Skip to content
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್ 50 ಪ್ರಶ್ನೋತ್ತರಗಳು ;
01. ಸಾಮಾನ್ಯ ಮಾನವನ ರಕ್ತ ಕೆಳಗಿನ ಯಾವ ರೀತಿ ಇರುತ್ತದೆ ?
– ಕ್ಷಾರೀಯ
02. ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ ?
– ಜನವರಿ 25
03. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ?
– ಗಂಗಾವತಿ.
04. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ?
– 1951.
05. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಶೆಡ್ಯೂಲ್ ಗಳಿವೆ ?
– 12
06.” ಆಗಾ ಖಾನ್ ಕಪ್ “ಯಾವ ಕ್ರೀಡೆಗೆ ಸಂಬಂಧಿಸಿರುತ್ತದೆ ?
– ಹಾಕಿ.
07. “ಕಡಲ ತೀರ ಭಾರ್ಗವ “ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ?
– ಶಿವರಾಮ ಕಾರಂತ್.
08. “ಸಾವಿರ ಹಾಡುಗಳ ಸರದಾರ” ಎಂದು ಯಾರನ್ನು ಕರೆಯುತ್ತಾರೆ ?
– ಬಾಳಪ್ಪ ಹುಕ್ಕೇರಿ.
09. ಪ್ರಸಿದ್ಧ ಗಿರಿಧಾಮ” ನಂದಿ ಬೆಟ್ಟ “ಇರುವ ಸ್ಥಳ ಯಾವುದು ?
– ಚಿಕ್ಕಬಳ್ಳಾಪುರ.
10. “ಜಾನಪದ ವಸ್ತು ಸಂಗ್ರಹಾಲಯ” ಇರುವ ಸ್ಥಳ ಯಾವುದು ?
– ಮೈಸೂರು.
11. ಕೇಂದ್ರ ಶಾಸನ ಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಅಂತರ ಎಷ್ಟು ?
– 06 ತಿಂಗಳು
12. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ?
– ಮೀರಾ ಕುಮಾರ್.
13. “ಕಪಿಲ ನದಿಯ” ಇನ್ನೊಂದು ಹೆಸರೇನು ?
– ಕಬಿನಿ
14. ಭೀಮಾ ನದಿಯು ಎಲ್ಲಿ ಉಗಮಗೊಳ್ಳುತ್ತದೆ ?
– ಭೀಮ ಶಂಕರ.
15. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
– ಪುರಂದರದಾಸರು.
16.” ಮ್ಯಾಂಚೆಸ್ಟರ್ “ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ?
– ಜವಳಿ ಉದ್ಯಮ.
17. ಸಂವಿಧಾನಾತ್ಮಕ ಪರಿಹಾರ ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ?
– 32 ನೆ ವಿಧಿ
18. “BRICS “ಬ್ರಿಕ್ಸ್ ದೇಶಗಳು ಯಾವುವು ?
– ಬ್ರೆಜಿಲ್, ರಷ್ಯಾ, ಭಾರತ ,ಚೀನಾ ,ದಕ್ಷಿಣ ಆಫ್ರಿಕಾ
19. “ಗ್ರಂಥಿಗಳ ರಾಜ” ಎಂದು ಯಾವ ಗ್ರಂಥಿಗೆ ಕರೆಯುತ್ತಾರೆ ?
– ಪಿಟ್ಯುಟರಿ ಗ್ರಂಥಿ.
20. ನಿರ್ವಾತದಲ್ಲಿ ಬೆಳಕಿನ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ?
– 3 ಲಕ್ಷ ಕಿಲೋಮೀಟರ್
21. ಸಮುದ್ರದ ಆಳವನ್ನು ಯಾವ ಸಾಧನದಿಂದ ಅಳೆಯುತ್ತಾರೆ ?
– ಪ್ಯಾಥೋಮೀಟರ್.
22. ಹೊಯ್ಸಳರ ರಾಜಧಾನಿಯಾದ “ದ್ವಾರಸಮುದ್ರದ “ಈಗಿನ ಹೆಸರೇನು ?
– ಹಳೇಬೀಡು
23. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ?
– ವಿಶ್ವಸಂಸ್ಥೆ
24. ಮೇಡಂ “ಮೇರಿ ಕ್ಯೂರಿಗೆ” ಎರಡು ಬಾರಿ ನೊಬೆಲ್ ಪಾರಿತೋಷಕ ದೊರಕಿತು, ಆ ವರ್ಷಗಳು ಯಾವುವು ?
– 1903 ಮತ್ತು 1911
25. ಜರ್ಮನಿಯ ಪಾರ್ಲಿಮೆಂಟಿನ ಹೆಸರೇನು ?
– ಬುಂಡೆ ಸ್ಟಾಗ್.
26. ಪ್ರಸ್ತುತ ನಮ್ಮ ಸಂವಿಧಾನವು ಎಷ್ಟು ವಿಧಿಗಳನ್ನು ಹೊಂದಿದೆ ?
– 395
27. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವಾಗ ನಡೆಯಿತು ?
– 9ನೇ ಡಿಸೆಂಬರ್ 1946
28. ಸಂವಿಧಾನ ರಚನೆಯ ಸಮಯದಲ್ಲಿ” ಮೂಲಭೂತ ಹಕ್ಕುಗಳ ಸಮಿತಿ” ಅಧ್ಯಕ್ಷರು ಯಾರು ?
– ಸರ್ದಾರ್ ವಲ್ಲಭಬಾಯಿ ಪಟೇಲ್
29. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು ?
– ರಾಜ ಹರಿಶ್ಚಂದ್ರ.
30. ಜಲಿಯನ್ ವಾಲಾಬಾಗ್ ಸಭೆಯ ಮೇಲೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು ?
– ಜನರಲ್ ಡಯರ್
31. 1857ರ ಭಾರತ ಸ್ವಾತಂತ್ರ ಸಂಗ್ರಾಮ ಎಂಬ ಗ್ರಂಥವನ್ನು ಬರೆದವರು ಯಾರು ?
– ವಿ. ಡಿ ಸಾವರ್ಕರ್.
32. ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ ಯಾವುದು?
– ಚಿನ್ನ
33. ಬಟ್ಟೆ ತೊಳೆಯುವ ಯಂತ್ರದಲ್ಲಿ ಬಟ್ಟೆ ಬೇಗ ಒಣಗಲು ಕಾರಣ ಏನು ?
– ಕೇಂದ್ರಪಗಾಮಿ ಬಲ ಅಥವಾ ಕೇಂದ್ರಾಭಿಮುಖ ಬಲ
34. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎಂದು ಕರೆಯುತ್ತಾರೆ ?
– ಗೋಕಾಕ್ ಜಲಪಾತ.
35. ಕರ್ನಾಟಕದ ಕಾಶ್ಮೀರ ಎಂದು ಯಾವ ನಗರವನ್ನು ಕರೆಯುತ್ತಾರೆ ?
– ಕೊಡಗು
36. ಸಹ್ಯಾದ್ರಿ ಬೆಟ್ಟಗಳು ಎಲ್ಲಿ ಕಂಡು ಬರುತ್ತವೆ ?
– ಪಶ್ಚಿಮ ಘಟ್ಟಗಳಲ್ಲಿ.
37. ಕಾಫಿ ನಾಡು ಎಂದು ಯಾವ ನಗರವನ್ನು ಕರೆಯುತ್ತಾರೆ ?
– ಚಿಕ್ಕಮಗಳೂರು
38. “ಆನಂದ ಕಂದ” ಇದು ಯಾರ ಕಾವ್ಯನಾಮ ?
– ಬೆಟಗೇರಿ ಕೃಷ್ಣಶರ್ಮ.
39. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
– ಉತ್ತರ ಕನ್ನಡ
40. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು ?
– 35 ವರ್ಷಗಳು
41. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು ?
– ಅರಿಷ್ಟ ನೇಮಿ
42. ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಯಾವ ವಂಶದ ಶಾಸನವಾಗಿದೆ ?
– ಕದಂಬರು.
43. ಬುದ್ಧನು ತನ್ನ ಮೊದಲನೇ ಬೋಧನೆಯನ್ನು ಎಲ್ಲಿ ಮಾಡಿದನು ?
– ಸಾರಾನಾಥ
44. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ವಲಯಗಳಿವೆ ?
– 7
45. ಕನ್ನಡದ ಮೊದಲನೆಯ “ಟಾಕಿ “ಚಿತ್ರ ಯಾವುದು ?
– ಸತಿ ಸುಲೋಚನ
46. ಕರ್ನಾಟಕ ರಾಜ್ಯ ಮೀಸಲು ಪಡೆಯ ಮುಖ್ಯಸ್ಥರು ಯಾರು ?
– ADGP (ಎಡಿಜಿಪಿ)
47. ಆಹಾರದೊಳಗಿನ ಅಯೋಡಿನ್ ಕೊರತೆಯಿಂದ ಯಾವ ಕಾಯಿಲೆ ಬರುತ್ತದೆ ?
– ಸರಳ ಗಾಯಿಟರ್
48. ಯಾವ ಉಷ್ಣಾಂಶದಲ್ಲಿ ನೀರಿನ ಸಾಂದ್ರತೆಯು ಗರಿಷ್ಠವಾಗಿರುತ್ತದೆ ?
– 4’C
49. ಬ್ರೈಲ್ ರಸ ಯಾವುದರಿಂದ ಸ್ರವಿಕೆಯಾಗುತ್ತದೆ ?
– ಲಿವರ್
50. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು ?
– ಎಡ್ವಿನ್ ಆಲ್ಡ್ರಿನ್