Site icon Compitative Exams MCQ Questions and Answers

Top 50 (ಭಾರತ ಸಂವಿಧಾನ) important Indian constitution series 08 PC and PSI repeated questions and answers for upcoming exams VAO PDO SSC MTS SSC CHSL and ssc CGL exams.

Contents show
1 ಭಾರತದ ಸಂವಿಧಾನ – 08

ಭಾರತದ ಸಂವಿಧಾನ  – 08 

1. ಮೂಲಭೂತ ಹಕ್ಕನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ?

ರಾಷ್ಟ್ರಪತಿಯವರಿಗೆ

2. ಸರ್ಕಾರದ ಸ್ವರೂಪವನ್ನು ಭಾರತದ ಸಂವಿಧಾನವು ಯಾವ ದೇಶದಿಂದ ಪಡೆದಿದೆ ?

ಬ್ರಿಟನ್ ದೇಶದಿಂದ 

3. ಭಾರತದಲ್ಲಿ ರಾಜಕೀಯದತ್ತ ಅಧಿಕಾರದ ಮೂಲ ಯಾರು ?

ಭಾರತದ ಪ್ರಜೆಗಳು 

4. ಚುನಾವಣಾ ಸಂದರ್ಭದಲ್ಲಿ ಸಂಬಂಧಪಟ್ಟ ಚುನಾವಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಎಷ್ಟು ಗಂಟೆಗಳ ಮೊದಲು ನಿಲ್ಲಿಸಬೇಕು ?

ಮತ ಚಲಾಯಿಸಲು ಪ್ರಾರಂಭವಾಗುವ 48 ಗಂಟೆಗಳ ಮೊದಲು.

5. ಮೂಲಭೂತ ಹಕ್ಕುಗಳನ್ನು ಎಷ್ಟು ರೀತಿಯಲ್ಲಿ ವಿಭಜಿಸಬಹುದು ?

06 ಗುಂಪುಗಳಾಗಿ ವಿಭಜಿಸಬಹುದು 

6. ಒಂದು ರಾಜ್ಯದ ವಿಧಾನ ಪರಿಷತ್ ಅನ್ನು ನಿರ್ಮಿಸುವ ಅಥವಾ ರದ್ದು ಪಡಿಸುವ ಕಾರ್ಯ ಯಾರಿಗಿದೆ ?

ಸದಸ್ಯ ರಾಜ್ಯದ ವಿಧಾನಸಭೆಯ ಶಿಫಾರಸ್ಸಿನ ಮೇರೆಗೆ ಸಂಸತ್ತು ಮಾಡುತ್ತದೆ 

7. ಯಾವ ಸಮಿತಿಯು ಲೋಕಸಭಾ ಸದಸ್ಯರನ್ನು ಮಾತ್ರ ಹೊಂದಿದೆ ?

ಅಂದಾಜು ಸಮಿತಿ 

8. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರಿಗೆ ಮೀಸಲಾತಿಯನ್ನು ಎಲ್ಲಿಯವರೆಗೆ ವಿಸ್ತರಿಸಲಾಗಿದೆ ?

2030

9. ಭಾರತ ಸಂವಿಧಾನದ ಯಾವ ಮೂಲಭೂತ ಹಕ್ಕಿನ ಅನುಚ್ಛೇದ ನಾಗರೀಕರಿಗೆ “ಆರು ಸ್ವಾತಂತ್ರ್ಯಗಳನ್ನು” ನೀಡುತ್ತದೆ ?

ಅನುಚ್ಛೇದ 19 

10. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ತೆಗೆಯುವ ಅಧಿಕಾರ ಯಾರಿಗೆ ಇದೆ ?

ಭಾರತದ ರಾಷ್ಟ್ರಪತಿಯವರಿಗೆ 

 

11. ರಾಷ್ಟ್ರಪತಿಯವರು ಯಾರಿಂದ ಸಲಹೆಗಳನ್ನು ಪಡೆದುಕೊಳ್ಳಬಹುದು ?

ಪ್ರಧಾನ ಮಂತ್ರಿ ನೇತೃತ್ವದಲ್ಲಿರುವ ಸಚಿವ ಸಂಪುಟದಿಂದ 

12. ಆರೋಪಿಯೊಬ್ಬನಿಗೆ ಈಗಾಗಲೇ ಅದೇ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಗಿದ್ದರೆ, ಅಂತಹ ಆರೋಪವನ್ನು ವಿಚಾರಣೆ ಮಾಡುವುದನ್ನು ಮತ್ತು ಶಿಕ್ಷೆ ನೀಡುವುದನ್ನು ಸಂವಿಧಾನವು ನಿಷೇಧಿಸುತ್ತದೆ, ಇದನ್ನು ಏನೆಂದು ಕರೆಯುವರು ?

ಇಮ್ಮಡಿ ವಿಪತ್ತು 

13. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ಯಾವುದು ?

ಹೇಬಿಯಸ್ ಕಾರ್ಪಸ್ 

14. 1956ರ ಬಲವಂತರಾಯ್ ಮೆಹತಾ ಸಮಿತಿ ಯಾವುದಕ್ಕೆ ಸಂಬಂಧಿಸಿದೆ ?

ಹೊಸ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಸ್ಥಾಪಿಸಲು ಇರುವ ಸಾಧ್ಯತೆಗಳ ಪರಿಶೀಲನೆ. 

15. ಆಸ್ತಿಯ ಹಕ್ಕು ಒಂದು ….ಹಕ್ಕಾಗಿದೆ ?

ಕಾನೂನಿನ ಹಕ್ಕಾಗಿದೆ 

16. ಮ್ಯಾಂಡಮಸ್ ರಿಟ್ ನ್ನು ಯಾವ ಸಂದರ್ಭದಲ್ಲಿ ಹೊರಡಿಸುತ್ತಾರೆ ?

ಸಾರ್ವಜನಿಕ ಸೇವೆಗಳ ಕರ್ತವ್ಯ ನಿರ್ವಹಿಸದೆ ಇರುವಾಗ 

17. ಯಾರ ವಿರುದ್ಧ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ?

ಖಾಸಗಿ ವ್ಯಕ್ತಿಗಳ ವಿರುದ್ಧ 

18. ಸಂವಿಧಾನ ಪುನರ್ ವಿಮರ್ಶನ ಸಮಿತಿಯ ಅಧ್ಯಕ್ಷರು ಯಾರು ?

ನ್ಯಾಯಮೂರ್ತಿ ಎಂ .ಎನ್ ವೆಂಕಟಾಚಲಯ್ಯ

19. ಅನುಚ್ಛೇದ 30ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಯಾರಿಗೆ ಅವಕಾಶ ನೀಡಿರುತ್ತಾರೆ ?

ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ 

20. ಭಾರತದ ಸಂವಿಧಾನದಲ್ಲಿ ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವವನ್ನು ಅಳವಡಿಸಿಕೊಂಡಿದ್ದು…..?

ಫ್ರಾನ್ಸ್ ಕ್ರಾಂತಿಯಿಂದಾಗಿ 

21. ಸಂವಿಧಾನ ಮೂಲ ರಚನೆಯನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸಿದ್ದು , ಯಾವ ಪ್ರಕರಣದಲ್ಲಿ ?

ಗೋಕಲನಾಥ v/s ಸ್ಟೇಟ್ ಆಫ್ ಪಂಜಾಬ್.

22. ಭಾರತದಲ್ಲಿ “ಸಂಸತ್ತು ಅಧಿವೇಶನದಲ್ಲಿ” ನಿಳುವಳಿಯ ಸೂಚನೆಯ ಉದ್ದೇಶವೇನು ?

ತುರ್ತು ಸಾರ್ವಜನಿಕ ಪ್ರಾಮುಖ್ಯತೆಯನ್ನು ನಿರ್ದಿಷ್ಟ ವಿಷಯದ ಮೇಲೆ ಚರ್ಚೆಗೆ ಅನುಮತಿಸುವುದು. 

23. ಸಂಸತ್ತಿನ ಜಂಟಿ ಅಧಿವೇಶನ ಕರೆಯುವಂತೆ ಮಾಡದ ಮಸೂದೆ ಯಾವುದು ?

ಸಂವಿಧಾನ ತಿದ್ದುಪಡಿ ಮಸೂದೆ 

24. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವ ಸಂಗತಿ ಸಂವಿಧಾನದಲ್ಲಿ ಯಾವುದರಲ್ಲಿ ಉಲ್ಲೇಖಿತವಾಗಿದೆ ?

ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ 

25. ರಾಜ್ಯದ ಮುಖ್ಯಮಂತ್ರಿಗಳು ಭಾರತದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಲು ಯಾವ ಸಂದರ್ಭದಲ್ಲಿ ಅರ್ಹರಾಗಿರುವುದಿಲ್ಲ ?

ವಿಧಾನ ಪರಿಷತ್ ನ ಸದಸ್ಯರಾಗಿದ್ದಾಗ

26. ಭಾರತ ಸಂವಿಧಾನದ 72ನೇ ವಿಧಿಯ ಅನ್ವಯ ರಾಷ್ಟ್ರಪತಿಯವರು ಯಾವ ಅಧಿಕಾರವನ್ನು ಚಲಾಯಿಸುವಂತಿಲ್ಲ ?

ಖುಲಾಸೆ ನೀಡುವಿಕೆ 

27. ಅತ್ಯಾಚಾರಕ್ಕೆ ಹಾಗೂ ಕೊಲೆಯ ಅಪರಾಧಕ್ಕಾಗಿ ಜೈಲಿನಲ್ಲಿ ಇರಿಸಲಾದ ವ್ಯಕ್ತಿ ಯಾವ ಸೌಲಭ್ಯವನ್ನು ಪಡೆದುಕೊಳ್ಳಬಹುದು ?

ಸಂವಿಧಾನದ 21ನೇ ವಿಧಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು 

28. ರಾಜ್ಯವೊಂದರ ರಾಜ್ಯಪಾಲರು ಯಾವ ಕಾರ್ಯವನ್ನು ಮಾಡುವಂತಿಲ್ಲ ?

ರಾಜ್ಯ ವಿಧಾನ ಮಂಡಲಕ್ಕೆ ಇರುವ ಕಾನೂನು ರೂಪಿಸುವ ಅಧಿಕಾರಕ್ಕೆ ಬದಲಾಗಿ, ಅದ್ಯಾದೇಶವನ್ನು ಹೊರೆತು ಪಡಿಸಿ 

29. “ತೆರಿಗೆ ಹಾಗೂ ರಸೀದಿಗಳ” ಮೂಲಕ ಭಾರತ ಸರಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಯಾವ ನೀದಿಗೆ ಜಮೆ ಮಾಡಲಾಗುತ್ತದೆ ?

ಭಾರತದ ಸಂಚಿತ ನಿಧಿಗೆ 

30. ಸಾರ್ವಜನಿಕ ಹಣದ ರಕ್ಷಕನೆಂದು ಯಾರಿಗೆ ಕರೆಯಲಾಗುತ್ತದೆ ?

ಭಾರತದ ಲೆಕ್ಕ ನಿಯಂತ್ರಕ ಹಾಗೂ ಮಹಾಲೆಕ್ಕ ಪರಿಶೋಧಕರಿಗೆ 

31. ಭಾರತದ ಪ್ರಜಾಸತಾತ್ಮಕ ಅಂಶ ಯಾವುದರ ಮೇಲೆ ನಿಂತಿದೆ ?

ಜನರಿಗಿರುವ ಸರ್ಕಾರದ ಆಯ್ಕೆ

32. ವಿಧಾನಪರಿಷತ್ತನ್ನು ಪ್ರತಿನಿಧಿಸಿದ ಮೊದಲ ಕರ್ನಾಟಕದ ಮುಖ್ಯಮಂತ್ರಿ ಯಾರು ?

ಡಿ .ವಿ ಸದಾನಂದ ಗೌಡ. 

33. ಸಂವಿಧಾನದ 91ನೇ ತಿದ್ದುಪಡಿಯಿಂದಾಗಿ ಕರ್ನಾಟಕ ರಾಜ್ಯದ ಮಂತ್ರಿ ಮಂಡಲದ ಸದಸ್ಯರ ಗರಿಷ್ಠ ಮಿತಿ ಎಷ್ಟು ?

34 ಸದಸ್ಯರು 

34. ಸಂಸತ್ತಿನ ಚುನಾವಣೆ ಒಂದರಲ್ಲಿ ಮತದಾನ ಮಾಡುವ ಹಕ್ಕು…. ಹಕ್ಕಾಗಿದೆ ? 

ಸಂವಿಧಾನಾತ್ಮಕ ಹಕ್ಕು 

35. ಜೀವ ಸಂರಕ್ಷಣೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿವರಿಸುವ ಅನುಚ್ಛೇದ ಯಾವುದು ?

ಅನುಚ್ಛೇದ 21 

36. ಸಂವಿಧಾನದ 51 ನೇ ವಿಧಿಯು ಯಾವ ವಿಷಯದ ಬಗ್ಗೆ ತಿಳಿಸುತ್ತದೆ ?

ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ 

37. ಸಂವಿಧಾನದ ಯಾವ ಅನುಚ್ಛೇದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ?

ಅನುಚ್ಛೇದ 124 ಎ 

38. ಸಂವಿಧಾನದ ತಿದ್ದುಪಡಿಯನ್ನು ಯಾರು ಆರಂಭಿಸಬಹುದು ?

ಲೋಕಸಭೆ ಮತ್ತು ರಾಜ್ಯಸಭೆ 

39. ಲೋಕಸಭಾ ಅವಧಿಯನ್ನು ತುರ್ತು ಘೋಷಣೆ ಸಂದರ್ಭದಲ್ಲಿ ಎಷ್ಟು ಸಮಯದವರೆಗೆ ವಿಸ್ತರಿಸಬಹುದು ?

ಒಂದು ವರ್ಷ 

40. “ವರದಕ್ಷಣೆ ನಿಷೇಧ” ಕಾಯ್ದೆ ಯಾವಾಗ ಜಾರಿಗೆ ಬಂದಿತು ?

1961 

41. ಭಾರತೀಯ ಸಂವಿಧಾನ ರಚನೆಗೊಂಡಿದ್ದು ಯಾವುದರ ಅಡಿಯಲ್ಲಿ ?

ಕ್ಯಾಬಿನೆಟ್ ಮಿಷನ್ ಪ್ಲಾನ್ 1946 

42. “ಫೆಡರಲ್ ಕೋರ್ಟ್ “ನಿರ್ಮಾಣಗೊಂಡಿದ್ದು ಯಾವ ಕಾಯಿದೆಯಿಂದಾಗಿ ?

1935 ರ ಕಾಯ್ದೆ 

43. ಪ್ರತಿಯೊಂದು ಪಂಚಾಯತ್ ನ ಅಧಿಕಾರವಧಿಯು ಯಾವ ದಿನಾಂಕದಿಂದ “5 ವರ್ಷ ವರೆಗೆ” ಇರುತ್ತದೆ ?

ಇದರ ಪ್ರಥಮ ಸಭೆಯಿಂದ 

44. ಭಾರತ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಶಿಫಾರಸು ಮಾಡಿದ ಸಮಿತಿ ಯಾವುದು ?

ಸ್ವರ್ಣ ಸಿಂಗ್ ಸಮಿತಿ 

45. ಭಾರತದಲ್ಲಿ ಯಾವ ರೀತಿಯ ತುರ್ತುಪರಿಸ್ಥಿತಿಯನ್ನು ಇಲ್ಲಿಯವರೆಗೆ ಘೋಷಿಸಿಲ್ಲ ?

ಆರ್ಥಿಕ ತುರ್ತು ಪರಿಸ್ಥಿತಿ 

46. ಅಪರಾಧ ಕಾನೂನಿನ ಬೆಳವಣಿಗೆಯು ಯಾವುದರ ಮೂಲಕ ನಡೆಯುತ್ತದೆ ?

ನ್ಯಾಯಾಂಗೀಯ ನಿರ್ಧಾರದಿಂದಾಗಿ 

47. ಸಂವಿಧಾನದ 108ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದೆ ?

ಸಂಸತ್ತಿನ ಜಂಟಿ ಅಧಿವೇಶನಕ್ಕೆ 

48. ರಾಜ್ಯ ಸಭೆಯ ಸದಸ್ಯರ ಗರಿಷ್ಠ ಮಿತಿ ಎಷ್ಟು ?

250 

49. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ ವರದಿಯನ್ನು ಯಾರಿಗೆ ಸಲ್ಲಿಸುತ್ತದೆ ?

ಲೋಕಸಭೆಯ ಸ್ಪೀಕರ್ ಗೆ 

50. ಭಾರತದ ರಾಷ್ಟ್ರಪತಿಗಳನ್ನು ಮಹಾಬಿಯೋಗಕ್ಕೆ ಒಳಪಡಿಸಬಹುದಾದ ಸನ್ನಿವೇಶ ಯಾವುದು ?

ಸಂವಿಧಾನದ ಉಲ್ಲಂಘನೆಯಾದಾಗ.

Exit mobile version