Skip to content
Series -02
Top 30 PC and PSI repeated questions and answers for upcoming exams :
1. ಯಾರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತರಾಗಿದ್ದಾರೆ ?
– ಮಾಸ್ಟರ್ ಹಿರಣ್ಣಯ್ಯ
2. ಪಂಚಾಕ್ಷರಿ ಗವಾಯಿಯವರು ಯಾವ ಸಂಗೀತ ಪರಂಪರೆಗೆ ಸೇರಿದವರು?
– ಹಿಂದುಸ್ತಾನಿ ಸಂಗೀತ
3. ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ದ್ವಿ ಶತಕ ಭಾರಿಸಿದ ವಿಶ್ವದ ಏಕೈಕ ಆಟಗಾರ ಯಾರು?
ರೋಹಿತ್ ಶರ್ಮಾ
4. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಯಾರು ?
– ಅನಿಲ್ ಕುಂಬ್ಳೆ
5. ರೋಹನ್ ಭೂಪಣ್ಣ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
– ಟೆನ್ನಿಸ್
6. ಪಂಚತಂತ್ರ ಕಥೆಗಳನ್ನು ಬರೆದವರು ಯಾರು ?
– ದುರ್ಗಸಿಂಹ
7. ಯಕ್ಷಗಾನ ಯಾವ ರಾಜ್ಯಕ್ಕೆ ಸಂಬಂಧಿಸಿದ ?
– ಕರ್ನಾಟಕಕ್ಕೆ
8. “ಅಂಬಿಕಾ ತನಯದತ್ತ” ಇದು ಯಾರ ಅಂಕಿತನಾಮ ?
– ದ. ರಾ. ಬೇಂದ್ರೆ
9. ಕರ್ನಾಟಕದ ಯಾವ ಜಿಲ್ಲೆಯಲ್ಲಿ ತುಳು ಮಾತನಾಡುತ್ತಾರೆ ?
– ಉಡುಪಿ ಮತ್ತು ದಕ್ಷಿಣ ಕನ್ನಡ
10. “ಪರ್ವ” ಪುಸ್ತಕವನ್ನು ಬರೆದವರು ಯಾರು ?
– ಎಸ್ ಎಲ್ ಭೈರಪ್ಪ
11. ಕನ್ನಡದ ಜನಪ್ರಿಯ ದೂರದರ್ಶನ ಧಾರವಾಹಿ “ಮಾಯಾಮೃಗ” ಇದರ ನಿರ್ದೇಶಕರು ಯಾರು ?
– ಟಿ. ಎನ್ ಸೀತಾರಾಮ್
12. ಕನ್ನಡ ಭಾಷೆಯ ಮೊದಲ ವೃತ್ತ ಪತ್ರಿಕೆ ಯಾವುದು ?
– ಮಂಗಳೂರು ಸಮಾಚಾರ
13. “ಶಬ್ದಮಣಿ ದರ್ಪಣ” ಎಂಬ ಕೃತಿಯನ್ನು ಬರೆದವರು ಯಾರು ?
– ಕೇಶಿರಾಜ
14. ಕನ್ನಡ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿದವರು ಯಾರು ?
– ಬಿ ಎಲ್ ರೈಸ್
15. ಮಂಕುತಿಮ್ಮನ ಕಗ್ಗ ಕೃತಿಯನ್ನು ಬರೆದವರು ಯಾರು ?
– ಡಿ. ವಿ. ಜಿ
16. ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ ?
– ಮಾಸ್ತಿ ವೆಂಕಟೇಶ ಅಯ್ಯಂಗಾರ್
17. “ಊರುಕೇರಿ” ಇದು ಯಾರ ಆತ್ಮಕಥೆಯಾಗಿದೆ ?
– ಸಿದ್ದಲಿಂಗಯ್ಯ
18. ಆದಿಪುರಾಣವನ್ನು ಬರೆದವರು ಯಾರು ?
– ಪಂಪ
19. ಕಥಕಳಿ ನೃತ್ಯ ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
– ಕೇರಳ
20. ಕಥಕ್ ನೃತ್ಯ ಯಾವ ರಾಜ್ಯಕ್ಕೆ ಸಂಬಂಧಿಸಿದಂತೆ ?
– Uttar Pradesh
21. ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ ಯಾವುದು ?
– ಇಂಗ್ಲಿಷ್
22. ತುಳಸಿದಾಸರು ಯಾವ ಭಾಷೆಯಲ್ಲಿ ರಾಮಚರಿತ ಮಾನಸ ವನ್ನು ಬರೆದಿದ್ದಾರೆ ?
– ಬ್ರಜ
23. ಸರ್ವ ದರ್ಶನ ಸಂಗ್ರಹ ಕೃತಿಯನ್ನು ಬರೆದವರು ಯಾರು ?
– ವಿದ್ಯಾರಣ್ಯರು
24. “ಕವಲು” ಕಾದಂಬರಿಯನ್ನು ಬರೆದವರು ಯಾರು ?
– ಎಸ್ ಎಲ್ ಬೈರಪ್ಪ
25. ಕುಸುಮಬಾಲೆ ಕೃತಿಯನ್ನು ಬರೆದವರು ಯಾರು ?
– ದೇವನೂರು ಮಹಾದೇವಪ್ಪ
26. ಭರತೇಶ ವೈಭವ ಕೃತಿಯನ್ನು ಬರೆದವರು ಯಾರು ?
– ರತ್ನಾಕರವರ್ಣಿ
27. “ಆನಂದ ಕಂದ” ಇದು ಯಾರ ಕಾವ್ಯನಾಮ ?
– ಬೆಟಗೆರೆ ಕೃಷ್ಣಶರ್ಮ
28. ಕವಿರಾಜಮಾರ್ಗ ಕೃತಿಯನ್ನು ಬರೆದವರು ಯಾರು ?
– ಶ್ರೀ ವಿಜಯ
29. ದ. ರಾ ಬೇಂದ್ರೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
– ನಾಕುತಂತಿ
30. ” ಸಂಸ್ಕಾರ” ಪುಸ್ತಕವನ್ನು ಬರೆದವರು ಯಾರು ?
– ಯು. ಆರ್ ಅನಂತಮೂರ್ತಿ