Skip to content
ಸಾಮಾನ್ಯ ವಿಜ್ಞಾನ – 02
1. ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ?
– 30 MHz
2. ಹಾಲನ್ನು ಕೆಲ ಸಮಯದವರೆಗೆ ಹೊರಗಡೆ ಇಟ್ಟಾಗ ಹಾಲು ಉಳಿಯಾಗುತ್ತದೆ ಇದಕ್ಕೆ ಕಾರಣವಾದ ಆಮ್ಲ ಯಾವುದು ?
– ಲ್ಯಾಕ್ಟಿಕ್ ಆಮ್ಲ
3. ಕೊಬ್ಬು /ಎಣ್ಣೆ +ಸೋಡಿಯಂ ಹೈಡ್ರಾಕ್ಸೈಡ್ ಸಾಬೂನು ಇದರ ಮಿಶ್ರಿತ ಯಾವುದು ?
– ಗ್ಲಿಸರಾಲ್
4. ಒಂದು ಗಾಜಿನ ಲೋಟದಲ್ಲಿ ತೇಲುತ್ತಿರುವ ಮಂಜುಗಡ್ಡೆ ಕರಗಿದಾಗ ನೀರಿನ ಗಾತ್ರ ಏನಾಗುತ್ತದೆ ?
– ಇದ್ದ ಹಾಗೆ ಇರುತ್ತದೆ
5. ಗನ್ ಮೆಟಲ್ ಯಾವ ಲೋಹಗಳ ಮಿಶ್ರ ಲೋಹವಾಗಿದೆ ?
– ತಾಮ್ರ, ಸತು ಮತ್ತು ತವರ.
6. ಟೆಲಿಸ್ಕೋಪನ್ನು ಕಂಡು ಹಿಡಿದವರು ಯಾರು ?
– ಗೆಲಿಲಿಯೋ ಗೆಲಿಲಿ
7. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಯಾವುದು ?
– ಡೈನಮೋ
8. ಒಂದು ಕೊಠಡಿ ಯಲ್ಲಿನ ತಾಪ 35’C ಇದೆ ಇದನ್ನು ಕೆಲ್ವಿನ್ ತಾಪಮಾನ ಪದ್ಧತಿಯಲ್ಲಿ ಎಷ್ಟು ಡಿಗ್ರಿ ಎಂದು ವ್ಯಕ್ತಪಡಿಸಲಾಗುತ್ತದೆ ?
– 308 ಕೆಲ್ವಿನ್
9. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ಯಾವುದು ?
– ಮರಳು (ಸಿಲಿಕಾ)
10. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತದೆ ?
– ಆರು
11. ಪರಿಸರ ಮಾಲಿನ್ಯ ತಡೆಯಲು ಡೀಸೆಲ್ ನಲ್ಲಿ ಏನನ್ನು ಬಳಸುತ್ತಾರೆ ?
– ಹೊಂಗೆ ಎಣ್ಣೆ
12. ವಾತಾವರಣದಲ್ಲಿ ಅತ್ಯಧಿಕವಾಗಿ ದೊರೆಯುವ ಅನಿಲ ಯಾವುದು ?
– ನೈಟ್ರೋಜನ್
13. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಯಾವ ಅನಿಲವನ್ನು ಉಪಯೋಗಿಸಲಾಗುತ್ತದೆ ?
– ಹೈಡ್ರೋಜನ್
14. ಕೇಸರಿಯನ್ನು ಎಲ್ಲಿಂದ ತೆಗೆಯಲಾಗುತ್ತದೆ ?
– ಹೂವಿನಿಂದ
15. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತದೆ ?
– 1683 K(ಕೆಲ್ವಿನ್)
16. ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ ?
– ವಿಟಮಿನ್ ಸಿ
17. ಅಲ್ಯುಮಿನಿಯಂ ತಯಾರಿಕಾ ವಿಧಾನ ಯಾವುದು ?
– ಬೇಯರ್ ವಿಧಾನ
18. “CH4” ಎನ್ನುವುದು ಯಾವುದರ ಅಣುಸೂತ್ರ ?
– ಮೀಥೇನ್
19. ಕೃತಕ ರತ್ನ ಮತ್ತು ನೈಸರ್ಗಿಕ ರತ್ನಗಳನ್ನು ಗುರುತಿಸಲು ಯಾವ ವಿಕಿರಣಗಳನ್ನು ಬಳಸುತ್ತಾರೆ ?
– ನೇರಳಾತೀತ ಕಿರಣಗಳು
20. ಅಡುಗೆ ಸೋಡ ವನ್ನು ಹೀಗೂ ಸಹ ಕರೆಯಬಹುದು ?
– ಸೋಡಿಯಂ ಬೈ ಕಾರ್ಬೋನೇಟ್
21. ಮೀನು ಉಸಿರಾಡುವುದು ಯಾವುದರ ಸಹಾಯದಿಂದ ?
– ಕಿವಿರುಗಳು
22. ಲಾಫಿಂಗ್ ಗ್ಯಾಸ್ ನ ರಾಸಾಯನಿಕ ಹೆಸರು ಏನು ?
– ನೈಟ್ರೆಸ್ ಆಕ್ಸೈಡ್
23. ಎಂಜೈಮ್ ಒಂದು ….. ?
– ಪ್ರೋಟೀನ್ (ಸಸಾರ ಜನಕ)
24. ಮೆದುಳಿನ ಚಟುವಟಿಕೆಯನ್ನು ದಾಖಲು ಮಾಡಿಕೊಳ್ಳಲು ……ಬಳಸುತ್ತಾರೆ?
– EEG (electro encephalo graph)
25. “Ornithology” ಯಾವುದಕ್ಕೆ ಸಂಬಂಧಿಸಿದೆ ?
– ಪಕ್ಷಿಗಳ ಬಗ್ಗೆ ಅಧ್ಯಯನ
26. “ಸೋಲ್ಡರ್” ಯಾವುದರ ಮಿಶ್ರ ಲೋಹ ?
– ತವರ ಮತ್ತು ಸೀಸ
27. ಯಾವುದು ಜೈವಿಕ ರಸಗೊಬ್ಬರ ?
– ಆಲ್ಗೆ ಹಾಗೂ ನೀಲಿ ಹಸಿರು ಶೈವಲ
28. “ಮೀಟಿರಾಲಜಿ” ಯಾವುದಕ್ಕೆ ಸಂಬಂಧಿಸಿದೆ ?
– ಹವಮಾನ
29. “ಡೆಸಿಬಲ್” ಎಂಬ ಮಾನ ಯಾವುದಕ್ಕೆ ಸಂಬಂಧಿಸಿದೆ ?
– ಶಬ್ದ
30. “Antibiotic” ಔಷಧವನ್ನು ಯಾವುದಕ್ಕೆ ಬಳಸುತ್ತಾರೆ ?
– ಬ್ಯಾಕ್ಟೀರಿಯಾ ಖಾಯಿಲೆಗೆ
31. “Acoustic” ಯಾವುದಕ್ಕೆ ಸಂಬಂಧಿಸಿದೆ ?
– ಶಬ್ದ
32. “ವ್ಯಾಕ್ಸಿನೇಷನ್” ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡು ಹಿಡಿದವರು ಯಾರು ?
– ಎಡ್ವರ್ಡ್ ಜೆನ್ನರ್
33. ಯಾವ ರಕ್ತದ ಗುಂಪನ್ನು ಸಾರ್ವರ್ತ್ರಿಕ ದಾನಿ ಎಂದು ಕರೆಯುತ್ತಾರೆ ?
” O” ಗುಂಪು
34. ಗಾಳಿಯಲ್ಲಿನ ಶಬ್ದದ ವೇಗ ಸರಿಸುಮಾರು ಎಷ್ಟು ?
– 330 ಮೀಟರ್/ ಸೆಕೆಂಡ್
35. “ಟಿಬಿಯಾ” ಎಂಬ ಮೂಳೆ ಎಲ್ಲಿ ಕಂಡು ಬರುತ್ತದೆ ?
– ಕಾಲಿನಲ್ಲಿ
36. “ಬ್ರಾoಕೈಟಿಸ್” ಎಂಬ ಕಾಯಿಲೆಗೆ ತುತ್ತಾಗುವ ಅಂಗ ಯಾವುದು ?
– ಉಸಿರಾಟದ ಅಂಗ (ಶ್ವಾಸಕೋಶ)
37. ಹಾಲು ನೈಸರ್ಗಿಕ….. ಆಗಿದೆ
– ಜಿಡ್ಡಿನ ಪದಾರ್ಥ
38. ಮೂಳೆಯು ಯಾವುದರಿಂದ ಮಾಡಲ್ಪಟ್ಟಿದೆ ?
– ಕ್ಯಾಲ್ಸಿಯಂ ಮತ್ತು ಪಾಸ್ಪರಸ್
39. ಮಾನವನ ಮೆದುಳಿನ ಬಹುದೊಡ್ಡ ಭಾಗ ಯಾವುದು ?
– ಸೆರೆಬ್ರಮ್
40. ಶೇಖರಣ ಬ್ಯಾಟರಿಗಳಲ್ಲಿ ಉಪಯೋಗಿಸುವ ಲೋಹ ಯಾವುದು ?
– ಸೀಸ
41. ಸಮುದ್ರ ನೀರಿನಲ್ಲಿರುವ ಉಪ್ಪು ಯಾವುದು ?
– ಸೋಡಿಯಂ ಕ್ಲೋರೈಡ್
42. “LPG” ಯಲ್ಲಿರುವ ಪ್ರಮುಖ ವಸ್ತು ಯಾವುದು ?
– ಬ್ಯುಟೇನ್
43. ಉಷ್ಣತೆಯನ್ನು ಯಾವ ಯೂನಿಟ್ ನಲ್ಲಿ ಅಳೆಯುತ್ತಾರೆ ?
– ಕೆಲ್ವಿನ್ ನಲ್ಲಿ
44. ಕತ್ತಲೆ ಕೋಣೆಯಲ್ಲಿ ಹಸಿರು ಎಲೆಯ ಮೇಲೆ ಕೆಂಪು ದ್ವೀಪ ಇಟ್ಟಾಗ ಎಲೆಯ ಬಣ್ಣ ಯಾವ ರೀತಿ ಕಾಣುತ್ತದೆ ?
– ಕಪ್ಪಾಗಿ ಕಾಣುತ್ತದೆ
45. “ಹಿಮೋಗ್ಲೋಬಿನ” ಪ್ರಮುಖ ಕೆಲಸ ಯಾವುದು ?
– ಆಮ್ಲಜನಕದ ರವಾನೆ
46. “Oncology” ಯಾವುದಕ್ಕೆ ಸಂಬಂಧಿಸಿದೆ ?
– ಕ್ಯಾನ್ಸರ್ ಗೆ
47. ಬೆಳಕಿನ ವರ್ಷ ಯಾವುದಕ್ಕೆ ಸಂಬಂಧಿಸಿದೆ ?
– ದೂರ
48. ಸಾಮಾನ್ಯ ಉಪ್ಪಿನ ರಾಸಾಯನಿಕ ಹೆಸರೇನು ?
– ಸೋಡಿಯಂ ಕ್ಲೋರೈಡ್
49. “ರೇಡಿಯಮ್” ಅನ್ನು ಅನ್ವೇಷಣೆ ಮಾಡಿದವರು ಯಾರು ?
– ಮೇರಿ ಕ್ಯೂರಿ
50. “Periodic table” ಅನ್ನು ಕಂಡುಹಿಡಿದವರು ಯಾರು ?
– ಡಿಮಿಟ್ರಿ ಮೆಂಡಲಿವ್.