ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭಾರತ ಸಂವಿಧಾನದ ಪ್ರಮುಖ ಪ್ರಶ್ನೋತ್ತರಗಳು :
1. ಸಂವಿಧಾನದ 93ನೇ ತಿದ್ದುಪಡಿ ಯಾವ ವಿಷಯಕ್ಕೆ ಸಂಬಂಧಿಸಿದೆ ? – ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು.
2. ಮೂಲಭೂತ ಹಕ್ಕುಗಳನ್ನು ಯಾವ ಸಂದರ್ಭದಲ್ಲಿ ಸ್ಥಗಿತಗೊಳಿಸಬಹುದು ? – ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ.
3. ಮೂಲಭೂತ ಹಕ್ಕುಗಳನ್ನು ಎಷ್ಟು ಗುಂಪುಗಳಾಗಿ ವಿಭಜಿಸಬಹುದು ? – 6 ಗುಂಪುಗಳು.
4. ಹೇಬಿಯಸ್ ಕಾರ್ಪಸ್ ಎಂದರೇನು ? – ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನ್ಯಾಯಾಲಯಕೊಟ್ಟ ಅಜ್ಞಾತ ಪತ್ರ.
5. ತನ್ನ ಮೂಲಭೂತ ಹಕ್ಕುಗಳು ಉಲ್ಲಂಘನೆ ಆದರೆ ಪ್ರಜೆಯೊಬ್ಬ ಸುಪ್ರೀಂಕೋರ್ಟಿಗೆ ಯಾವ ವಿಧಿಯ ಪ್ರಕಾರ ರಿಟ್ ಅರ್ಜಿ ಸಲ್ಲಿಸಬಹುದು ? – ಸಂವಿಧಾನದ 32ನೇ ವಿಧಿ.
6. ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು…. – ಜಾರಿ ಮಾಡಲಾಗುವಂತವು.
7. ನ್ಯಾಯಾಂಗದ ಪರಿಭಾಷೆಯಲ್ಲಿ ಹೇಬಿಯಸ್ ಕಾರ್ಪಸ್ ಎನ್ನುವುದು ಒಂದು ಏನು ? – ರಿಟ್ ಆಗಿದೆ.
8. ಆರೋಪಿಯೊಬ್ಬನಿಗೆ ಈಗಾಗಲೇ ಅದೇ ಅಪರಾಧಕ್ಕಾಗಿ ಶಿಕ್ಷೆಯನ್ನು ನೀಡಲಾಗಿದ್ದರೆ , ಅಂತಹ ಆರೋಪಿಯನ್ನು ವಿಚಾರಣೆ ಮಾಡುವುದನ್ನು ಮತ್ತು ಶಿಕ್ಷೆ ನೀಡುವುದನ್ನು ಸಂವಿಧಾನವು ನಿಷೇಧಿಸಿದೆ ಇದನ್ನು ಏನೆಂದು ಕರೆಯುತ್ತಾರೆ ? – ಇಮ್ಮಡಿ ವಿಪತ್ತು.
9. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ಯಾವುದು ? – ಹೇಬಿಯಸ್ ಕಾರ್ಪಸ್.
10. ಯಾವುದೇ ಒಬ್ಬ ವ್ಯಕ್ತಿಯನ್ನು ಒಂದು ರೀತಿಯ ಅಪಾರದಕ್ಕಾಗಿ, ಒಂದಕ್ಕಿಂತ ಹೆಚ್ಚು ಸಾರಿ ಶಿಕ್ಷಿಸುವಂತಿಲ್ಲ ಎಂಬ ತತ್ವವನ್ನು ಪ್ರತಿಪಾದಿಸುವುದು ಯಾವುದು ? – ನೋ ಡಬಲ್ ಜಿಯೋಪರ್ಡಿ.
11. ಆಸ್ತಿಯ ಹಕ್ಕು ಈಗ ಏನಾಗಿದೆ ? – ಇದು ಒಂದು ಕಾನೂನಿನ ಹಕ್ಕಾಗಿದೆ.
12. ಹೇಬಿಯಸ್ ಕಾರ್ಪಸ್ ರಿಟ್ ಎಂದರೇನು ? – ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು.
13. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿರುವ ಸಂವಿಧಾನದ ವಿಧಿ ಯಾವುದು ? – ಸಂವಿಧಾನದ 17ನೇ ವಿಧಿ.
14. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಕಲ್ಪನೆಯ ನಡವಳಿ ಮುಂದಿಟ್ಟವರು ಯಾರು ? – ಸ್ವರಾಜ್ ಬಿಲ್.
15. ಸಂವಿಧಾನದ ಪರಿಹಾರೋಪಾಯಗಳು ಯಾವುದಕ್ಕೆ ಸಂಬಂಧಿಸಿದೆ ? – ಮೂಲಭೂತ ಹಕ್ಕುಗಳು.
16. ಯಾರ ವಿರುದ್ಧ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಬರುವುದಿಲ್ಲ? – ಖಾಸಗಿ ವ್ಯಕ್ತಿಗಳು.
17. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಂವಿಧಾನವು ವಿಶೇಷ ಅಧಿಕಾರ ನೀಡಿರುವುದು ಯಾರಿಗೆ ? – ಸುಪ್ರೀಂ ಕೋರ್ಟ್ ಗೆ.
18. ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಎಷ್ಟು ಗಂಟೆಯ ಒಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು ? – 24 ಗಂಟೆಗಳು.
19. ಕಾನೂನಿನ ಎದುರು ಸಮಾನತೆ ಅನುಚ್ಛೇದ ಖಾತರಿಪಡಿಸಿರುವುದು ಯಾರಿಗೆ ? – ಎಲ್ಲಾ ವ್ಯಕ್ತಿಗಳಿಗೆ.
20. ಸಂವಿಧಾನದ ಮೂರನೇ ಭಾಗದ ಯಾವುದರ ಉಲ್ಲಂಘನೆ ಆದಾಗ ಸರ್ವೋಚ್ಚ ನ್ಯಾಯಾಲಯದ ನೆರವು ಪಡೆಯಬಹುದು ? – ಮೂಲಭೂತ ಹಕ್ಕುಗಳ ಉಲ್ಲಂಘನೆ.
21. ಮೂಲಭೂತ ಹಕ್ಕುಗಳು ಉಲ್ಲಂಘನೆ ಯಾದರೆ ಈ ಕೆಳಕಂಡ ಯಾರ ಮುಂದೆ ಪ್ರಸ್ತುತಪಡಿಸಬಹುದು ? – ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ.
22. ಅನುಚ್ಛೇದ 30ರ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿರುವುದು ಯಾರಿಗೆ ? – ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ.
23. ಸಂವಿಧಾನದ ಮೂಲ ರಚನೆಯನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ, ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ಹೇಳಿದೆ ? – ಕೇಶವಾನಂದ ಭಾರತಿ v/s ಸ್ಟೇಟ್ ಆಫ್ ಕೇರಳ.
24. ಸಂವಿಧಾನದ ಯಾವ ಅನುಚ್ಛೇದವು ಅಸ್ಪೃಶ್ಯತೆಯನ್ನು ರದ್ದುಗೊಳಿಸಲು ಅವಕಾಶ ನೀಡುತ್ತದೆ ? – 17
25. ಯಾವ ವಯೋಮಾನದ ಎಲ್ಲ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ? – 6 to 14 ವರ್ಷಗಳು
26. ಅತ್ಯಾಚಾರ ಹಾಗೂ ಕೊಲೆಯ ಅಪರಾಧಕ್ಕಾಗಿ ಜೈಲಿನಲ್ಲಿ ಇರಿಸಲಾದ ವ್ಯಕ್ತಿಯು, ಯಾವ ವಿಧಿಯ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ? – ಸಂವಿಧಾನದ 21ನೇ ವಿಧಿ.
27. “ಸಂವಿಧಾನದ ಹೃದಯ ಮತ್ತು ಆತ್ಮ “ಎಂದು ಯಾವ ವಿಧಿಯನ್ನು ಕರೆಯುತ್ತಾರೆ ? – 32ನೇ ವಿಧಿ.
28. ಭಾರತ ಸಂವಿಧಾನದ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕಲ್ಲ ? – ಆಸ್ತಿಯ ಹಕ್ಕು.
29. ಭಾರತ ಸಂವಿಧಾನದ ಯಾವ ಅನುಚ್ಛೇದ “ಜೀವನದ ಹಕ್ಕಿನ” ಬಗ್ಗೆ ತಿಳಿಸುತ್ತದೆ ? – ಆರ್ಟಿಕಲ್ 21.
30. ಕೆಳಗಿನ ರಿಟ್ ಗಳಲ್ಲಿ ಯಾವುದು ಕಾನೂನು ಬಾಕಿ ಬಂಧನದೊಂದಿಗೆ ವಿವರಿಸುತ್ತದೆ ? – ಹೇಬಿಯಸ್ ಕಾರ್ಪಸ್.
31. ಯಾವ ರಿಟ್ನ ಅಕ್ಷರಾಂಶ ಅರ್ಥ ” ನಾವು ಅಜ್ಞೆಪಿಸಿದ್ದೇವೆ ” ಎಂದಾಗಿದೆ ? – ಮ್ಯಾಂಡಮಸ್.
32. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ( RTE) ಭಾರತೀಯ ಯಾವ ವಿಧಿಯಲ್ಲಿ ಸೇರಿಸಲ್ಪಟ್ಟಿದೆ ? – ವಿಧಿ 21 (ಎ)
33. ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದು ಯಾವುದು ? – ನ್ಯಾಯಾಂಗ.
34. ಸಂವಿಧಾನದ ಯಾವ ವಿಧಿಯು 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ ? – 45ನೇ ವಿಧಿ.
35. ಸಂವಿಧಾನದ ಯಾವ ಭಾಗವನ್ನು ಐರ್ಲ್ಯಾಂಡ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ ? – ರಾಜ್ಯ ನಿರ್ದೇಶಕ ತತ್ವಗಳು.
36. ಭಾರತ ಸಂವಿಧಾನದ ಯಾವ ಭಾಗವೂ ರಾಜ್ಯ ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ ? – ಭಾಗ 4
37. ರಾಜ್ಯ ನಿರ್ದೇಶಕ ತತ್ವಗಳ ಜಾರಿಯೂ ಹೆಚ್ಚಾಗಿ ಇವರ ಮೇಲೆ ಅವಲಂಬಿಸಿರುತ್ತದೆ ? – ಸರ್ಕಾರಕ್ಕೆ ಲಭ್ಯವಿರುವ ಮೂಲಗಳಿಂದ.
38. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ ? -: ರಾಜ್ಯ ನಿರ್ದೇಶಕ ತತ್ವಗಳ ಮೌಲ್ಯ
39. ಭಾರತ ಸಂವಿಧಾನದಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಉತ್ತೇಜನವು ಇದರಲ್ಲಿ ಒಳಗೊಂಡಿದೆ ? – ರಾಜ್ಯ ನಿರ್ದೇಶಕ ತತ್ವಗಳಿಂದ.
40. ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಂಬಂಧಿಸಿದೆ ? – ರಾಜ್ಯ ನಿರ್ದೇಶಕ ತತ್ವಗಳು.
41. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವ ಸಂಗತಿ ಸಂವಿಧಾನದಲ್ಲಿ ಎಲ್ಲಿ ಉಲ್ಲೇಖಿತವಾಗಿದೆ ? – ಮಾರ್ಗದರ್ಶಿ ತತ್ವಗಳು.
42. ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಗುವಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದಕ್ಕೆ ಏನೆಂದು ಕರೆಯುತ್ತಾರೆ ? – ಮೂಲಭೂತ ಕರ್ತವ್ಯ.
43. ಸಂವಿಧಾನದ ಪ್ರಕಾರ ಈ ಕೆಳಕಂಡ ಯಾವುದು ಮೂಲಭೂತ ಕರ್ತವ್ಯವಲ್ಲ ? – ಕುಟುಂಬವನ್ನು ಪೋಷಿಸುವ ಕರ್ತವ್ಯ.
44. ಈ ಕೆಳಗಿನವುಗಳಲ್ಲಿ ಯಾವುದು ಅಪರಾಧವಾಗಿದೆ ? – ಮೂಲಭೂತ ಕರ್ತವ್ಯಗಳನ್ನು ಪಾಲಿಸದಿರುವುದು .
45. ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಈ ಕೆಳಕಂಡ ಯಾವ ತಿದ್ದುಪಡಿಯಿಂದ ಜಾರಿಗೆ ತರಲಾಗಿದೆ ? – 42ನೇ ತಿದ್ದುಪಡಿ.
46. ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಯಾವ ವರ್ಷ ಅಳವಡಿಸಿಕೊಳ್ಳಲಾಯಿತು ? – 1976 ರಲ್ಲಿ
47. ಮೂಲಭೂತ ಕರ್ತವ್ಯಗಳನ್ನು ಯಾವ ಅನುಚ್ಛೇದದಲ್ಲಿ ಸೇರಿಸಲಾಗಿದೆ ? – ಅನುಚ್ಛೇದ 51A
48. ಭಾರತದ ಪ್ರಥಮ ಪ್ರಜೆ ಯಾರು? – ಭಾರತದ ರಾಷ್ಟ್ರಪತಿಗಳು
49. ರಾಷ್ಟ್ರಪತಿ ಭವನ ಎಲ್ಲಿದೆ ? – ನವದೆಹಲಿ.
50. ರಾಷ್ಟ್ರಪತಿ ನಿವಾಸ ಎಲ್ಲಿದೆ ? – ಶೀಮ್ಲಾ (ಹಿಮಾಚಲ ಪ್ರದೇಶ)