Site icon Compitative Exams MCQ Questions and Answers

Top 50 Indian constitution Questions and answers for VAO, KPSC, KEA, PC PSI Exams.

Contents show
1 ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಐವತ್ತು ಭಾರತ ಸಂವಿಧಾನದ ಪ್ರಶ್ನೋತ್ತರಗಳು :

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಐವತ್ತು ಭಾರತ ಸಂವಿಧಾನದ ಪ್ರಶ್ನೋತ್ತರಗಳು : 

1. ಭಾರತ ಸಂವಿಧಾನದ ಪ್ರಸ್ತಾವನೆ ಯಾವ ರೀತಿ ಪ್ರಾರಂಭವಾಗುತ್ತದೆ ?

ನಾವು ಭಾರತೀಯರು.

 

2. ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ? 

42ನೇ ತಿದ್ದುಪಡಿ

 

3. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ?

ಸಂವಿಧಾನದ ಪೀಠಿಕೆ.

 

4. ಸಂವಿಧಾನದ ಒಂದನೇ ಭಾಗ ಯಾವ ವಿಷಯದ ಬಗ್ಗೆ ತಿಳಿಸುತ್ತದೆ ? 

ಭಾರತ ಒಂದು ರಾಜ್ಯಗಳ ಒಕ್ಕೂಟ.

 

5. ಭಾರತೀಯ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ಸೇರಿಸಲು ಸಂವಿಧಾನದ ಯಾವ ಅನುಸೂಚಿಗೆ ತಿದ್ದುಪಡಿ ಮಾಡಲಾಗಿದೆ ? 

ಒಂದನೇ ಅನುಸೂಚಿ.

 

6. ಭಾರತ ಸಂವಿಧಾನದಲ್ಲಿರುವ ಏಕ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ಇಂಗ್ಲೆಂಡ್.

 

7. ಪ್ರಜೆಗಳು ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಪಡೆಯಬಹುದು ?

ಜನನದ ಮುಖಾಂತರ

-ವಂಶ ಪಾರಂಪರ್ಯದ ಮೂಲಕ

-ನೋಂದಣಿಯ ಮೂಲಕ.

 

8. ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನಗಳ ಮೂಲಕ ಕಳೆದುಕೊಳ್ಳುತ್ತಾರೆ ಅವುಗಳೆಂದರೆ ? 

ಪರಿ ತ್ಯಾಗ

– ಟರ್ಮಿನೇಷನ್

– ಡಿಪ್ರಿವೆಶನ್

 

9. ಭಾರತ ಸಂವಿಧಾನದಲ್ಲಿರುವ ನಾಗರೀಕತೆಯ ವಿಧ ಯಾವುದು 

ಏಕಪೌರತ್ವ. 

 

10. ಭಾರತ ಸಂವಿಧಾನದಲ್ಲಿರುವ ಎರಡನೇ ಭಾಗ ಯಾವುದಕ್ಕೆ ಸಂಬಂಧಿಸಿದೆ ?

ಪೌರತ್ವಕ್ಕೆ ಸಂಬಂಧಿಸಿದೆ.

 

11. ಮೂಲಭೂತ ಹಕ್ಕುಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ ?

ಮೂರನೇ ಭಾಗ.

 

12. ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ಅಮೆರಿಕ ದೇಶದಿಂದ.

 

13. ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರು ?

ಸರ್ದಾರ್ ವಲ್ಲಭಬಾಯ ಪಟೇಲ್.

 

14. ಮೂಲಭೂತ ಹಕ್ಕುಗಳನ್ನು ಭಾರತ ಸಂವಿಧಾನದ……ಎಂದು ಕರೆಯುತ್ತಾರೆ ?

ಮ್ಯಾಗ್ನ ಕಾರ್ಟ್.

 

15. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಂವಿಧಾನವು ಯಾರಿಗೆ ವಿಶೇಷ ಅಧಿಕಾರವನ್ನು ನೀಡಿದೆ ?

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗೆ.

 

16. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಎಲ್ಲಿ ಪ್ರಶ್ನಿಸಬಹುದು? 

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ.

 

17. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ?

ರಾಷ್ಟ್ರಪತಿಯವರಿಗೆ.

 

18. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ?

ಅಸ್ಪೃಶ್ಯತಾ ನಿವಾರಣೆ.

 

19. ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಯಾವ ವಿಧಿಯನ್ನು ಕರೆಯಲಾಗುತ್ತದೆ ? 

32ನೇ ವಿಧಿ.

 

20. ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಯಾವಾಗ ತೆಗೆದು ಹಾಕಲಾಗಿದೆ ?

1978 ರಲ್ಲಿ 44ನೇ ತಿದ್ದುಪಡಿ.

 

21. “ಹೇಬಿಯಸ್ ಕಾರ್ಪಸ್” ಅಥವಾ ಬಂದಿ ಪ್ರತ್ಯಕ್ಷಿಕರಣ ಎಂದರೇನು ?

ಅಕ್ರಮವಾಗಿ ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳ ಒಳಗಾಗಿ ಸಮೀಪದ ನ್ಯಾಯಾಲಯದ ಮುಂದೆ ಹಾಜರಿ ಪಡಿಸುವುದು.

 

22. “ಮ್ಯಾಂಡಮಸ್” ಅಥವಾ “ಪರಮಾದೇಶ” ಎಂದರೇನು ?

ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದಾಗ ಮ್ಯಾಂಡಮಸ್ ರಿಟನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು ಹೊರಡಿಸುತ್ತವೆ.

 

23. “Certiorary” ಎಂದರೇನು ?

ಉನ್ನತ ನ್ಯಾಯಾಲಯ ಕೆಳಗಿನ ನ್ಯಾಯಾಲಯದಿಂದ ಪ್ರಕರಣಗಳನ್ನು ವರ್ಗಾವಣೆಗೊಳಿಸಲು ಈ ರಿಟನ್ನು ಬಳಸಲಾಗುತ್ತದೆ.

 

24. “Prohibition” ಎಂದರೇನು ? 

 – ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ತೀರ್ಪು ನೀಡಿದಾಗ ಆದೇಶವನ್ನು ತಡೆಹಿಡಿಯಲು ಬಳಸಲಾಗುತ್ತದೆ. 

 

25. ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ ?

ಔದ್ಯೋಗಿಕ ಕಾಯ್ದೆ.

 

26. ಭಾರತ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಯಾವುದಕ್ಕೆ ಸಂಬಂಧಿಸಿದೆ ?

ಧರ್ಮ, ಜನಾಂಗ, ಜಾತಿ,ಲಿಂಗ,ಜನ್ಮಸ್ಥಳ, ಇತ್ಯಾದಿಗಳ ಮೇಲೆ ತಾರತಮ್ಯ ಮಾಡದೇ ಇರುವುದು.

 

27. ಸಂವಿಧಾನದ ಯಾವ ಅನುಚ್ಛೇದವು 14 ವರ್ಷಕ್ಕಿಂತ ಕೆಲ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸುತ್ತದೆ ? 

ಅನುಚ್ಛೇದ 24.

 

28. ಎಷ್ಟನೇ ತಿದ್ದುಪಡಿ ಕಾಯ್ದೆಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವ 21(a) ವಿಧಿಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿತು ? 

86ನೇ ತಿದ್ದುಪಡಿ.

 

29. ಭಾರತೀಯ ಸಂವಿಧಾನದ ಪ್ರಕಾರ ಯಾವ ಹಕ್ಕು ಮೂಲಭೂತ ಹಕ್ಕಾಗಿ ಉಳಿದಿಲ್ಲ ? 

ಆಸ್ತಿಯ ಹಕ್ಕು

 

30. ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆ ನಿವಾರಣೆ ಒಳಗೊಂಡಿದೆ ?

ಸಮಾನತೆಯ ಹಕ್ಕು.

 

31. ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವಂತೆ ಬಲವಂತ ಮಾಡುವ ರಿಟ್ ಅನ್ನು ಯಾರು ಹೊರಡಿಸಬಹುದು ? 

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ.

 

32. ಭಾರತ ಸಂವಿಧಾನದಲ್ಲಿ ಯಾವ ವಿಧಿಯು ಅಸ್ಪೃಶ್ಯತೆ ಯನ್ನು ತೆಗೆದು ಹಾಕಿದೆ ? 

17ನೆ ವಿಧಿ.

 

33. ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವವರು ಯಾರು ? 

ಭಾರತೀಯ ನ್ಯಾಯಾಂಗ ವ್ಯವಸ್ಥೆ.

 

34. ಯಾವ ರಿಟ್ ಅರ್ಜಿಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ? 

ಹೇಬಿಯಸ್ ಕಾರ್ಪಸ್.

 

35. ಸಂವಿಧಾನದ “ಆತ್ಮ ಮತ್ತು ಹೃದಯ” ಎಂದು ಕರೆಯಲ್ಪಡುವ ಹಕ್ಕು ಯಾವುದು ? 

ಸಂವಿಧಾನಾತ್ಮಕ ಪರಿಹಾರಗಳ ಹಕ್ಕು. 

 

36. ಸಂವಿಧಾನದ 17ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? 

ಅಸ್ಪೃಶ್ಯತೆಯನ್ನು ನಿಷೇಧಿಸಲು.

 

37. ಅಸ್ಪೃಶ್ಯತೆ ಯನ್ನು ಕುರಿತು ಹೇಳುವ ಮೂಲಭೂತ ಹಕ್ಕು ಯಾವುದು ? 

ಸಮಾನತೆ ಹಕ್ಕು.

 

38. ಸಂವಿಧಾನ ಕಾತರಿಪಡಿಸಿರುವಂತಹ ಮೂಲಭೂತ ಹಕ್ಕುಗಳನ್ನು ಯಾವ ನ್ಯಾಯಾಲಯಗಳು ಜಾರಿಗೊಳಿಸಬಹುದು ? 

ಯಾವುದೇ ಹುಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ.

 

39. ಸಂವಿಧಾನದ ಮೂಲ ಸ್ವರೂಪವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಯಾವ ಪ್ರಕರಣದಲ್ಲಿ ಘೋಷಿಸಿದೆ ? 

ಕೇಶವಾನಂದ ಭಾರತಿ v/s ಕೇರಳ ರಾಜ್ಯ ಪ್ರಕರಣದಲ್ಲಿ.

 

40. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಖಾತರಿಗೊಳಿಸುವುದು ? 

ಭಾರತದ ಸಂವಿಧಾನ.

 

41. ಯಾವುದನ್ನು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿರುವುದಿಲ್ಲ ?

ಆಸ್ತಿಯನ್ನು ಹೊಂದುವ ಮತ್ತು ವಿಲೇವಾರಿ ಮಾಡುವ ಸ್ವಾತಂತ್ರ.

 

42. ಭಾರತ ಸಂವಿಧಾನದ 44ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ?

ಆಸ್ತಿಯ ಹಕ್ಕು.

 

43. ಸಶಸ್ತ್ರ ಬಲಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದು ಸಂವಿಧಾನದ ಯಾವ ವಿಧಿ ?

ಸಂವಿಧಾನದ 33ನೇ ವಿಧಿ.

 

44. ಯಾವುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಿಲ್ಲ ? 

ಉದ್ಯೋಗದ ಹಕ್ಕು.

 

45. ಭಾರತ ಸಂವಿಧಾನದಲ್ಲಿ ಈಗಿರುವ ಒಟ್ಟು ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು ? 

 

46. ಸಂವಿಧಾನದ ಯಾವ ವಿಧಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ?

ಸಂವಿಧಾನದ 19 ನೇ ವಿಧಿ.

 

47. ಸಂವಿಧಾನದ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ?

32ನೇ ವಿಧಿ

 

48. ಮೂಲಭೂತ ಹಕ್ಕುಗಳ ಪಟ್ಟಿಯಿಂದ ಆಸ್ತಿ ಹಕ್ಕನ್ನು ತೆಗೆದು ಹಾಕಿದ ತಿದ್ದುಪಡಿ ಯಾವುದು ? 

44ನೇ ತಿದ್ದುಪಡಿ.

 

49. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ ? 

ರಾಷ್ಟ್ರಪತಿಯವರಿಗೆ.

 

50. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ರದ್ದು ಮಾಡಿದ್ದು ಯಾವ ವಿಧಿ ?

ಸಂವಿಧಾನದ 17ನೇ ವಿಧಿ.

Exit mobile version