತಿ ಏನು ?

ಬೇಡಿಕೆ ಮಾರಾಟಕ್ಕಿಂದ ಹೆಚ್ಚಿರುತ್ತದೆ 

7. ಬಂಡವಾಳ ಆರ್ಥಿಕತೆಯಲ್ಲಿ, ಉತ್ಪನ್ನವನ್ನು ನಿಶ್ಚಯಿಸುವುದು ಯಾವುದು ?

ಬೇಡಿಕೆ ಹಾಗೂ ಮಾರಾಟ ಶಕ್ತಿಗಳಿಂದ 

8. “Law of demand” ಏನನ್ನು ಸೂಚಿಸುತ್ತದೆ ?

ಬೆಲೆಕುಸಿದಾಗ ಬೇಡಿಕೆ ಹೆಚ್ಚಾಗುತ್ತದೆ 

9. ಕಳಪೆ  ಗುಣ ಮಟ್ವದ ವಸ್ತುಗಳ ಬೆಲೆ ಕುಸಿದರೆ ಅದರ ಬೇಡಿಕೆ ಏನಾಗುತ್ತದೆ ?

ಹೆಚ್ಚಾಗುತ್ತದೆ

10. “ಪಂಚವಾರ್ಷಿಕ ಯೋಜನೆಯನ್ನು” ಕಲ್ಪಿಸಿದವರು ಹಾಗೂ ಭಾರತಕ್ಕೆ ಮೊದಲು ಪರಿಚಯಿಸಿದವರು ಯಾರು ?

ಜವಾಹರ್ ಲಾಲ್ ನೆಹರು 

11. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು ?

ಜವಾಹರ್ ಲಾಲ್ ನೆಹರು 

12. ಭಾರತದ ಮೊದಲ “ಭಾರತೀಯ ಬ್ಯಾಂಕ್” ಯಾವುದು ?

ಕೊಲ್ಕತ್ತಾದ ಪ್ರೆಸಿಡೆನ್ಸಿ ಬ್ಯಾಂಕ್ 

13. 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದವರು ಯಾರು ?

ಇಂದಿರಾ ಗಾಂಧಿ 

14 . ಯಾವ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ?

ಎರಡನೇ ಪಂಚವಾರ್ಷಿಕ ಯೋಜನೆ 

15. ಜವಾಹರ್ ರೋಜ್ ಗಾರ್ ಯೋಜನೆಯ ಉದ್ದೇಶ ಏನು ?

ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು 

16. ಭಾರತದಲ್ಲಿ ಕೆಳಕಂಡ ಯಾವ ಬ್ಯಾಂಕಿನಿಂದ ಕೇಂದ್ರೀಯ ಹಣಕಾಸಿನ ಕಾರ್ಯಗಳು ನಡೆಯುತ್ತವೆ ?

ಭಾರತೀಯ ರಿಸರ್ವ್ ಬ್ಯಾಂಕ್ 

17. ಭಾರತದಲ್ಲಿ “ಆಪರೇಷನ್ ಫ್ಲಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ ?

ಹಾಲು ಉತ್ಪಾದನೆಗೆ

18. ಹಣದ ಅಪಮೌಲ್ಯ ಎಂದರೇನು ?

ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿದ ಹಣದೊಂದಿಗೆ ಹೋಲಿಸಿದಾಗ, ಹಣದ ಮೌಲ್ಯ ಕಡಿಮೆಯಾಗುವುದೆ ಹಣದ ಅಪಮೌಲ್ಯ. 

19. ಭಾರತದ ಯಾವ ರಾಜ್ಯವು ಗರಿಷ್ಠ ಲಿಂಗಾನುಪಾತ ಹೊಂದಿದೆ ?

ಕೇರಳ 

20. ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು ?

ಭಾರತೀಯ ಸ್ಟೇಟ್ ಬ್ಯಾಂಕ್ 

21. 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು ?

121 ಕೋಟಿ 

22. Sex ratio ಅಥವಾ ಲಿಂಗಾನುಪಾತ ಎಂದರೇನು ?

ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ. 

23. ಜೀವ ನಿರೀಕ್ಷಿಸುವಿಕೆ ಎಂದರೇನು ?

ಮನುಷ್ಯನು ಸರಾಸರಿ ಬದುಕುವಿಕೆಯ ಕಾಲ 

24. ಎಚ್ ಡಿ ಐ (HDI) ಎಂದರೇನು ?

ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ (ಮಾನವ ಅಭಿವೃದ್ಧಿ ಸೂಚ್ಯಂಕ) 

25. ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸುತ್ತಾರೆ ?

ಹಣಕಾಸು ಸಚಿವಾಲಯದ ಪರವಾಗಿ RBI ಮುದ್ರಿಸುತ್ತದೆ

26. ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಸಾಮಗ್ರಿ ಮತ್ತು ಸೇವೆಗಳನ್ನು ಮಾರುಕಟ್ಟೆ ದರದಲ್ಲಿ ನಿಗದಿತ ಅವಧಿ ಒಳಗೆ, ಯಾವುದು ಸೂಚಿಸುತ್ತದೆ ?

GDP

27. SEBI(security exchange board of India) ಯಾವುದಕ್ಕೆ ಸಂಬಂಧಿಸಿದೆ ?

ಷೇರು ಮಾರುಕಟ್ಟೆಗೆ 

28. 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದ ಸಾಕ್ಷರತೆ ಪ್ರಮಾಣ ಎಷ್ಟು ?

75%

29. “ವೆಲ್ತ್ ಆಫ್ ನೇಶನ್” ಕೃತಿಯ ಕರ್ತೃ ಯಾರು ?

ಆಡಂ ಸ್ಮಿತ್ 

30. ಇಳಿತಾಯ ಎಂದರೇನು ?

ಕಾರ್ಖಾನೆಯಲ್ಲಿ ಯಂತ್ರೋಪಕರಣಗಳನ್ನು ಒಂದು ಅವಧಿಯವರೆಗೆ ಬಳಸಿದ್ದರಿಂದ ,ಅದರ ಮೌಲ್ಯದಲ್ಲಿ ಇಳಿಕೆಯಾಗುವುದೇ ಇಳಿತಾಯ 

31. ಭಾರತವನ್ನು “ಜನಸಂಖ್ಯೆ ಲಾಭಾಂಶದ” ದೇಶವೆಂದು ಪರಿಗಣಿಸಿದ್ದು ಹೇಗೆ ?

15 ರಿಂದ 60 ವರ್ಷ ವಯಸ್ಸಿನ ಒಳಗಿನವರು ಹೆಚ್ಚಿನ ಜನಸಂಖ್ಯೆ ಇರುವುದರಿಂದ.

32. ಎಫ್ ಡಿ ಐ (FDI) ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ?

ಬ್ಯಾಂಕಿಂಗ್ ವಿಭಾಗಕ್ಕೆ 

33. ಪ್ರಪಂಚದ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು ?

ರಷ್ಯಾ 

34. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಭಾರತದಲ್ಲಿ ವಾಸಿಸುತ್ತಿರುವರ ಪ್ರಮಾಣ ಎಷ್ಟು ?

17.3% 

35. “AGMARK” ಚಿನ್ನೆಯನ್ನು ಯಾವ ಉತ್ಪನ್ನಗಳ ಮೇಲೆ ಬಳಸುತ್ತಾರೆ ?

ವ್ಯವಸಾಯ ಉತ್ಪನ್ನಗಳ ಮೇಲೆ ಬಳಸುತ್ತಾರೆ 

36. ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿ ಯಾವ ವಲಯಕ್ಕೆ ಸೇರಿದೆ ?

ಪ್ರಾಥಮಿಕ ವಲಯಕ್ಕೆ 

37. ಕರೆನ್ಸಿ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ ?

17 ಭಾಷೆಗಳಲ್ಲಿ ಬರೆದಿರುತ್ತಾರೆ 

38. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು ಯಾವ ಉತ್ಪನ್ನದ ಮೇಲೆ ?

ಸರಕುಗಳ ಉತ್ಪಾದನೆಯ ಮೇಲೆ 

39. ಭಾರತದಲ್ಲಿ ಹಣದುಬ್ಬರವನ್ನು ಯಾವ ರೀತಿ ನಿರ್ಧರಿಸುತ್ತಾರೆ ?

ಸಗಟು ಮಾರಾಟ ಬೆಲೆ ಸೂಚ್ಯಂಕದ ಮೇಲೆ. 

40. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರುವುದನ್ನು ಏನೆಂದು ಕರೆಯುವರು ?

ಶಾಸನಬದ್ಧ ದ್ರವ್ಯತೆ ಅನುಪಾತ (statuary liquidity ratio)

41. ಕಡಿಮೆ ಮಾರಾಟಗಾರರು ಮತ್ತು ಬಹಳ ಖರೀದಿದಾರರನ್ನು ಹೊಂದಿರುವ, ಮಾರುಕಟ್ಟೆಯ ವಿನ್ಯಾಸ ಏನು ?

ಅಲ್ಪಸಂಖ್ಯಾ ಸ್ವಾಮ್ಯ

42. “ಮಾರುವೇಷದ ನಿರುದ್ಯೋಗ” ಎಂದರೇನು ?

ಕಡಿಮೆ ಸಂಖ್ಯೆಯ ಜನರಿಂದ ನಿರ್ವಹಿಸಲ್ಪಡಬಹುದಾದ ಉದ್ಯೋಗವನ್ನು ಜಾಸ್ತಿ ಸಂಖ್ಯೆ ಜನರು ಮಾಡುವುದು.

43. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ ಯಾವುದು ?

ಉತ್ತರ ಪ್ರದೇಶ 

44. “ಮುದ್ರಾ ಯೋಜನೆಯ” ಗುರಿ ಏನು ?

ಚಿಕ್ಕ ಉದ್ದಿಮೆದಾರರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಯೊಳಗೆ ತರುವುದು 

45. ಜಾಗತಿಕ ಲಿಂಗ ಅಂತರ ವರದಿಯನ್ನು, ತಯಾರಿಸಿ ಬಿಡುಗಡೆ ಮಾಡುವ ಸಂಸ್ಥೆ ಯಾವುದು ?

World Economic Forum.

46. ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ , ಸತತ ಕುಸಿತವು ಏನನ್ನು ಸೂಚಿಸುತ್ತದೆ ?

ಹಣ ದುಬ್ಬರವಿಳಿತ.

47. ಯಾವ ಉತ್ಪನ್ನಗಳು GST ಅಡಿಯಲ್ಲಿ ಬರುವುದಿಲ್ಲ ?

ಪೆಟ್ರೋಲಿಯಂ , ಮಧ್ಯಸಾರ ಮತ್ತು LPG 

48. ಒಂದು ಅರ್ಥ ವ್ಯವಸ್ಥೆಯಲ್ಲಿ “ಟೆಕ್ ಆಫ್ ಹಂತ” ಎಂದರೇನು ?

ಸ್ಥಿರ ಬೆಳವಣಿಗೆಯ ಪ್ರಾರಂಭ 

49. ಹಣದುಬ್ಬರ ಎಂದರೇನು ?

ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಏರಿಕೆ 

50. ಆರ್ಥಿಕ ಸರ್ವೇಕ್ಷಣ ಪ್ರಕಟಿಸುವುದು ಯಾವ ಸಂಸ್ಥೆ ?

ಆರ್ಥಿಕ ಸಚಿವಾಲಯ.

Exit mobile version